ಚಾಮರಾಜನಗರ: ವಿದ್ಯುತ್ ತಂತಿಬೇಲಿ ಸ್ಪರ್ಶ, ಎರಡು ಕಾಡನೆಗಳ ದುರ್ಮರಣ

ಕಬ್ಬಿನ ಗದ್ದಗೆ ಹಾಕಿದ್ದ ವಿದ್ಯುತ್‌ ತಂತಿ ತುಳಿದು ಜೋಡಿ ಆನೆಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಆನೆಗಳ ದಾರುಣ ಸಾವು
ಆನೆಗಳ ದಾರುಣ ಸಾವು
Updated on

ಚಾಮರಾಜನಗರ: ವಿದ್ಯುತ್ ಬೇಲಿ ತುಳಿದು ಕಾಡಾನೆಗಳೆರಡು ಸಾವನ್ನಪ್ಪಿರುವ ದಾರುಣ ಘಟನೆ ಕರ್ನಾಟಕ-ತಮಿಳುನಾಡು ಗಡಿ ಭಾಗದ ಕರುಳವಾಡಿ ಗ್ರಾಮದಲ್ಲಿ ಇಂದು ಬೆಳಗಿನ ಜಾವ ನಡೆದಿದೆ.

ಆಹಾರ ಅರಸಿ ಬಂದ ಆನೆಗಳು ಜಮೀನಿಗ ಅಳವಡಿಸಿದ್ದ ವಿದ್ಯುತ್ ಬೇಲಿ ಸ್ಪರ್ಷಿಸುತ್ತಿದ್ದಂತೆಯೇ ಮೃತಪಟ್ಟಿವೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಈ ಎರಡೂ ಗಂಡಾನೆಗಳು 30 ರಿಂದ 40ರ ವಯೋಮಾನದವು ಎಂದು ಅಂದಾಜಿಸಲಾಗಿದೆ. ಶನಿವಾರ ಬೆಳಿಗ್ಗೆ ಗ್ರಾಮಸ್ಥರಿಗೆ ಎರಡೂ ಆನೆಗಳ ಮೃತ ದೇಹಗಳು ಕಂಡುಬಂದಿವೆ.
 
ಘಟನಾ ಸ್ಥಳಕ್ಕೆ ತಮಿಳುನಾಡಿನ ಸತ್ಯಮಂಗಲಂ ಜಿಲ್ಲೆಯ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com