ಸಿಂಗಾಪುರ್ ಗೆ ತೆರಳಲು 5 ವರ್ಷದ ಬಾಲಕನಿಗೆ ಅತಿ ಕಡಿಮೆ ಸಮಯದಲ್ಲಿ ಪಾಸ್ ಪೋರ್ಟ್ ನೀಡಿದ ಬೆಂಗಳೂರಿನ ಪಾಸ್ ಪೋರ್ಟ್ ಕಚೇರಿ

ವಂದೇ ಭಾರತ್ ಮಿಷನ್ ವಿಮಾನದಲ್ಲಿ  ಚೆನ್ನೈ ಮೂಲಕ ಕುಟುಂಬವೊಂದು ಸಿಂಗಾಪುರಕ್ಕೆ ತೆರಳಬೇಕಿತ್ತು, ಹೀಗಾಗಿ ಅವರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದರು, ಅಲ್ಲಿ ಹೋಗಿ ನೋಡಿದ ನಂತರವೇ ತಿಳಿದಿದ್ದು ತಮ್ಮ ಐದು ವರ್ಷ ಮಗನ ಪಾಸ್ ಪೋರ್ಟ್ ಅವಧಿ ಮುಗಿದಿರುವುದು ತಿಳಿದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ವಂದೇ ಭಾರತ್ ಮಿಷನ್ ವಿಮಾನದಲ್ಲಿ  ಚೆನ್ನೈ ಮೂಲಕ ಕುಟುಂಬವೊಂದು ಸಿಂಗಾಪುರಕ್ಕೆ ತೆರಳಬೇಕಿತ್ತು, ಹೀಗಾಗಿ ಅವರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದರು, ಅಲ್ಲಿ ಹೋಗಿ ನೋಡಿದ ನಂತರವೇ ತಿಳಿದಿದ್ದು ತಮ್ಮ ಐದು ವರ್ಷ ಮಗನ ಪಾಸ್ ಪೋರ್ಟ್ ಅವಧಿ ಮುಗಿದಿರುವುದು ತಿಳಿದಿದೆ.

ಉತ್ತರ ಪ್ರದೇಶ ಮೂಲದ ತರುಣ್ ಕುಮಾರ್ ಎಂಬುವರು ಅಸಹಾಕತೆಯಿಂದ ವೈಟ್ ಫೀಲ್ಡ್ ನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಿದರು.

ತರುಣ್ ಕುಮಾರ್ ತಮ್ಮ ಪತ್ನಿ ರುಚಿ ಸಿಂಗಾಲ್ ಮತ್ತು ಐದು ವರ್ಷದ ಅವ್ಯಾನ್ ಗೋಯೆಲ್ ಅವರ ಜೊತೆ ಬೆಂಗಳೂರಿನಲ್ಲಿರುವ ತಮ್ಮ ಸಹೋದರನ ಮನೆಗೆ ಆಗಮಿಸಿದ್ದರು.ಲಾಕ್ ಡೌನ್ ನಿಂದಾಗಿ ಅವರು ವಾಪಸ್ ತೆರಳಲು ಸಾಧ್ಯವಾಗಲಿಲ್ಲ. ಆದರೆ ಐಟಿ ಉದ್ಯೋಗಿಯಾಗಿರುವ ತರುಣ್ ಸಿಂಗಾಪೂರ್ ದ ಸಿಟಿ ಬ್ಯಾಂಕ್ ಕೆಲಸಕ್ಕೆ ತೆರಳಬೇಕಾಗಿದೆ ಹೀಗಾಗಿ ಏರ್ ಇಂಡಿಯಾ ವಿಶೇಷ ವಿಮಾನದಲ್ಲಿ ತೆರಳಲು ಅನುವಾಗಿದ್ದರು.

ಕೋರಮಂಗಲದಲ್ಲಿರುವ ಪಾಸ್ ಪೋರ್ಟ್ ಕಚೇರಿಗೆ ಧನ್ಯವಾದ ತಿಳಿಸಿದ್ದಾರೆ. ಶೀಘ್ರವೇ  ಅವರು ವಂದೇ ಭಾರತ್ ವಿಮಾನ ಮೂಲಕ ಸಿಂಗಾ ಪೂರ್ ಗೆ ತೆರಳಲಿದ್ದಾರೆ.

ಪಾಸ್ ಪೋರ್ಟ್ ಅವಧಿ ಮುಗಿದ ವಿಷಯ ತಿಳಿದು ನನಗೆ ಆಘಾತವಾಯಿತು. ಕೇವಲ ಜುಲೈ 19 ರಂದು ಮಾತ್ರ ಇನ್ನೊಂದು ವಿಮಾನವಿತ್ತು, ಜುಲೈ 13 ರಂದು ಮಾರತ್ ಹಳ್ಳಿಯಲ್ಲಿರುವ ಪಾಸ್ ಪೋರ್ಟ್ ಕಚೇರಿಗೆ ತೆರಳಿ ಅವರಲ್ಲಿ ಮನವಿ ಮಾಡಿಕೊಂಡೆವು, ಹೇಗಾದರೂ ಮಾಡಿ ನಾವು ಜುಲೈ 19 ರಂದು ಹೊರಡು ವಿಮಾನದಲ್ಲಿ ತೆರಳಬೇಕಿತ್ತು.

ಸ್ಥಳೀಯ ವಿಳಾಸವಿಲ್ಲದ ಕಾರಣ ನನ್ನ ಅರ್ಜಿ ತಿರಸ್ಕಾರವಾಯಿತು. ಉತ್ತರ ಪ್ರದೇಶದಲ್ಲಿ ನಮ್ಮ ಖಾಯಂ ವಿಳಾಸವಿದೆ, ಏನು ಮಾಡಬೇಕು ಎಂದು ನನಗೆ ತೋಚಲಿಲ್ಲ. ಮಂಗಳವಾರ ಬೆಳಗ್ಗೆ ಕೋರಮಂಗಲದ ಪ್ರಧಾನ ಕಚೇರಿಗೆ ಪರಿಸ್ಥಿತಿ ವಿವರಿಸಿ ಮೇಲ್ ಮಾಡಿದೆ ಎಂದು ತರುಣ್ ವಿವರಿಸಿದ್ದಾರೆ.

ಕೂಡಲೇ ಸ್ಪಂದಿಸಿದ ಅಲ್ಲಿನ ಸಿಬ್ಬಂದಿ ಮಗುವನ್ನು ಕರೆದುಕೊಂಡು ಬರುವಂತೆ ತಿಳಿಸಿದರು. ಕೇವಲ ಎರಡು ಮೂರು ಗಂಟೆಗಳಲ್ಲಿ ಹೊಸ ಪಾಸ್ ಪೋರ್ಟ್ ಮಾಡಿಕೊಟ್ಟರು. ಇಷ್ಟು ಶೀಘ್ರವಾಗಿ ಮಾಡಿಕೊಡುತ್ತಾರೆ ಎಂದು ನಾನು ನಿರೀಕ್ಷಿಸರಲಿಲ್ಲ,. ಅವರ ಸಹಾಯಕ್ಕೆನಾನು ಋಣಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಇದೊಂದು ಅಪರೂಪದ ಕೇಸ್ ಆಗಿತ್ತು, ಅವರು  ಸಿಂಗಾಪೂರ್ ಗೆ ತೆರಳುವುದು ಅನಿವಾರ್ಯವಾಗಿತ್ತು, ಹೀಗಾಗಿ ಸಹಾಯ ಮಾಡಿದೆವು ಎಂದು ಕೋರಮಂಗಲ ಪಾಸ್ ಪೋರ್ಟ್ ಕಚೇರಿ ಅಧಿಕಾರಿ ಭರತ್ ಕುಮಾರ್ ಕುತಾತಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com