ಕೊರೋನಾದಿಂದ ಮುಕ್ತಗೊಂಡ ಬೆಳಗಾವಿಯ ಹಿರೇಬಾಗೇವಾಡಿ ಗ್ರಾಮ!

ಕೊರೋನಾ ವೈರಸ್ ಕುರಿತು ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಸದ್ದು ಮಾಡಿದ್ದ ಬೆಳಗಾವಿಯ ಪುಟ್ಟ ಗ್ರಾಮ ಹಿರೇಬಾಗೇವಾಡಿ ಇದೀಗ ಕೊರೋನಾದಿಂದ ಮುಕ್ತಗೊಂಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಕೊರೋನಾ ವೈರಸ್ ಕುರಿತು ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಸದ್ದು ಮಾಡಿದ್ದ ಬೆಳಗಾವಿಯ ಪುಟ್ಟ ಗ್ರಾಮ ಹಿರೇಬಾಗೇವಾಡಿ ಇದೀಗ ಕೊರೋನಾದಿಂದ ಮುಕ್ತಗೊಂಡಿದೆ. 

ಈ ಹಿಂದೆ ಗ್ರಾಮದಲ್ಲಿ ಬರೋಬ್ಬರಿ 49 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದವು. ಇದೀಗ ಈ ಎಲ್ಲಾ ಸೋಂಕಿತರೂ ಕೂಡ ಸೋಂಕಿನಿಂದ ಗುಣಮುಖರಾಗಿದ್ದು, ಗ್ರಾಮ ಕೊರೋನಾದಿಂದ ಮುಕ್ತಗೊಂಡಿದೆ. 

ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ 18 ಸಾವಿರ ಜನಸಂಖ್ಯೆಯಿರುವ ಪುಟ್ಟ ಗ್ರಾಮವಾಗಿದ್ದು, ಕೊರೋನಾ ವೈರಸ್ ಈ ಗ್ರಾಮವನ್ನು ಹೈರಾಣು ಮಾಡಿದೆ. ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಏಪ್ರಿಲ್ 3ರಿಂದ ಗ್ರಾಮವನ್ನು ಸೀಲ್'ಡೌನ್ ಮಾಡಲಾಗಿತ್ತು. ಇದೀಗ ಗ್ರಾಮವನ್ನು ಕಂಟೈನ್ಮೆಂಟ್ ಝೋನ್ ನಿಂದ ಮುಕ್ತ ಎಂದು ಘೋಷಣೆ ಮಾಡಿದೆ. 

ಹಿರೇಬಾಗೇವಾಡಿ ಗ್ರಾಮದ 20 ವರ್ಷದ ಯುವಕನೊಬ್ಬ ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗ್ರಾಮಕ್ಕೆ ವಾಪಸ್ಸಾಗಿದ್ದ. ನಂತರ ಆತನನ್ನು ಪರೀಕ್ಷೆಗೊಳಪಡಿಸಿದ್ದಾಗ ಸೋಂಕು ದೃಢಪಟ್ಟಿತ್ತು. ಬಳಿಕ ಗ್ರಾಮದ 48 ಜನರಿಗೆ ಕೊರೋನಾ ಇರುವುದು ದೃಢಪಟ್ಟಿತ್ತು. ಬಳಿಕ 80 ವರ್ಷದ ವೃದ್ಧೆಯೊಬ್ಬರೂ ಕೂಡ ಮಹಾಮಾರಿಗೆ ಬಲಿಯಾಗಿದ್ದರು. ಬಳಿಕ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. 

ಸಹಾಯ ಆಯುಕ್ತ ಅಶೋಕ್ ತೇಲಿಯವರು ಮಾತನಾಡಿ, ಹಿರೇಬಾಗೇವಾಡಿಯನ್ನು ಕಂಟೈನ್ಮೆಂಟ್ ಝೋನ್ ಮುಕ್ತವೆಂದು ಘೋಷಣೆ ಮಾಡಲಾಗಿದೆ. ಇದೀಗ ಗ್ರಾಮದಲ್ಲಿ ಎಂದಿನಂತೆ ಎಲ್ಲಾ ವ್ಯವಹಾರ ಚಟುವಟಿಕೆಗಳು ನಡೆಯುತ್ತಿವೆ. ಭದ್ರತಾ ಸಿಬ್ಬಂದಿಗಳನ್ನು ಹಿಂದಕ್ಕೆ ತೆಗೆದುಕೊಳ್ಲಲಾಗುತ್ತಿದೆ. ಆದರೆ, ಜಾಗೃತಿ ಅಭಿಯಾನಗಳು ಎಂದಿನಂತೆ ಮುಂದುವರೆಯಲಿವೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com