
ಬೆಂಗಳೂರು: ಬೆಂಗಳೂರು ನಗರದಲ್ಲಿ ಲಾಕ್‌ಡೌನ್ ಘೋಷಣೆಯಾಗಿರುವುದರಿಂದ ಹಿರಿಯ ನಾಗರಿಕರು, ಮಕ್ಕಳೂ ಮತ್ತು ಸೋಂಕಿನ ಲಕ್ಷಣವುಳ್ಳವರಿಗೆ ತಪಾಸಣೆಗಾಗಿ ಆಸ್ಪತ್ರೆಗೆ ಅಲೆದಾಡುವುದನ್ನು ತಪ್ಪಿಸಲು ಆರೋಗ್ಯ ಇಲಾಖೆ ಮೊಬೈಲ್ ಟೆಸ್ಟಿಂಗ್ ಯೋಜನೆ ಆರಂಭಿಸಿದೆ.
ಜೊತೆಗೆ, ಗಂಟಲು ದ್ರವ( ಸ್ವ್ಯಾಬ್) ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿರುವ ಯಾವುದೇ ವ್ಯಕ್ತಿ ಫಲಿತಾಂಶ ಲಭ್ಯವಾಗುವವರೆಗೆ ಮನೆಯಲ್ಲೇ ಪ್ರತ್ಯೇಕತೆ ಕಾಯ್ದುಕೊಳ್ಳಬೇಕು. ಈ ನಿಯಮ ಉಲ್ಲಂಘಿಸಿದರೆ ಅವರಿಗೆ ಸಾಂಕ್ರಾಮಿಕ ರೋಗ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗುವುದ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಮೊಬೈಲ್ ಟೆಸ್ಟಿಂಗ್ ಸಹಾಯವಾಣಿಗಳು- ಯಲಹಂಕ- 080-28560696/ 8792032820/5180 ಮಹದೇವಪುರ- 080-23010101/102, ಬೊಮ್ಮನಹಳ್ಳಿ- 8548883334/ 8970002228, ಆರ್ ಆರ್ ನಗರ- 080-2600208 , ದಕ್ಷಿಣ ವಲಯ- 7022724772, ಪೂರ್ವ ವಲಯ -9900094042, ಪಶ್ಚಿಮ ವಲಯ 080-68248454/ 7204179723
ಆಪ್ತಮಿತ್ರ-ಕೋವಿಡ್- 9 ಸಹಾಯವಾಣಿ
ಟೆಲಿಮೆಡಿಸಿನ್ ಮತ್ತು ಆಸ್ಪತ್ರೆಗೆ -14410, ಆಂಬುಲೆನ್ಸ್ ಸೇವೆಗೆ -108 ,ಆಸ್ಪತ್ರೆ ನಿರಾಕರಣೆ ಸಂಬಂಧದ ಕೊಂದು ಕೊರತೆಗಾಗಿ-1912, ಸಾಮಾನ್ಯ ಆರೋಗ್ಯ ಸಮಸ್ಯೆ ಕುರಿತ ಮಾಹಿತಿಗಾಗಿ -104 ಸಂಖ್ಯೆಗಳಿಗೆ ಸಾರ್ವಜನಿಕರು ಕರೆ ಮಾಡಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.
Advertisement