ಮುಧೋಳ ಬೈಪಾಸ್ ರಸ್ತೆ ಕಾಮಗಾರಿಗೆ ಡಿಸಿಎಂ ಚಾಲನೆ
ರಾಜ್ಯ
ಮುಧೋಳ ಬೈಪಾಸ್ ರಸ್ತೆ ಕಾಮಗಾರಿಗೆ ಡಿಸಿಎಂ ಕಾರಜೋಳ ಚಾಲನೆ
ಜಿರಗಾಳ ವರೆಗೆ ಒಟ್ಟು ೧೦.೨೦ ಕಿ.ಮೀ ಉದ್ದ ಹಾಗೂ ೪೫ ಮೀಟರ ಅಗಲವಿರುವ ಬೈಪಾಸ್ ರಸ್ತೆ ಕಾಮಗಾರಿಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಚಾಲನೆ ನೀಡಿದರು.
ಬಾಗಲಕೋಟೆ: ಜಿರಗಾಳ ವರೆಗೆ ಒಟ್ಟು ೧೦.೨೦ ಕಿ.ಮೀ ಉದ್ದ ಹಾಗೂ ೪೫ ಮೀಟರ ಅಗಲವಿರುವ ಬೈಪಾಸ್ ರಸ್ತೆ ಕಾಮಗಾರಿಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಚಾಲನೆ ನೀಡಿದರು.
ಶನಿವಾರ ಜೀರಗಾಳ ಗ್ರಾಮದ ಹತ್ತಿರ ಬೈಪಾಸ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ರಸ್ತೆ ನಿರ್ಮಾಣಕ್ಕೆ ಒಟ್ಟು ೧೧೦.೧೭ ಎಕರೆ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಅದಕ್ಕಾಗಿ ಒಟ್ಟು ೨೫.೫೦ ಕೋಟಿ ರೂ.ಗಳ ಪರಿಹಾರ ನೀಡಲಾಗುತ್ತಿದೆ ಎಂದರು.
ಬೈಪಾಸ್ ರಸ್ತೆಗೆ ಒಟ್ಟು ೭೧ ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ೬ ತಿಂಗಳಲ್ಲಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗಯವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯೆ ರತ್ನಾ ತಳೆವಾಡ, ನಿವೃತ್ತ ಸೇನಾಧಿಕಾರಿ ರಮೇಶ ಹಲಗಲಿ, ಮುಖ್ಯ ಅಭಿಯಂತರ ಕೆ.ರಾಜೇಶ, ಲೋಕೋಪ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಪ್ರಶಾಂತ, ಇಂಜಿನೀಯರಗಳಾದ ಎ.ವಾಯ್.ಪವಾರ, ಶಿವಾನಂದ ನಾಯಕ ಸೇರಿದಂತೆ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ