ಬೆಂಗಳೂರು: ನಕಲಿ ವೆಬ್ ಸೈಟ್ ಸೃಷ್ಟಿಸಿ ವಂಚಿಸುತ್ತಿದ್ದ ಅಂತಾರಾಷ್ಟ್ರೀಯ ಗ್ಯಾಂಗ್ ಬಂಧನ

ನಕಲಿ ವೆಬ್ ಸೈಟ್ ಮೂಲಕ ಆನ್ ಲೈನ್ ನಲ್ಲಿ ಕೋಟ್ಯಾಂತರ ರೂ.ವಂಚಿಸುತ್ತಿದ್ದ ಅಂತಾರಾಷ್ಟ್ರೀಯ ಗ್ಯಾಂಗ್ ಸದಸ್ಯರನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಕಲಿ ವೆಬ್ ಸೈಟ್ ಮೂಲಕ ಆನ್ ಲೈನ್ ನಲ್ಲಿ ಕೋಟ್ಯಾಂತರ ರೂ.ವಂಚಿಸುತ್ತಿದ್ದ ಅಂತಾರಾಷ್ಟ್ರೀಯ ಗ್ಯಾಂಗ್ ಸದಸ್ಯರನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಕ್ಯಾಮರೂನ್ ದೇಶದ ಎಗ್ಬೆ ಹುಬರ್ಟ್ ಎನೋ, ಕಾಲೀನ್ ಜಾ, ಬದ್ರೂಲ್ ಹಾಗೂ ದಿದಾರುಲ್ ಬಂಧಿತರು. ಇವರಿಂದ ಮೊಬೈಲ್ ಫೋನ್, ಲ್ಯಾಪ್ ಟಾಪ್, ಬ್ಯಾಂಕ್ ಅಕೌಂಟ್ ಪಾಸ್ ಬುಕ್ ಗಳು, ಪಾನ್ ಕಾರ್ಡ್ ಗಳು ಸೇರಿ ಆಧಾರ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜು.4ರಂದು ಜಯನಗರದ ಯಡಿಯೂರು ಬಳಿಯ ಬಾಡಿಗೆ ಮನೆಯೊಂದರಲ್ಲಿ ನಕಲಿ ವೈಬ್ ಸೈಟ್ ಸೃಷ್ಟಿಸಿ ಸಾರ್ವಜನಿಕರ ಹಣವನ್ನು ಆನ್ ಲೈನ್ ಮೂಲಕ ಬೇರೊಂದು ಖಾತೆಗೆ ವರ್ಗಾವಣೆ ಮಾಡಿಕೊಳ್ಳುವ ಮೂಲಕ ಜನರಿಗೆ ಮೋಸ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಕ್ಷಿಣ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬಂಧಿತರು 10ಕ್ಕೂ ಹೆಚ್ಚು ನಕಲಿ ವೆಬ್ ಸೈಟ್ ಗಳನ್ನು ಸೃಷ್ಟಿ ಸಿ, ಕೊರೊನಾ ರೋಗಕ್ಕೆ ಔಷಧಿ ನೀಡುವುದು, ಬೇರೆ ವಿಧದ ಔಷಧಿ ಕೊಡುವುದಾಗಿ ಇತರೆ ಜನರಿಗೆ ಮೋಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಬಂಧಿತ ಆರೋಪಿಗಳ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಮೊ.ಸಂ.84/2020ಕಲಂ 419, 430 ರೆ/ವಿ 34ಐಪಿಸಿ ಕಲಂ 66(ಸಿ),66 (ಡಿ)ಐಟಿ ಆ್ಯಕ್ಟ್ 14 (ಸಿ), ಫಾರೀನರ್ಸ್ ಆ್ಯಕ್ಟ್ ಹಾಗೂ ಕಲಂ 5ರಿಜಿಸ್ಟ್ರೇಷನ್ ಆಫ್ ಫಾರೀನರ್ಸ್ ಆ್ಯಕ್ಟ್ ನಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶಾಂತಮಲ್ಲಪ್ಪ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com