ಮೇಲಾಧಿಕಾರಿಗಳ ಒತ್ತಡದಿಂದ ಪಿಎಸ್ಐ ಕಿರಣ್ ಆತ್ಮಹತ್ಯೆ: ಎಚ್ಡಿ ರೇವಣ್ಣ ಆರೋಪ

ಚನ್ನರಾಯಪಟ್ಟಣ ಪಿಎಸ್​ಐ ಕಿರಣ್ ಆತ್ಮಹತ್ಯೆಗೆ ಶರಣಾದ ಹಿನ್ನಲೆಯಲ್ಲಿ ಮೃತ ಪೊಲೀಸ್ ಅಧಿಕಾರಿ ಮನೆಗೆ ಇಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.ಮೃತ ಕಿರಣ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಎಚ್ ಡಿ ರೇವಣ್ಣ
ಎಚ್ ಡಿ ರೇವಣ್ಣ
Updated on

ಹಾಸನ: ಚನ್ನರಾಯಪಟ್ಟಣ ಪಿಎಸ್​ಐ ಕಿರಣ್ ಆತ್ಮಹತ್ಯೆಗೆ ಶರಣಾದ ಹಿನ್ನಲೆಯಲ್ಲಿ ಮೃತ ಪೊಲೀಸ್ ಅಧಿಕಾರಿ ಮನೆಗೆ ಇಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.ಮೃತ ಕಿರಣ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಲಾಧಿಕಾರಿಗಳ ಒತ್ತಡದಿಂದ ಪಿಎಸ್​ಐ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಪಿಎಸ್​ಐ ಕಿರಣ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ಅವರ ಮೊಬೈಲ ನ್ನು ಕದಿಯಲಾಗಿದ್ದು, ದೂರವಾಣಿ ಕರೆ,ಸಂದೇಶಗಳನ್ನು ಡಿಲೀಟ್ ಮಾಡಬದುಹು ಅಥವಾ ಮೊಬೈಲನ್ನೆ ನಾಶ ಪಡಿಸುವ ಶಂಕೆ ಇದೆ. 

ಸ್ಥಳಕ್ಕೆ ಭೇಟಿ ನೀಡಿರುವ ಐಜಿಪಿ ವಿಫುಲ್ ಕುಮಾರ್ ಪಿಎಸ್ಐ ಅವರ ಮೊಬೈಲನ್ನು ವಶಪಡಿಸಿಕೊಂಡಿದ್ದು ಅವರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮೊಬೈಲಿನಲ್ಲಿರುವ ಮಾಹಿತಿಗಳ ಮಹಜರನ್ನು ನಡೆಸಬೇಕಿತ್ತು. ಆತ್ಮಹತ್ಯೆ ಮಾಡಿಕೊಂಡ ಬಳಿಕ ಕುಟುಂಬ ಸದಸ್ಯರ ಸಮಕ್ಷದಲ್ಲಿ ತನಿಖೆ ನಡೆಸಿ ಮಾಹಿತಿ ಸಂಗ್ರಹಿಸದೆ ಹಿರಿಯ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದರೆಂದು ಎಂದು ಪೊಲೀಸ್ ಅಧಿಕಾರಿಗಳ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

ಜಿಲ್ಲೆಯ ಪೊಲೀಸ್ ಇಲಾಖೆ ವರ್ಗಾವಣೆ ದಂಧೆಯನ್ನು ಒಬ್ಬ ಶಾಸಕ,ಸರ್ಕಲ್ ಇನ್ಸ್ ಪೆಕ್ಟರ್ ಕೈಯಲ್ಲಿದೆ. ಪ್ರಕರಣದ ತನಿಖೆಯನ್ನು ಸಿಬಿಐ ತನಿಖೆಯಾಗಬೇಕು. ಪ್ರಾಮಾಣಿಕ ಅಧಿಕಾರಿಗೆ ಬೆಲೆಯಿಲ್ಲ. ಕಿರಣ್ ಅವರ ಪತ್ನಿ ಬೆಳಿಗ್ಗೆ 11.15ಕ್ಕೆ ಕಿರಣ್ ಗೆ ಫೋನ್ ಮಾಡಿ ಮಾತನಾಡಿದ್ದಾರೆ. ಮತ್ತೆ ಫೋನ್ ಮಾಡಿದಾಗ ಕಿರಣ್ ಫೋನ್ ಸ್ವಿಚ್ಡ್ ಆಫ್ ಆಗಿದೆ ಎಂದು ಆರೋಪಿಸಿದರು.

ಕಿರಣ್ ಆತ್ಮಹತ್ಯೆ ಪ್ರಕರಣದಲ್ಲಿ ಯಾರೂ ರಾಜಕೀಯ ಮಾಡಬಾರದು. ಪೊಲೀಸರೆಲ್ಲ ಒಂದು ಕುಟುಂಬದವ ರಂತೆ ಇದ್ದೇವೆ. ನಮಗಾಗಿರುವ ನೋವು ಬೇರೆಯವರಿಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲ. ಜೀವ ಮತ್ತು ಜೀವನಕ್ಕ ಎಲ್ಲರೂ ಗೌರವ ನೀಡಬೇಕೇ ಹೊರತು ವದಂತಿ ಹಬ್ಬಿಸಬಾರದು. 

ಕೊಲೆಗೂ ಕಿರಣ್ ಆತ್ಮಹತ್ಯೆಗೂ ಯಾವುದೇ ಸಂಬಂಧವಿಲ್ಲ. ನಮ್ಮ ಕುಟುಂಬದ ಒಂದು ಜೀವವನ್ನು ಕಳೆದು ಕೊಂಡು ನಮಗೆ ಅತೀವ ನೋವಾಗಿದೆ. ಅವರ ಕುಟುಂಬದವರು, ಅಧಿಕಾರಿಗಳ ಜೊತೆ ಚೆರ್ಚೆ ನಡೆಸಸಿದ್ದು ಅವರು ಬಹಳ ಒಳ್ಳೆಯ ಹಾಗೂ ದಕ್ಷ ಅಧಿಕಾರಿಯಾಗಿದ್ದರು. ನಮ್ಮ ಇಲಾಖೆಯ ಅಧಿಕಾರಿಗಳು ಬಹಳ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಿರಣ್ ಸಾವಿಗೆ ಕಾರಣ ಏನೆಂಬುದನ್ನು ತನಿಖೆ ನಡೆಸಿ ಸತ್ಯಾಂಶವನ್ನು ಪತ್ತೆ ಮಾಡುತ್ತೇವೆಂದು ದಕ್ಷಿಣ ವಲಯ ಐಜಿಪಿ ವಿಫುಲ್ ಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com