ಬಂಡೀಪುರ ಹುಲಿ ಮೀಸಲು ಪ್ರದೇಶದಲ್ಲಿ ಅತಿಕ್ರಮಣ ಪ್ರವೇಶ: ಮೂವರು ಪೋರ್ಚುಗೀಸರು ಅಧಿಕಾರಿಗಳ ವಶಕ್ಕೆ

ಲಾಕ್ ಡೌನ್ ಸಂದರ್ಭದಲ್ಲಿ ಅನುಮತಿ ಇಲ್ಲದೇ ಬಂಡೀಪುರ ಹುಲಿ ಮೀಸಲು ಅರಣ್ಯವನ್ನು ಅತಿಕ್ರಮವಾಗಿ ಪ್ರವೇಶಿಸಿದ ಮೂವರು ಪೋರ್ಚುಗೀಸ್ ಪ್ರಜೆಗಳನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬಂಡೀಪುರ ಹುಲಿ ಮೀಸಲು ಅರಣ್ಯ
ಬಂಡೀಪುರ ಹುಲಿ ಮೀಸಲು ಅರಣ್ಯ

ಬೆಂಗಳೂರು: ಲಾಕ್ ಡೌನ್ ಸಂದರ್ಭದಲ್ಲಿ ಅನುಮತಿ ಇಲ್ಲದೇ ಬಂಡೀಪುರ ಹುಲಿ ಮೀಸಲು ಅರಣ್ಯವನ್ನು ಅತಿಕ್ರಮವಾಗಿ ಪ್ರವೇಶಿಸಿದ ಮೂವರು ಪೋರ್ಚುಗೀಸ್ ಪ್ರಜೆಗಳನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ನಾವು ಅವರನ್ನು ಬಂಧಿಸಿಲ್ಲ, ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದೇವೆ, ದಾರಿ ತಪ್ಪಿ ನಾವು ಅರಣ್ಯ ಪ್ರವೇಶಿಸಿದ್ದಾಗಿ ಅವರು ತಿಳಿಸಿದ್ದಾಗಿ ಅವರು ಒಪ್ಪಿಕೊಂಡಿರುವುದಾಗಿ ಬಂಡಿಪುರ ಅರಣ್ಯ ಸಂರಕ್ಷಣಾ ಅಧಿಕಾರಿ ಟಿ ಬಾಲಚಂದ್ರ ತಿಳಿಸಿದ್ದಾರೆ.

ಹುಲಿ ಮೀಸಲು ಅಧಿಕಾರಿಯೊಬ್ಬರು ಪೋರ್ಚುಗೀಸ್ ಅತಿಕ್ರಮಣದ ಛಾಯಾಚಿತ್ರ ಮಾಡಿದ್ದಾರೆ. ತೆಗೆದಿದ್ದಾರೆ. ಅರಣ್ಯಾಧಿಕಾರಿಗಳ ವಿಚಾರಣೆ ನಂತರ ಪೋರ್ಚುಗೀಸ್ ಪ್ರಜೆಗಳು ವಾಪಸಾಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಭಾನುವಾರ ಮೂರು ಬುಲೆಟ್ ಬೈಕ್ ನಲ್ಲಿ ಮೂವರು ಫೋರ್ಚುಗೀಸರು ಆಗಮಿಸಿದ್ದರು. ನುನೊ ರಿಕಾರ್ಡೊ ಬರ್ನಾರ್ಡೆಸ್ ಮಿರಾಂಡಾ ಪ್ಯಾಸಿಯೆನ್ಸಿಯಾ, ಏಂಜೆಲೊ ಮಿಗುಯೆಲ್ ಗ್ಯಾರಿಡೊ ಮತ್ತು ತೋಮಸ್ ಪಿನ್ಹೋ ಮಾರ್ಕ್ವೆಜ್ ಎಂದು ಗುರುತಿಸಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com