ಮಂಗಳೂರು: ನೇತ್ರಾವತಿ ನದಿಯಲ್ಲಿ ದೋಣಿ ಮಗುಚಿ ಯುವತಿ ಸಾವು
ಮಂಗಳೂರು: ನೇತ್ರಾವತಿ ನದಿಯಲ್ಲಿ ದೋಣಿ ಮಗುಚಿದ ಪರಿಣಾಮ ಯುವತಿಯೊಬ್ಬಳು ಮೃತಪಟ್ತ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಉಳ್ಲಾಲ ಸಮೀಪದ ಉಳಿಯಲ್ಲಿ ನಡೆದಿದೆ.
ಮೃತ ಯುವತಿಯನ್ನು ಮಂಜೇಶ್ವರ ಮಿಯಪದವು ನಿವಾಸಿ ರೆನಿಟಾ (18) ಎಂದು ಗುರುತಿಸಲಾಗಿದ್ದು ಇವರೊಡನೆ ಪ್ರಯಾಣಿಸುತ್ತಿದ್ದ ಲಬುರಗಿ ಜಿಲ್ಲೆಯ ನಿವಾಸಿ ಕಾವ್ಯ (20) ಸ್ಥಿತಿ ಗಂಭೀರವಾಗಿದೆ.
ಒಟ್ತು ಆರು ಮಂದಿ ದೋಣಿಯಲ್ಲಿ ಪ್ರಯಾಣಿಸುತ್ತಿದ್ದು ಉಳಿದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯ ಚರ್ಚ್ ನ ವಾರ್ಷಿಕೋತ್ಸವಕ್ಕೆಂದು ತನ್ನ ಸಂಬಂಧಿಗಳ ಮನೆಗೆ ಯುವತಿ ತನ್ನ ಸ್ನೇಹಿತರೊಂದಿಗೆ ಆಗಮಿಸಿದ್ದಳು ಎನ್ನಲಾಗಿದ್ದು ಭಾನುವಾರ ದೋಣಿಯಲ್ಲಿ ಉಳಿಯ ದ್ವೀಪಕ್ಕೆ ತೆರಳಿದ್ದಾರೆ. ಈ ವೇಳೆ ದೋಣಿ ಆಯತಪ್ಪಿ ಪಲ್ಟಿಯಾಗಿದ್ದು ಅಪಘಾತ ಸಂಭವಿಸಿದೆ.ದೋಣಿ ನಡೆಸುವವನ ಜಾಗರೂಕತೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ.
ಗಂಬೀರ ಸ್ಥಿತಿಯಲ್ಲಿರುವ ಕಾವ್ಯಾ ಅವರನ್ನು ಸಮೀಪ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಂಗಳೂರಿನ ಉಳ್ಳಾಲ ಠಾಣಾ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ