ರಾಜ್ಯಕ್ಕೆ ಹೆಚ್ಚುವರಿಯಾಗಿ ರೂ.1,869 ಕೋಟಿ ಪ್ರವಾಹ ಪರಿಹಾರ ಸಿಗಲಿದೆ: ಸಿಎಂ ಯಡಿಯೂರಪ್ಪ ಸ್ಪಷ್ಟನೆ
ಬೆಂಗಳೂರು: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಹೆಚ್ಚುವರಿಯಾಗಿ ರೂ.1,869 ಕೋಟಿ ಪ್ರವಾಹ ಪರಿಹಾರವಾಗಿ ಸಿಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರ ಪ್ರವಾಹ ಪರಿಹಾರ ಬಿಡುಗಡೆ ಮಾಡಿದ ಬಳಿಕ ಗೃಹ ಸಚಿವಾಲಯ ಉನ್ನತ ಮಟ್ಟದ ಸಮಿತಿ ಪ್ರವಾಹ ಪರಿಹಾರದ ಕುರಿತು ಮಾಹಿತಿ ನೀಡಿದ್ದು, ರಾಜ್ಯಕ್ಕೆ ರೂ.1,869 ಕೋಟಿ ಹೆಚ್ಚುವರಿಯಾಗಿ ಸಿಗಲಿದೆ. 2019ರ ಅಕ್ಟೋಬರ್ ತಿಂಗಳಿನಲ್ಲಿ ರೂ.1,200 ಕೋಟಿ ನೀಡುವುದಾಗಿ ಕೇಂದ್ರ ಘೋಷಣೆ ಮಾಡಿತ್ತು. ಇದರಂತೆ ಮೊದಲ ಕಂತಿನಲ್ಲಿ ರೂ.1,869 ಕೋಟಿ ಬಿಡುಗಡೆ ಮಾಡಿತ್ತು. ಬಳಿಕ ಎರಡನೇ ಹಂತದಲ್ಲಿ ರೂ.669.85 ಕೋಟಿ ನೀಡಿದೆ. ರೂ.1,869 ಕೋಟಿ ಬಿಡುಗಡೆಯನ್ನು ಮುಂಗವಾಡಿ ಪಾವತಿ ಮಾಡಿದೆ ಎಂಬ ಘೋಷಣೆ ಎಲ್ಲರಲ್ಲೂ ಗೊಂದಲ ಮೂಡುವಂತೆ ಮಾಡಿದೆ ಎಂದು ತಿಳಿಸಿದೆ
ಇದೀಗ ಗೊಂದಲಗಳಿಗೆ ತೆರೆ ಎಳೆದಿರುವ ಯಡಿಯೂರಪ್ಪ ಅವರು, ರೂ.3,070 ಕೋಟಿಗಳ ಪೈಕಿ ರಾಜ್ಯಕ್ಕೆಕೇಂದ್ರ ಸರ್ಕಾರ ರೂ.669 ಕೋಟಿ ಬಿಡುಗಡೆ ಮಾಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಣ ಸೂಕ್ತ ಸಂವಹನಗಳು ಇಲ್ಲದ ಕಾರಣ ಇಂತಹ ಗೊಂದಲಗಳು ಮೂಡಿವೆ. ಮೊದಲಿಗೆ ಕೇಂದ್ರ ಸರ್ಕಾರ ರೂ.1,200 ಕೋಟಿ ಬಿಡುಗಡೆ ಮಾಡಿತ್ತು. ಇದೀಗ ರೂ.1,869 ಕೋಟಿ ಬಿಡುಗಡೆ ಮಾಡಿದೆ ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ಯಡಿಯೂರಪ್ಪ ಅವರು ಕೇಂದ್ರ ಸರ್ಕಾರ ಒಟ್ಟಾರೆಯಾಗಿ ರೂ.1,869 ಕೋಟಿ ಬಿಡುಗಡೆ ಮಾಡಿದೆ ಎಂದು ಹೇಳಿದ್ದರು. 2019ರ ಅಕ್ಟೋಬರ್ ತಿಂಗಳಿನಲ್ಲಿ ಅಂಗೀಕಾರಗೊಂಡಿದ್ದ ಹಣ ಕೇವಲ ಮುಂಗಡ ಹಣವಷ್ಟೇ ಎಂದಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ