ನಿರಾಳವಾಗಿ ಉಸಿರಾಡಿ! ಸಿಲಿಕಾನ್ ಸಿಟಿ ಬೆಂಗಳೂರಿನ ವಾಯು ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ

ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ಏಪ್ರಿಲ್ ಮತ್ತು ಜುಲೈ ನಡುವೆ ಬೆಂಗಳೂರು ಮಹಾನಗರದ ಗಾಳಿಯ ಗುಣಮಟ್ಟದಲ್ಲಿ ಶೇ. 29.7 ಸುಧಾರಣೆ ಕಂಡುಬಂದಿದೆ. ಅಲ್ಲದೆ ನಗರದಲ್ಲಿ ಶಬ್ದ ಮಾಲಿನ್ಯ ಸಹ ತುಸು ಮಟ್ಟಿಗೆ ಕಡಿಮೆ ಆಗಿದೆ ಎಂದು ರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.
ನಿರಾಳವಾಗಿ ಉಸಿರಾಡಿ! ಸಿಲಿಕಾನ್ ಸಿಟಿ ಬೆಂಗಳೂರಿನ ವಾಯು ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ

ಬೆಂಗಳೂರು: ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ಏಪ್ರಿಲ್ ಮತ್ತು ಜುಲೈ ನಡುವೆ ಬೆಂಗಳೂರು ಮಹಾನಗರದ ಗಾಳಿಯ ಗುಣಮಟ್ಟದಲ್ಲಿ ಶೇ. 29.7 ಸುಧಾರಣೆ ಕಂಡುಬಂದಿದೆ. ಅಲ್ಲದೆ ನಗರದಲ್ಲಿ ಶಬ್ದ ಮಾಲಿನ್ಯ ಸಹ ತುಸು ಮಟ್ಟಿಗೆ ಕಡಿಮೆ ಆಗಿದೆ ಎಂದು ರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

ಮಾರ್ಚ್ 25 ರಿಂದ ವಿಧಿಸಲಾದ ಮೊದಲ ಲಾಕ್‌ಡೌನ್, ನಂತರದ ಭಾಗಶಃ ಲಾಕ್‌ಡೌನ್‌ಗಳು, ಶಾಲೆ, ಕಾಲೇಜು ಮುಚ್ಚುಗಡೆ  ಮತ್ತು ಖಾಸಗಿ ಮತ್ತು ಸರ್ಕಾರಿ ಕಚೇರಿಗಳಲ್ಲಿನ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವುದು ಗಾಳಿಯ ಗುಣಮಟ್ಟದಲ್ಲಿ ಸುಧಾರಣೆಗೆ ಸ್ಪಷ್ಟವಾಗಿ ಕಾರಣವಾಗಿದೆ.

ನಿರಂತರ ವಾಯು ಗುಣಮಟ್ಟ ಮಾನಿಟರಿಂಗ್ ಕೇಂದ್ರಗಳನ್ನು ಬಳಸಿಕೊಂಡು ನಗರದಲ್ಲಿ ವಿವಿಧ ವ್ಯಾಪ್ತಿಯಲ್ಲಿನ ಏಳು ಪ್ರತ್ಯೇಕ ಸ್ಥಳಗಳಲ್ಲಿ  ವಾಯು ಗುಣಮಟ್ಟದ ಮೇಲ್ವಿಚಾರಣೆಯನ್ನು ನಡೆಸಲಾಗುತ್ತದೆ: ಪಶುವೈದ್ಯಕೀಯ ಕಾಲೇಜು (ಹೆಬ್ಬಾಳ)ಶಾಲಿನಿ ಆಟದ ಮೈದಾನ (ಜಯನಗರ), ಕವಿಕಾ (ಮೈಸೂರು ರಸ್ತೆ), ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಚೆಸ್ಟ್ ಡಿಸೀಸಸ್ (ನಿಮ್ಹಾನ್ಸ್ ಆವರಣ) , ಸೆಂಟ್ರಲ್ ಸಿಲ್ಕ್ ಬೋರ್ಡ್ (ಹೊಸೂರು ರಸ್ತೆ), ಕೆಎಸ್‌ಆರ್ ರೈಲ್ವೆ ನಿಲ್ದಾಣ ಮತ್ತು ಎಸ್‌ಜಿ ಹಳ್ಳಿ ಪ್ರದೇಶಗಳಲ್ಲಿ ಈ ಪರೀಕ್ಷೆ ನಡೆಸಲಾಗುತ್ತದೆ.

ದೈನಂದಿನ ವಾಯು ಗುಣಮಟ್ಟವನ್ನು ನಿರ್ಣಯಿಸಲು ಮಾನದಂಡವಾಗಿ ವಾಯು ಗುಣಮಟ್ಟ ಸೂಚ್ಯಂಕ ಕಾರ್ಯನಿರ್ವಹಿಸುತ್ತದೆ ಎಂದು ಕೆಎಸ್‌ಪಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಇದು 0 ಮತ್ತು 500 ವ್ಯಾಪ್ತಿಯಲ್ಲಿ ಮೌಲ್ಯಗಳನ್ನು ನೀಡುತ್ತದೆ. . ಮೌಲ್ಯಗಳು 0 ಮತ್ತು 50 ರ ನಡುವೆ ಇದ್ದರೆ, ಗಾಳಿಯ ಗುಣಮಟ್ಟ ಉತ್ತಮವಾಗಿರುತ್ತದೆ ಮತ್ತು ಅದು 51 ಮತ್ತು 100 ರ ನಡುವೆ ಇದ್ದರೆ ಅದು ಮಧ್ಯಮವಾಗಿರುತ್ತದೆ, ”ಎಂದು ಅವರು ಹೇಳಿದರು. “ನಗರವು ಒಟ್ಟಾರೆ 52 ರ ಎಕ್ಯೂಐ ಮೌಲ್ಯವನ್ನು ಹೊಂದಿದೆ, ಇದು ತೃಪ್ತಿಕರ ಮಟ್ಟವಾಗಿದೆ,  ಇದರರ್ಥ ಗುಣಮಟ್ಟವು ಅಗಾಧವಾಗಿ ಸುಧಾರಿಸಿದೆ, "  ಕೆಲವು ತಿಂಗಳುಗಳ ಅವಧಿಯಲ್ಲಿ ನಗರವು ಅಂತಹ ಉತ್ತಮ ಗಾಳಿಯ ಗುಣಮಟ್ಟವನ್ನು  ಪಡೆದಿರುತ್ತದೆ.

2019 ಕ್ಕೆ ಹೋಲಿಸಿದರೆ, 10 ಪ್ರದೇಶಗಳಲ್ಲಿ ಒಂಬತ್ತರಲ್ಲಿ ಶಬ್ದ ಮಾಲಿನ್ಯ ಮಟ್ಟದಲ್ಲಿ 7.3% ರಷ್ಟು ಇಳಿಕೆ ಕಂಡುಬಂದಿದೆ. ನಿಮ್ಹಾನ್ಸ್ ಕ್ಯಾಂಪಸ್‌ನೊಳಗಿನ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಮಾತ್ರ 3.7% ಹೆಚ್ಚಳವನ್ನು ತೋರಿಸಿದೆ. "ಕೋವಿಡ್ -19 ಕೇರ್ ಸೆಂಟರ್ ಅಲ್ಲಿ ತೆರೆದ ನಂತರ ವಾಹನಗಳ ಚಲನೆ ಮತ್ತು ಇತರ ಚಟುವಟಿಕೆಗಳಲ್ಲಿನ ಹೆಚ್ಚಳವೇ ಈ ಬದಲಾವಣೆಗೆ ಕಾರಣ.  ಚರ್ಚ್ ಸ್ಟ್ರೀಟ್ ಮತ್ತು ಬಿಟಿಎಂ ಲೇ ಔಟ್  ಮಾತ್ರ ಶಬ್ದಮಾಲಿನ್ಯ ಮಟ್ಟದ ಶೇಕಡಾವಾರು ಪ್ರಮಾಣದಲ್ಲಿ ಎರಡು ಅಂಕೆಗಳ ಇಳಿಕೆ ತೋರಿಸಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com