ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಎ.ಎಂ. ಪ್ರಸಾದ್ ಮುಂದಿನ ರಾಜ್ಯ ಪೊಲೀಸ್ ಮಹಾನಿರ್ದೇಶಕ?

ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಎ.ಎಂ ಪ್ರಸಾದ್ ಮುಂದಿನ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗುವ ಸಾಧ್ಯತೆ ಇದೆ. ಪ್ರಸಾದ್ 1985ರ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದಾರೆ.
ಹಿರಿಯ ಐಪಿಎಸ್ ಅಧಿಕಾರಿ ಎಎಂ ಪ್ರಸಾದ್
ಹಿರಿಯ ಐಪಿಎಸ್ ಅಧಿಕಾರಿ ಎಎಂ ಪ್ರಸಾದ್

ಬೆಂಗಳೂರು: ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಎ.ಎಂ ಪ್ರಸಾದ್ ಮುಂದಿನ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗುವ ಸಾಧ್ಯತೆ ಇದೆ. ಪ್ರಸಾದ್ 1985ರ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದಾರೆ.

ಎ.ಎಂ. ಪ್ರಸಾದ್ ಹಾಗೂ ಸಿಐಡಿ ಡಿಜಿಪಿ ಪ್ರವೀಣ್ ಸೂದ್  ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಪೊಲೀಸ್ ಮಹಾನಿರ್ದೇಶಕ ಸ್ಥಾನದ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಇಬ್ಬರೂ ಅಧಿಕಾರಿಗಳು ಸಮಾನವಾಗಿ ಉತ್ತಮ ಅವಕಾಶವನ್ನು ಹೊಂದಿದ್ದಾರೆ ಆದರೆ ಸಿಎಂ ಅವರು ಹಿರಿತನದ ಮೂಲಕ ಹುದ್ದೆಯನ್ನು ನಿಯೋಜಿಸುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಈ ವರ್ಷದ ಅಕ್ಟೋಬರ್ 31 ರಂದು ನಿಗದಿತ ಮೇಲ್ವಿಚಾರಣೆಯನ್ನು ಮೀರಿ ವಿಸ್ತೃತ ಅಧಿಕಾರಾವಧಿಯನ್ನು ಬಯಸುವುದಿಲ್ಲ ಎಂದು ಪ್ರಸಾದ್ ಸಿಎಂಗೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಸೂದ್ 1986 ರ ಬ್ಯಾಚ್ ಐಪಿಎಸ್ ಗೆ ಸೇರಿದ್ದು, 2024 ರಲ್ಲಿ ನಿವೃತ್ತಿಯಾಗಲಿದ್ದಾರೆ.

2006 ರ ಪ್ರಕಾಶ್ ಸಿಂಗ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳನ್ನು ಜಾರಿಗೊಳಿಸಿದ ಹಿನ್ನೆಲೆಯಲ್ಲಿ, ಹೊಸ ನೇಮಕಾತಿಗೆ ಎರಡು ವರ್ಷಗಳ ಅಧಿಕಾರಾವಧಿಯ ವಿಷಯದಲ್ಲಿ ಕಾಳಜಿ ವಹಿಸಿದ ಸರ್ಕಾರ, ಕಾನೂನು ಸಲಹೆಯನ್ನು ಪಡೆದುಕೊಂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಹೊಸ ಡಿಜಿ ಮತ್ತು ಐಜಿಪಿ ನೇಮಕಾತಿ ಪತ್ರಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಸಹಿ ಹಾಕುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com