ಕೋವಿಡ್-19: ಸೋಂಕಿತರಿಂದ ದೂರ ಉಳಿಯಲು 'ಸೋಷಿಯಲ್ ಡಿಸ್ಟನ್ಸ್ ಡಿವೈಸ್' ಕಂಡು ಹಿಡಿದ ಮೈಸೂರಿನ ಸಂಶೋಧಕ!

ಮಹಾಮಾರಿ ಕೊರೋನಾ ವೈರಸ್ ಸೋಂಕಿನಿಂದ ದೂರ ಉಳಿಯಲು ಸಾಮಾಜಿಕ ಅಂತರ ಅತ್ಯುತ್ತಮ ಮಾರ್ಗವಾಗಿದ್ದು, ಇದಕ್ಕೆ ಸಹಾಯ ಮಾಡುವ ಸಲುವಾಗಿಯೇ ಮೈಸೂರಿನ ಸಂಶೋಧಕರ ತಂಡವೊಂದು ಸೋಷಿಯಲ್ ಡಿಸ್ಟನ್ಸ್ ಡಿವೈಸ್'ನ್ನು ಕಂಡು ಹಿಡಿದಿದೆ. 
'ಸೋಷಿಯಲ್ ಡಿಸ್ಟನ್ಸ್ ಡಿವೈಸ್' ಕಂಡು ಹಿಡಿದ ಮೈಸೂರು ಮೂಲದ ಸಂಶೋಧಕರು
'ಸೋಷಿಯಲ್ ಡಿಸ್ಟನ್ಸ್ ಡಿವೈಸ್' ಕಂಡು ಹಿಡಿದ ಮೈಸೂರು ಮೂಲದ ಸಂಶೋಧಕರು

ಮೈಸೂರು: ಮಹಾಮಾರಿ ಕೊರೋನಾ ವೈರಸ್ ಸೋಂಕಿನಿಂದ ದೂರ ಉಳಿಯಲು ಸಾಮಾಜಿಕ ಅಂತರ ಅತ್ಯುತ್ತಮ ಮಾರ್ಗವಾಗಿದ್ದು, ಇದಕ್ಕೆ ಸಹಾಯ ಮಾಡುವ ಸಲುವಾಗಿಯೇ ಮೈಸೂರಿನ ಸಂಶೋಧಕರ ತಂಡವೊಂದು ಸೋಷಿಯಲ್ ಡಿಸ್ಟನ್ಸ್ ಡಿವೈಸ್'ನ್ನು ಕಂಡು ಹಿಡಿದಿದೆ. 

ಈ ಡಿವೈಸ್ ನಮ್ಮ ಸುತ್ತಮುತ್ತಲಿನ ಸೋಂಕಿತ ವ್ಯಕ್ತಿಗಳಿದ್ದರೆ ನಮಗೆ ಮಾಹಿತಿ ನೀಡುತ್ತದೆ. ನಮ್ಮಿಂದ 6 ಅಡಿಗಳ ದೂರದಲ್ಲಿ ಅತೀವ್ರ ಜ್ವರ ಇರುವಂತ ವ್ಯಕ್ತಿಗಳಿದ್ದರೆ ಸೌಂಡ್ ಮೂಲಕ ಈ ಸಾಧನ ನಮಗೆ ಮಾಹಿತಿ ನೀಡುತ್ತದೆ. 

ಭಾರತದ ಸಹಯೋಗಿ ಪಾಲುದಾರ ಡಾ. ಪವನ್ ವಿಗ್ ಅವನ್ನೊಳಗೊಂಡ ಅಮೆರಿಕಾದಲ್ಲಿರುವ ಮೈಸೂರು ಮೂಲದ ರಾಹುಲ್ ರೆಡ್ಡಿ ನಾಡಿಕಟ್ಟು, ಸಿಕೆಂದರ್ ಮೊಹ್ಸೀನುದ್ದೀನ್ ಮೊಹಮ್ಮದ್ ತಂಡ ಈ ಸಾಧನವನ್ನು ಕಂಡು ಹಿಡಿದಿದೆ. 

ಕೈಯಲ್ಲಿ ಹಿಡಿದುಕೊಳ್ಳುವಷ್ಟು ಸುಲಭವಾಗಿ ಈ ಡಿವೈಸ್ ಇದ್ದು, ಕೆಲ ಪ್ರದೇಶಗಳು ಮತ್ತು ಸಮುದಾಯಗಳಲ್ಲಿ ಕೊರೋನಾ ರೋಗಿಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಆರೋಗ್ಯವಂತ ವ್ಯಕ್ತಿಗಳಿಂದ ಸೋಂಕಿತ ರೋಗಿಗಳನ್ನು ಪ್ರತ್ಯೇಕಿಸಲು ಸಾಧನವು ಉಪಯುಕ್ತವಾಗಿದೆ.

ಈ ಸಾಧನವನ್ನು ಶೈಕ್ಷಣಿಕ ಸಂಸ್ಥೆಗಳು, ವಿಮಾನ ನಿಲ್ದಾಣಗಳು, ಶಾಪಿಂಗ್ ಮಾಲ್ ಗಳು ಸೇರಿದಂತೆ ವಿವಿಧ ಜನನಿಬಿಡ ಪ್ರದೇಶಗಳಲ್ಲಿ ಬಳಕೆ ಮಾಡಬಹುದಾಗಿದೆ. ಇದೀಗ ಸಂಶೋಧಕರ ತಂಡವು ಸಾಧನವನ್ನು ಪ್ರಾಯೋಜಕತ್ವ ಮತ್ತು ಏಜೆನ್ಸಿಗಳ ಸಹಾಯದಿಂದ ವ್ಯಾಪಾರೀಕರಿಸಲು ಮುಂದಾಗಿದ್ದಾರೆ. 

ಸೋಂಕಿತ ವ್ಯಕ್ತಿಗಳು ಮುಕ್ತವಾಗಿ ಸಂಚರಿಸುವ ಮತ್ತು ಸೋಂಕನ್ನು ಹರಡುತ್ತಿರುವ ಉದಾಹರಣೆಗಳಿವೆ. ಈ ಸ್ಮಾರ್ಟ್ ಸಾಧನದ ಬಳಕೆ ಮೂಲಕ ಸೋಂಕು ಹರಡುವುದನ್ನು ತಡೆಯಬಹುದಾಗಿದೆ ಎಂದು ರಾಹುಲ್ ಅವರು ಹೇಳಿದ್ದಾರೆ. 

ರಾಹುಲ್ ಶೀಘ್ರದಲ್ಲೇ ಕೋವಿಡ್-19 ಕುರಿತ ಪುಸ್ತಕವನ್ನು ಬಿಡುಗಡೆ ಮಾಡಲು ಯೋಜಿಸುತ್ತಿದ್ದು, ವೈರಸ್ ನಿರ್ವಹಣೆಗೆ ಉಪಯುಕ್ತವಾದ ನ್ಯಾನೊ-ಇನ್ಫಾರ್ಮ್ಯಾಟಿಕ್ಸ್ ಆಧಾರಿತ ತಂತ್ರಗಳನ್ನು ಅಭಿವೃದ್ಧಿಪಡಿಸುವ ಕಾರ್ಯವನ್ನೂ ಮಾಡಲು ಮುಂದಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com