ಹೋಂ ಐಸೋಲೇಷನ್: ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ ಸರ್ಕಾರ, 60ವರ್ಷ ಮೇಲ್ಪಟ್ಟವರು ಅರ್ಹರಲ್ಲ

ರೋಗ ಲಕ್ಷಣಗಳಿಲ್ಲದ ಮತ್ತು ಅತ್ಯಂತ ಕಡಿಮೆ ಲಕ್ಷಣಗಳಿರುವ ಕೊರೋನಾ ಸೋಂಕಿತರು ಇನ್ನು ಮುಂದೆ ಮನೆಯಲ್ಲೇ ಪ್ರತ್ಯೇಕವಾಗಿದ್ದುಕೊಂಡು ಚಿಕಿತ್ಸೆ ಪಡೆಯಲು ಷರತ್ತು ಬದ್ಧ ಅವಕಾಶ ನೀಡಿ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರೋಗ ಲಕ್ಷಣಗಳಿಲ್ಲದ ಮತ್ತು ಅತ್ಯಂತ ಕಡಿಮೆ ಲಕ್ಷಣಗಳಿರುವ ಕೊರೋನಾ ಸೋಂಕಿತರು ಇನ್ನು ಮುಂದೆ ಮನೆಯಲ್ಲೇ ಪ್ರತ್ಯೇಕವಾಗಿದ್ದುಕೊಂಡು ಚಿಕಿತ್ಸೆ ಪಡೆಯಲು ಷರತ್ತು ಬದ್ಧ ಅವಕಾಶ ನೀಡಿ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. 

ಸೋಂಕಿರ ಹೋಂ ಐಸೋಲೇಷನ್'ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶುಕ್ರವಾಸ ಸಂಬಂಧಿಸಿದ ಇಲಾಖೆ ಸಚಿವರು, ಅಧಿಕಾರಿಗಳು ಮತ್ತು ತಜ್ಞರ ಸಭೆ ನಡೆಸಿ ಈ ಸಂಬಂಧ ರಾಜ್ಯದಲ್ಲೂ ಪ್ರತ್ಯೇಕ ಮಾರ್ಗಸೂಚಿ ಸಿದ್ಧಪಡಿಸಲು ಸೂಚಿಸಿದ್ದರು. ಅದರಂತೆ ಮಾರ್ಗಸೂಚಿ ಸಿದ್ಧಪಡಿಸಿರುವ  ಆರೋಗ್ಯ ಇಲಾಖೆ ಶನಿವಾರ ಬಿಡುಗಡೆ ಮಾಡಿದೆ. 

ಕೋವಿಡ್-19 ಪರೀಕ್ಷೆಯಲ್ಲಿ ಲಕ್ಷಣಗಳಿಲ್ಲದಿದ್ದರೂ ಸೋಂಕು ದೃಢಪಟ್ಟವರು ಹಾಗೂ ಅತಿ ಕಡಿಮೆ ಲಕ್ಷಣಗಳಿರುವವರಕು ಮಾತ್ರ ತಾವು ಇಚ್ಛೆಪಟ್ಟಲ್ಲಿ ಹೋಂ ಐಸೋಲೇಷನ್ ನಲ್ಲಿ ಇರಬಹುದು. ಅಂತಹ ಸೋಂಕಿತರ ಮನೆಗೆ ಆಯಾ ಜಿಲ್ಲಾ, ಮಹಾನಗರ ಪಾಲಿಕೆ, ಅನುಮತಿ ಪಡೆದ ಖಾಸಗಿ ಸಂಸ್ಥೆ, ಏಜೆನ್ಸಿಯವರ ಆರೋಗ್ಯ ಸಿಬ್ಬಂದಿ ಭೇಟಿ ನೀಡಿ ಸೋಂಕಿತರು ಪ್ರತ್ಯೇಕ ಕೊಠಡಿ ಸೇರಿದಂತೆ ಹೋಂ ಐಸೋಲೇಷನ್'ಗೆ ಅನುಕೂಲಕವಾಗಿದ ವ್ಯವಸ್ಥೆ ಹೊಂದಿದ್ದಾರೆಂಯೇ ಎಂದು ಪರಿಶೀಲಿಸಬೇಕು. 

ಸೋಂಕಿತ ತನ್ನ ದೈನಂದಿನ ಆರೋಗ್ಯ ತಪಾಸಣೆಗೆ ಸ್ವಂತ ಪಲ್ಸ್ ಆಕ್ಸಿಮೀಟರ್, ಡಿಜಿಟಲ್ ಥರ್ಮೋಮೀಟರ್, ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಸೇರಿದಂತೆ ಸೋಂಕು ನಿಯಂತ್ರಣ ವಸ್ತುಗಳನ್ನು ಹೊಂದಿರಬೇಕು. ಈ ಬಗ್ಗೆ ಆರೋಗ್ಯ ಸಿಬ್ಬಂದಿ ಪರಿಶೀಲಿಸಿ ಖಾತರಿಪಡಿಸಿಕೊಳ್ಲಬೇಕು. ಮನೆಯಲ್ಲಿ ಹೋಂ ಐಸೋಲೇಷನ್'ಗೆ ಅನುಕೂಲಕರ ವ್ಯವಸ್ಥೆ ಇದ್ದರೆ ಅವರಿಗೆ ಅಲ್ಲಿಯೇ ಸೂಕ್ತ ಚಿಕಿತ್ಸೆ ಹಾಗೂ ನಿಗಾವಹಿಸಲು ಕ್ರಮ ಕೈಗೊಳ್ಳಬೇಕು. ಇದಕ್ಕೂ ಮುನ್ನ ಸೋಂಕಿತರ ತಪಾಸಣೆ ನಡೆಸಿ ಜ್ವರ, ಕೆಮ್ಮು, ಮತ್ತಿತರ ಯಾವುದೇ ಲಕ್ಷಣಗಳಿಲ್ಲದ ಬಗ್ಗೆ ಹಾಗೂ ಯಾವುದೇ ಗಂಭೀರ ಹಾಗೂ ಪೂರ್ವ ಆರೋಗ್ಯ ಸಮಸ್ಯೆಗಳಿಲ್ಲವೇ ಎಂಬುದನ್ನು ಪರಿಶೀಲಿಸಬೇಕು. 

60 ವರ್ಷ ಮೇಲ್ಪಟ್ಟವರು, ಪ್ರಸೂತಿಗೆ ಇನ್ನು ನಾಲ್ಕು ವಾರ ಸಮಯಾವಕಾಶ ಬಾಕಿ ಇರುವ ಗರ್ಭಿಣಿಯರು, ರಕ್ತದಲ್ಲಿ ಆಮ್ಲಜನಕ ಶುದ್ಧತ್ವ ಮಟ್ಟ ಶೇ.95ಕ್ಕಿಂತ ಕಡಿಮೆ ಇರುವವರು, ದೇಹದ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್'ಗಿಂತ (100.4 ಡಿಗ್ರಿ ಎಫ್) ಹೆಚ್ಚು ಇರವವರು, ಅಧಿಕ ರಕ್ತದೊತ್ತಡ, ಮಧುಮೇಹ, ಥೈರಾಯ್ಡ್, ಕಿಡ್ನಿ ಸಮಸ್ಯೆ, ಹೃದಯ ಸಂಬಂಧಿ ಸಮಸ್ಯೆ, ಕ್ಯಾನ್ಸರ್, ಹೆಚ್ಐವಿ ಮತ್ತಿತರ ಗಂಭೀರ ಹಾಗೂ ಪೂರ್ವ ಆರೋಗ್ಯ ಸಮಸ್ಯೆಗಳಿಂದ ಬಳುತ್ತಿರುವವರು ಹೋಂ ಐಸೋಲೇಷನ್ ನಲ್ಲಿರಲು ಅರ್ಹರಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com