ಮೆಟ್ರೋ ಕಾಮಗಾರಿ ವೇಳೆ ಕಾರ್ಮಿಕನ ದುರ್ಮರಣ! 

ಮೆಟ್ರೋ 2 ನೇ ಹಂತದ ವ್ಯಾಪ್ತಿಗೆ ಬರುವ ಪಟ್ಟಣಗೆರೆ ಮೆಟ್ರೋ ನಿಲ್ದಾಣದಲ್ಲಿ ಎಸ್ಕಲೇಟರ್ ಅಳವಡಿಕೆ ಕಾಮಗಾರಿ ವೇಳೆ 56 ವರ್ಷದ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ. 
ಮೆಟ್ರೋ ಕಾಮಗಾರಿ ವೇಳೆ ಕಾರ್ಮಿಕನ ದುರ್ಮರಣ!
ಮೆಟ್ರೋ ಕಾಮಗಾರಿ ವೇಳೆ ಕಾರ್ಮಿಕನ ದುರ್ಮರಣ!

ಬೆಂಗಳೂರು: ಮೆಟ್ರೋ 2 ನೇ ಹಂತದ ವ್ಯಾಪ್ತಿಗೆ ಬರುವ ಪಟ್ಟಣಗೆರೆ ಮೆಟ್ರೋ ನಿಲ್ದಾಣದಲ್ಲಿ ಎಸ್ಕಲೇಟರ್ ಅಳವಡಿಕೆ ಕಾಮಗಾರಿ ವೇಳೆ 56 ವರ್ಷದ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ. 

ಮೈಸೂರು ರಸ್ತೆ-ಕೆಂಗೇರಿ ಲೈನ್ ನಲ್ಲಿ ಪಟ್ಟಣಗೆರೆ ಮೆಟ್ರೋ ನಿಲ್ದಾಣವಿದೆ. ಎಸ್ಕಲೇಟರ್ ಅಳವಡಿಕೆ ವೇಳೆ ನೆಟ್ ಕಟ್ಟಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತಾದರೂ ಎಲೆಕ್ಟ್ರಿಕಲ್ ಜಾಕ್ ಹ್ಯಾಮರ್ ಬಿದ್ದ ಪರಿಣಾಮ ನೆಟ್ ಹರಿದಿದ್ದು ಕಾಮಗಾರಿ ನಡೆಯುತ್ತಿದ ಪ್ರದೇಶದಿಂದ 7-8 ಮೀಟರ್ ಕೆಳಗೆ ಬಿದ್ದು ಕಾರ್ಮಿಕ ಮೃತಪಟ್ಟಿದ್ದಾರೆ. 

ಮೃತ ದುರ್ದೈವಿ ಆಂಧ್ರಪ್ರದೇಶದ ಶ್ರೀಕಾಕುಳಂ ನ ಮೂಲದವರಾಗಿದ್ದು, M/s ILFS ನಲ್ಲಿ ಕೆಲಸ ಮಾಡುತ್ತಿದ್ದರು. ಘಟನೆ ನಡೆದ ಬೆನ್ನಲ್ಲೇ ಆತನನ್ನು ಹೈ-ಟೆಕ್ ಆಸ್ಪತ್ರೆಗೆ ದಾಖಲಿಸಲಾಯಿತು ನಂತರ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಬದುಕಿ ಉಳಿಯಲಿಲ್ಲ. 

ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗುತ್ತಿಗೆದಾರರು ತನ್ನ ಕೆಲಸದವರಿಗೆ ವಿಮೆ ಮಾಡಿಸಿದ್ದು, ಏಜೆನ್ಸಿಯಿಂದ ಪರಿಹಾರ ಮೊತ್ತ ಲಭ್ಯವಾಗಲಿದೆ ಎಂದು ಬಿಎಂಆರ್ ಸಿಎಲ್ ಎಂಡಿ ಅಜಯ್ ಸೇಠ್ ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com