ಗದಗ್ ನಲ್ಲಿ ವಿಶಿಷ್ಟ ಮದುವೆ: ಹಿಂದೂ, ಮುಸ್ಲಿಂ, ಕ್ರೈಸ್ತ ಮುಖಂಡರು ಸಮ್ಮುಖದಲ್ಲಿ ವಿವಾಹ ಬಂಧನಕ್ಕೊಳಗಾದ ಜೋಡಿ 

ಇದೊಂದು ವಿಶಿಷ್ಟ ರೀತಿಯ ಮದುವೆ. ಅಲ್ಲಿ ಪುರೋಹಿತರಿರಲಿಲ್ಲ, ಮಂತ್ರ ಘೋಷಗಳಿರಲಿಲ್ಲ. ಯಾವುದೂ ಇರಲಿಲ್ಲ. ಬ್ಯಾಂಡ್ ಗಳ ಸದ್ದಿಲ್ಲ, ಅಲ್ಲಿದ್ದದ್ದು ಹಿಂದೂ-ಮುಸ್ಲಿಂ ಮತ್ತು ಕ್ರಿಸ್ತಿಯನ್ ಧರ್ಮದ ಮುಖಂಡರು ನೂತನ ಜೋಡಿಗೆ ಮುನ್ನುಡಿಯನ್ನು ಹೇಳಿಕೊಟ್ಟರು. ನಂತರ ಪುಸ್ತಕವೊಂದನ್ನು ಬಿಡುಗಡೆ ಮಾಡಲಾಯಿತು. 
ವಿವಾಹ ಬಂಧನಕ್ಕೊಳಗಾದ ಜೋಡಿ
ವಿವಾಹ ಬಂಧನಕ್ಕೊಳಗಾದ ಜೋಡಿ

ಗದಗ: ಇದೊಂದು ವಿಶಿಷ್ಟ ರೀತಿಯ ಮದುವೆ. ಅಲ್ಲಿ ಪುರೋಹಿತರಿರಲಿಲ್ಲ, ಮಂತ್ರ ಘೋಷಗಳಿರಲಿಲ್ಲ. ಯಾವುದೂ ಇರಲಿಲ್ಲ. ಬ್ಯಾಂಡ್ ಗಳ ಸದ್ದಿಲ್ಲ, ಅಲ್ಲಿದ್ದದ್ದು ಹಿಂದೂ-ಮುಸ್ಲಿಂ ಮತ್ತು ಕ್ರಿಸ್ತಿಯನ್ ಧರ್ಮದ ಮುಖಂಡರು ನೂತನ ಜೋಡಿಗೆ ಮುನ್ನುಡಿಯನ್ನು ಹೇಳಿಕೊಟ್ಟರು. ನಂತರ ಪುಸ್ತಕವೊಂದನ್ನು ಬಿಡುಗಡೆ ಮಾಡಲಾಯಿತು.


ಬಸವರಾಜ್ ಬೈಯಾಲಿ ಮತ್ತು ಸಂಗೀತಾ ಗುಡಿಮನಿ ಗದಗ್ ನ ಅಂಬೇಡ್ಕರ್ ಭವನದಲ್ಲಿ ಸತಿ-ಪತಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಭೈರನಹಟ್ಟಿಯ ಶಾಂತಲಿಂಗ ಸ್ವಾಮೀಜಿ, ಮೌಲ್ವಿ ಶಬ್ಬೀರ್ ಮೌಲಾನಾ ಮತ್ತು ಫಾದರ್ ಎಬಿನಜೊರ್ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ನೂತನ ವಧೂ ವರರಿಗೆ ಶುಭ ಹಾರೈಸಿದರು. ಮದುವೆ ಶಾಸ್ತ್ರ ಮುಗಿದ ಮೇಲೆ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು. 


ಬಸವರಾಜ್ ಮತ್ತು ಸಂಗೀತಾ ಅವರು ತಮ್ಮ ವಿವಾಹವನ್ನು ವಿನೂತನವಾಗಿ ಮಾಡಬೇಕೆಂದು ಯೋಚಿಸುತ್ತಿದ್ದಾಗ ಹಿರಿಯ ಬರಹಗಾರ ಬಸವರಾಜ್ ಸುಳಿಬಾವಿ ಅವರನ್ನು ಸಂಪರ್ಕಿಸಿ ಮದುವೆಯನ್ನು ಸರಳವಾಗಿ ನಡೆಸಬೇಕೆಂದು ನಿರ್ಧರಿಸಿದರು.


ಬುದ್ಧ ಮತ್ತು ಬಸವಣ್ಣನ ಮೂರ್ತಿ ಮುಂದೆ ವಧೂ-ವರರಿಬ್ಬರೂ ನಿಂತು ಮುನ್ನುಡಿ ಹೇಳಿಕೊಂಡರು. ನಂತರ ವಚನವನ್ನು ಪಠಿಸಿದರು. ಅತಿಥಿಗಳು ವಧೂ ವರರನ್ನು ಅಕ್ಷತೆ ಬದಲಾಗಿ ಹೂವಿನಿಂದ ಆಶೀರ್ವದಿಸಿ ಊಠ ಮಾಡಿಕೊಂಡು ಹೋದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com