ಮಂಗಳೂರಲ್ಲಿ ಗ್ಯಾಂಗ್ ವಾರ್, ಮೂವರು ಯುವಕರಿಗೆ ಗಂಭೀರ ಗಾಯ

ಜುಲೈ 13 ರ ಸೋಮವಾರ ತಡರಾತ್ರಿ ನಗರದ ಬಜಿಲಕೇರಿಯಲ್ಲಿ ನಡೆದ ಘಟನೆಯಲ್ಲಿ, ಮಾರಕ ಆಯುಧ ಹೊಂದಿದ್ದ ಗ್ಯಾಂಗ್ ಮೂವರು ಯುವಕರ ಮೇಲೆ ಹಲ್ಲೆ ನಡೆಸಿದೆ. ಕ್ಷುಲ್ಲಕ ಕಾರಣಗಳಿಂದ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಮಂಗಳೂರಲ್ಲಿ ಗ್ಯಾಂಗ್ ವಾರ್, ಮೂವರು ಯುವಕರಿಗೆ ಗಂಭೀರ ಗಾಯ
Updated on

ಮಂಗಳೂರು: ಜುಲೈ 13 ರ ಸೋಮವಾರ ತಡರಾತ್ರಿ ನಗರದ ಬಜಿಲಕೇರಿಯಲ್ಲಿ ನಡೆದ ಘಟನೆಯಲ್ಲಿ, ಮಾರಕ ಆಯುಧ ಹೊಂದಿದ್ದ ಗ್ಯಾಂಗ್ ಮೂವರು ಯುವಕರ ಮೇಲೆ ಹಲ್ಲೆ ನಡೆಸಿದೆ. ಕ್ಷುಲ್ಲಕ ಕಾರಣಗಳಿಂದ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.

ಗಾಯಗೊಂಡ ಮೂವರು ಇಲ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸರು ಅಪರಾಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಗ್ಯಾಂಗ್ ಕೃತ್ಯ ನಡೆಸಿದ್ದ ಸ್ಥಳದಲ್ಲಿನ ಮನೆ ಮುಂದಿನ ವಸ್ತುಗಳನ್ನು ಹಾನಿಗೊಳಿಸಿದೆ.

ಸಧ್ಯ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿನಿಖೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಪ್ರದೇಶದಲ್ಲಿ ಶಾಂತಿ ಕಾಪಾಡಲು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಈ ನಡುವೆ ಹಳೆ ದ್ವೇಷದ ಹಿನ್ನೆಲೆ ಗಾಂಜಾ ಸೇವಿಸಿದ್ದ ಯುವಕರು ಈ ಕೃತ್ಯ ಎಸಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com