ಕೊರೋನಾ ಅಬ್ಬರಕ್ಕೆ ಬೆಂಗಳೂರಿನ 8 ಪೊಲೀಸ್ ಸ್ಟೇಷನ್ ಗಳು ಸೀಲ್ ಡೌನ್

ನಗರದಲ್ಲಿ ಕೊರೋನಾ ಪೀಡಿತರು ಮತ್ತು ಕೊರೋನಾದಿಂದ ಮೃತಪಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ನಿವಾಸಿಗಳನ್ನು ಬೆಚ್ಚಿಬೀಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ನಗರದಲ್ಲಿ ಕೊರೋನಾ ಪೀಡಿತರು ಮತ್ತು ಕೊರೋನಾದಿಂದ ಮೃತಪಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ನಿವಾಸಿಗಳನ್ನು ಬೆಚ್ಚಿಬೀಳಿಸಿದೆ.

ಕೊರೋನಾ ಲಾಕ್ ಡೌನ್ ಸಮಯದಲ್ಲಿ ಜನರ ಜೀವನ ಕಾಪಾಡುವ, ಶಿಸ್ತು, ನಿಯಮ ಪಾಲನೆಯನ್ನು ನೋಡಿಕೊಳ್ಳುತ್ತಿದ್ದ ಪೊಲೀಸರಿಗೂ ಕೊರೋನಾ ಬಿಸಿ ತಟ್ಟಿದೆ. ಪೊಲೀಸರಿಗೆ ಸೋಂಕು ತಗಲಿರುವುದರಿಂದ ಜೀವನ್ ಭೀಮಾ ನಗರ, ಜೆ.ಜೆ.ನಗರ, ಹೆಣ್ಣೂರು, ಜಯನಗರ, ಹೆಬ್ಬಗೋಡಿ, ಸೋಲದೇವನಹಳ್ಳಿ, ಸಿಟಿ ಮಾರ್ಕೆಟ್, ಭೈಯಪ್ಪನಹಳ್ಳಿ ಠಾಣೆ ಸೀಲ್ ಡೌನ್ ಮಾಡಲಾಗಿದೆ.

ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಕ್ವಾರಂಟೈನ್ ನಲ್ಲಿಡಲಾಗಿದೆ. ಪೊಲೀಸ್ ಠಾಣೆಗಳಲ್ಲಿ ಬಂಧಿತ ಆರೋಪಿಗಳಲ್ಲಿ ಸೋಂಕು ಪತ್ತೆಯಾದ ನಂತರ ಠಾಣೆಗಳು ಸೀಲ್ ಡೌನ್ ಮಾಡಲಾಗಿದೆ.

ಹೀಗಾಗಿ ಇನ್ನು ಮುಂದೆ ನಗರದ ಪೊಲೀಸರು ಬಂಧಿತ ಆರೋಪಿಗಳನ್ನು ನೇರವಾಗಿ ಪೊಲೀಸ್ ಠಾಣೆಗೆ ಕರೆತರುವುದಿಲ್ಲ. ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಮೊದಲು ಅಲ್ಲಿ ಕೊರೋನಾ ಪರೀಕ್ಷೆಯಾಗಿ ವರದಿ ನೆಗೆಟಿವೇ ಬಂದ ನಂತರ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತದೆ ಬೆಂಗಳೂರು ಪೊಲೀಸ್ ಆಯುಕ್ತ ಕಚೇರಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com