ದೇಶದ್ರೋಹ ಪ್ರಕರಣ:  ಬಂಧಿತ ಕಾಶ್ಮೀರಿ ವಿದ್ಯಾರ್ಥಿಗಳನ್ನು ಭೇಟಿಯಾದ ಬೆಂಗಳೂರು ವಕೀಲರು

ಬೆಂಗಳೂರು ವಕೀಲರ ಸಂಘದ ವಕೀಲರು ಶುಕ್ರವಾರ, ದೇಶದ್ರೋಹ ಪ್ರಕರಣದಲ್ಲಿ ಹಿಂಡಲಗಾ ಜೈಲಿನಲ್ಲಿರುವ ಕಾಶ್ಮೀರದ ಮೂರು ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಭೇಟಿ ಮಾಡಿದರು. 
ದೇಶದ್ರೋಹ ಪ್ರಕರಣ:  ಬಂಧಿತ ಕಾಶ್ಮೀರಿ ವಿದ್ಯಾರ್ಥಿಗಳನ್ನು ಭೇಟಿಯಾದ ಬೆಂಗಳೂರು ವಕೀಲರು
ದೇಶದ್ರೋಹ ಪ್ರಕರಣ: ಬಂಧಿತ ಕಾಶ್ಮೀರಿ ವಿದ್ಯಾರ್ಥಿಗಳನ್ನು ಭೇಟಿಯಾದ ಬೆಂಗಳೂರು ವಕೀಲರು
Updated on

ಬೆಳಗಾವಿ: ಬೆಂಗಳೂರು ವಕೀಲರ ಸಂಘದ ವಕೀಲರು ಶುಕ್ರವಾರ, ದೇಶದ್ರೋಹ ಪ್ರಕರಣದಲ್ಲಿ ಹಿಂಡಲಗಾ ಜೈಲಿನಲ್ಲಿರುವ ಕಾಶ್ಮೀರದ ಮೂರು ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಭೇಟಿ ಮಾಡಿದರು. 

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ 'ಪಾಕಿಸ್ತಾನ ಜಿಂದಾಬಾದ್ ' ಎಂದು ಘೋಷಣೆಯನ್ನೊಳಗೊಂಡ ವಿಡಿಯೋವನ್ನು ಹರಿಬಿಟ್ಟಿದ್ದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳನ್ನು  ಅಮಿರ್, ನಾಸಿರ್ ಹಾಗೂ ತಾಲಿಬ್ ಎಂದು ಗುರುತಿಸಲಾಗಿದೆ. 

ವಕೀಲರು ಬಂಧಿತರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ. 

ಇತ್ತೀಚೆಗೆ ಹೈಕೋರ್ಟ್, ಬಂಧಿತರ ಪರ ವಾದ ಮಂಡಿಸಲು ನಿರಾಕರಿಸಿದ ಹುಬ್ಬಳ್ಳಿ-ಧಾರವಾಡ ವಕೀಲರ ಸಂಘದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು. ನಂತರ, ಸಂಘ ಈ ನಿರ್ಣಯವನ್ನು ಹಿಂಪಡೆದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com