ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಯುವತಿಯರ ಜೊತೆ ಅನುಚಿತ ವರ್ತನೆ: ನಾಲ್ವರ ಬಂಧನ

ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಕೆಲ ಕಾಮುಕರು ಕೀಟಲೆ ಮಾಡಿದ್ದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದವು.  ಈ ವಿಡಿಯೋಗಳನ್ನು ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಕೆಲ ಕಾಮುಕರು ಕೀಟಲೆ ಮಾಡಿದ್ದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದವು.  ಈ ವಿಡಿಯೋಗಳನ್ನು ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿತ್ತು.

ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇಷ್ಟೇ ಅಲ್ಲದೇ ಮತ್ತೊಂದು ಪ್ರಕರಣದಲ್ಲೂ ಮತ್ತಿಬ್ಬರು ಕಾಮುಕರನ್ನು ಅಶೋಕ್ ನಗರ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಕೃಷ್ಣಗಿರಿಯ ಅತಿಕ್ ಮತ್ತು ಶಿವಕುಮಾರ್ ಬಂಧಿತ ಕಾಮುಕರು. ಈ ಇಬ್ಬರು ಯುವಕರು ಬೆಂಗಳೂರಿನ ಸ್ನೇಹಿತರ ರೂಂಗೆ ಬಂದಿದ್ದರು. ಎಂ.ಜಿ ರೋಡ್‍ನಲ್ಲಿ ಮಸ್ತಿ ಜೊತೆಗೆ ಕಾಮದಾಟ ಆಡಲು ಹೋಗಿ ಚಪ್ಪಲಿ ಏಟು ತಿಂದಿದ್ದರು. ಉಳಿದಂತೆ ತಲೆಮರೆಸಿಕೊಂಡಿರುವ ನಾಲ್ವರಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಪೊಲೀಸರು ಚಾಪೆ ಕೆಳಗೆ ನುಗ್ಗಿ ಕಾಮುಕರ ವಿರುದ್ಧ ಅದೆಷ್ಟೇ ಕ್ರಮ ಕೈಗೊಂದರೂ ಕಾಮುಕರು ರಂಗೋಲಿ ಕೆಳಗೆ ನುಗ್ಗಿ ಕಾಡುತ್ತಾರೆ ಎನ್ನುವುದಕ್ಕೆ ನಿನ್ನೆ ನ್ಯೂ ಇಯರ್ ಸೆಲಬ್ರೇಷನ್ ವೇಳೆ ನಡೆದ ಘಟನೆಗಳೇ ಸಾಕ್ಷಿ. ಹೊಸ ವರ್ಷದ ಪಾರ್ಟಿ ವೇಳೆ ಯುವತಿಯರ ಜೊತೆಗೆ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿತ್ತು.

ಈ ಬಗ್ಗೆ ತಕ್ಷಣ ಎಚ್ಚೆತ್ತುಕೊಂಡ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, ಕಾಮುಕರ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಳ್ಳುವುದು. ಕಿರುಕುಳಕ್ಕೆ ಒಳಗಾದವರು ಯಾವುದೇ ರೀತಿಯ ದೂರು ನೀಡಿಲ್ಲ. ಆದರೂ ನಾವೇ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳುತ್ತೇವೆ. ಕಾಮುಕರಿಗೆ ತಕ್ಕ ಪಾಠ ಆಗಬೇಕು ಎಂದು ಹೇಳಿದ್ದರು.

ವ್ಯಕ್ತಿಯೊಬ್ಬ ಸೆಲೆಬ್ರೇಷನ್ ಮಾಡುವುದನ್ನು ಬಿಟ್ಟು ಹುಡುಗಿಯ ಮೈ ಮುಟ್ಟಿ ಮಜಾ ತಗೆದುಕೊಳ್ಳುತ್ತಿದ್ದ. ಸಂಜೆ ವೇಳೆಗೆ ಪೊಲೀಸರ ಕೈಗೆ ಚಪ್ಪಲಿ ಏಟು ತಿಂದ ಅತಿಕ್ ಮತ್ತು ಶಿವಕುಮಾರ್ ಸಿಕ್ಕಿಕೊಂಡಿದ್ದಾರೆ. ಇನ್ನೂ ನಾಲ್ತು ಮಂದಿಯಯನ್ನು ಬಂಧಿಸಲು ಪೋಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com