ವಿಕೇಂದ್ರೀಕೃತ ಆರೋಗ್ಯ ವ್ಯವಸ್ಥೆ, ದೊಡ್ಡ ಆಟದ ಮೈದಾನಗಳಿಗೆ ಮಾರುಕಟ್ಟೆಗಳ ಸ್ಥಳಾಂತರ: ಕೋವಿಡ್-19 ನಿಯಂತ್ರಣಕ್ಕೆ ಜಾರ್ಜ್ ಸಲಹೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಆರ್ಭಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಿಸಲು ವಿಕೇಂದ್ರೀಕರಣ ಆರೋಗ್ಯ ವ್ಯವಸ್ಥೆ ಕೈಗೊಳ್ಳುವಂತೆ ಹಾಗೂ ಜನರು ಹೆಚ್ಚು ಸೇರದಂತೆ ನಿಯಂತ್ರಿಸಲು ಮಾರುಕಟ್ಟೆ ಪ್ರದೇಶಗಳನ್ನು ದೊಡ್ಡ ಆಟದ ಮೈದಾನಗಳಾಗಿ ಮಾಡುವಂತೆ ಸರ್ಕಾರಕ್ಕೆ ಮಾಜಿ ಸಚಿವ ಕೆಜೆ. ಜಾರ್ಜ್ ಅವರು ಸಲಹೆ ನೀಡಿದ್ದಾರೆ.   
ಜಾರ್ಜ್
ಜಾರ್ಜ್
Updated on

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಆರ್ಭಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಿಸಲು ವಿಕೇಂದ್ರೀಕರಣ ಆರೋಗ್ಯ ವ್ಯವಸ್ಥೆ ಕೈಗೊಳ್ಳುವಂತೆ ಹಾಗೂ ಜನರು ಹೆಚ್ಚು ಸೇರದಂತೆ ನಿಯಂತ್ರಿಸಲು ಮಾರುಕಟ್ಟೆ ಪ್ರದೇಶಗಳನ್ನು ದೊಡ್ಡ ಆಟದ ಮೈದಾನಗಳಾಗಿ ಮಾಡುವಂತೆ ಸರ್ಕಾರಕ್ಕೆ ಮಾಜಿ ಸಚಿವ ಕೆಜೆ. ಜಾರ್ಜ್ ಅವರು ಸಲಹೆ ನೀಡಿದ್ದಾರೆ. 

ಕೊರೋನಾ ವೈರಸನ್ನು ನಾವು ಬುಡದಿಂದ ನಿಯಂತ್ರಿಸುವ ಪ್ರಯತ್ನ ಮಾಡಬೇಕು. ಎಲ್ಲಾ ರೀತಿಯ ವ್ಯವಸ್ಥೆ ಹಾಗೂ ಸೌಲಭ್ಯಗಳನ್ನು ನಾವು ಹೊಂದಿರಬೇಕು. ಪರೀಕ್ಷೆಗಳು, ಕೋವಿಡ್ ಕೇರ್ ಕೇಂದ್ರಗಳು, ಕೋವಿಡ್ ಆಸ್ಪತ್ರೆಗಳು, ಆ್ಯಂಬುಲೆನ್ಸ್, ವಾರ್ ರೂಂಗಳ ಕಾರ್ಯ ಚುರುಕುಗೊಳ್ಳುವಂತೆ ಮಾಡಬೇಕು. ಎಲ್ಲಾ ವಾರ್ಡ್ ಗಳಲ್ಲೂ ಫೀವರ್ ಕ್ಲಿನಿಸ್ ಗಳನ್ನು ಸ್ಥಾಪಿಸಬೇಕೆಂದು ಎಂದು ಹೇಳಿದ್ದಾರೆ. 

ಮಾರುಕಟ್ಟೆಗಳನ್ನು ವಿಕೇಂದ್ರೀಕರಿಸಬೇಕಾಗಿದೆ. ತರಕಾರಿ ಹಾಗೂ ಹಣ್ಣುಗಳ ಮಾರಾಟ ಮಾಡುವ ಮಾರುಕಟ್ಟೆ ಪ್ರದೇಶಗಳಲ್ಲಿ ಜನರು ದೊಡ್ಡ ಮಟ್ಟದಲ್ಲಿ ಸೇರುತ್ತಾರೆ, ಹೀಗಾಗಿ ಈ ಪ್ರದೇಶಗಳನ್ನು ದೊಡ್ಡ ಆಟದ ಮೈದಾನಗಳಾಗಿ ಮಾಡಬೇಕು. ಬಳಿಕ ಈ ಪ್ರದೇಶವನ್ನು ಸೂಕ್ತ ಚಿಕಿತ್ಸೆಗಳಿಗೆ ಬಳಕೆಯಾಗುವಂತೆ ವ್ಯವಸ್ಥೆ ಕಲ್ಪಿಸಬೇಕು. ಕೊರೋನಾ ಪರಿಸ್ಥಿತಿ ಎದುರಿಸಲು ಯುದ್ಧದಂತದ ವಾತಾವರಣ ನಿರ್ಮಾಣವಾಗಬೇಕು. ಪ್ರತೀಯೊಬ್ಬರು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ನಮ್ಮ ಕ್ಷೇತ್ರದಲ್ಲಿ ಚೌಲ್ಟ್ರಿಯನ್ನು ಕೋವಿಡ್ ಕೇರ್ ಕೇಂದ್ರವನ್ನಾಗಿ ಮಾರ್ಪಡಿಸಲಾಗಿದೆ. ಕೋವಿಡ್ ಸೋಂಕಿತರಿಗೆ ಇಲ್ಲಿ ಸಾಕಷ್ಟು ಹಾಸಿಗೆಗಳಿವೆ. ಈ ಚಿಂತನೆ ಉತ್ತಮವಾಗಿದ್ದು, ಎಲ್ಲೆಡೆ ಇದನ್ನು ಜಾರಿಗೆ ತರಬೇಕು. ಪ್ರತೀಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ವಸತಿ ಸಚಿವ ವಿ.ಸೋಮಣ್ಣ ಅವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ. 

ಮುಖ್ಯಮಂತ್ರಿಗಳೂ ಕೂಡ ಪರಿಸ್ಥಿತಿಯನ್ನು ಅವಲೋಕನ ನಡೆಸುತ್ತಿದ್ದಾರೆ. ಜನಪ್ರತಿನಿಧಿಗಳು ಅಧಿಕಾರಿಗಳೊಂದಿಗೆ ಬೆಂಗಳೂರಿನ 8 ವಲಯಗಳಲ್ಲೂ ಕಳೆದ 3 ದಿನಗಳಿಂದ ಮುಖ್ಯಮಂತ್ರಿಗಳು ಸಬೆ ನಡೆಸಿ ಮಾತುಕತೆನಡೆಸುತ್ತಿದ್ದಾರೆ. ಜನರಿಗೆ ಮಾರ್ಗಸೂಚಿಗಳ ಬಗ್ಗೆ ತಿಳಿದಿದೆ ಆದರೆ ಆರ್ಥಿಕವಾಗಿ ದುರ್ಬಲ ವರ್ಗದ ಜನರು ವಾಸಿಸುವ ಪ್ರದೇಶಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಹೋಂ ಕ್ವಾರಂಟೈನ್ ನ್ನು ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಬೇಕಿದೆ. ಕೋವಿಡ್ ಕೇರ್ ಕೇಂದ್ರಗಳಲ್ಲಿ ಹೆಚ್ಚಿನ ಆಕ್ಲಿಜನ್ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸುವ ಕೆಲಸವಾಗಬೇಕಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com