ಕಲಬುರಗಿಯಲ್ಲಿ ಕೊರೋನಾ ಹಾವಳಿ ನಡುವೆ ತೀವ್ರಗೊಂಡ ಹಂದಿಗಳ ಕಾಟ!

ಸೂರ್ಯ ‌ನಗರಿ ಕಲಬುರಗಿಯಲ್ಲಿ ಕೊರೋನಾ ಹಾವಳಿ ನಡುವೆ ಹಂದಿಗಳ ಕಾಟ ತೀವ್ರಗೊಂಡಿದೆ.
ಹಂದಿಗಳು
ಹಂದಿಗಳು

ಕಲಬುರಗಿ: ಸೂರ್ಯ ‌ನಗರಿ ಕಲಬುರಗಿಯಲ್ಲಿ ಕೊರೋನಾ ಹಾವಳಿ ನಡುವೆ ಹಂದಿಗಳ ಕಾಟ ತೀವ್ರಗೊಂಡಿದೆ. 

ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಹಂದಿಗಳು ಯಾವುದೇ ಭಯವಿಲ್ಲದೇ ರಾಜರೋಷವಾಗಿ ಅತ್ತಿಂದಿತ್ತ ಸುತ್ತುತ್ತಿವೆ. ಜಿಲ್ಲಾಸ್ಪತ್ರೆಯಿಂದ ಕೇವಲ ಹತ್ತು ಮೀಟರ್ ಅಂತರದಲ್ಲೇ ಜಿಮ್ಸ್‌ ಕೋವಿಡ್ ಆಸ್ಪತ್ರೆ ಇದ್ದರೂ, ಹಂದಿಗಳ ಹಾವಳಿ ಕುರಿತು ಯಾರೂ ಕೂಡ ಈ ಬಗ್ಗೆ ತಲೆಕೇಡಿಸಿಕೊಂಡಿಲ್ಲ. ಕೊಳಚೆ ಪ್ರದೇಶಗಳನ್ನು ಸುತ್ತಿ ಬರುವ ಹಂದಿಗಳು ಜಿಲ್ಲಾಸ್ಪತ್ರೆಯಲ್ಲಿ ಮೊಕ್ಕಾಂ ಹೂಡಿವೆ.

ಹಂದಿಗಳ ಓಡಾಟದಿಂದ‌ ರೋಗಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಮಾಧ್ಯಮದಲ್ಲಿ ಹಂದಿಗಳ ಹಾವಳಿ ಸುದ್ದಿ ಬಿತ್ತಾರವಾಗುತ್ತಿದ್ದಂತೆ ಶನಿವಾರ ಜಿಮ್ಸ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ಶರತ್ ಬಿ ಹಠಾತ್ ಭೇಟಿ ನೀಡಿದರು.
ತಕ್ಷಣವೇ ಆವರಣದಲ್ಲಿರುವ ಹಂದಿಗಳ ಸ್ಥಳಾಂತರ ಮಾಡುವಂತೆ ಹಂದಿ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಲ್ಲದೇ, ಹಂದಿ ಸಾಕಾಣಿಕೆ/ ಮಾಲೀಕರ ವಿರುದ್ಧ ಎಫ್.ಐ.ಆರ್ ದಾಖಲಿಸುವಂತೆಯೂ ಜಿಲ್ಲಾಧಿಕಾರಿಗಳು ಜಿಮ್ಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಶುಕ್ರವಾರ ಆರೋಗ್ಯ ವರದಿ ಪ್ರಕಾರ ಕಲಬುರಗಿಯಲ್ಲಿ ಸೋಂಕಿತರ ಸಂಖ್ಯೆ 2592ಕ್ಕೆ‌ ಏರಿಕೆ ಆಗಿದ್ದು, 38 ಜನರನ್ನು ಕೊರೋನಾ ಬಲಿ ಪಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com