ಇಳಿ ವಯಸ್ಸಿನಲ್ಲೂ ಕೊರೋನಾ ಗೆದ್ದು ರೋಗಿಗಳಿಗೆ ಭರವಸೆಯ ಆಶಾಕಿರಣವಾದ 97ರ ವೃದ್ಧ!

1923 ರಲ್ಲಿ ಜನಿಸಿದ್ದ ವ್ಯಕ್ತಿ ಬುಧವಾರ ಕೊರೋನಾದಿಂದ ಗುಣಮುಖರಾಗಿ ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ವಯಸ್ಸಾದ ರೋಗಿಗಳಲ್ಲಿ ದೇಶದಲ್ಲೇ  ಇವರೇ ಮೊದಲು ಕೊರೋನಾ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ:ಆಗ್ರಾದ 97 ವರ್ಷದ ವೃದ್ಧರೊಬ್ಬರು ಕೊರೋನಾ ಗೆದ್ದು ಇತರ ರೋಗಿಗಳಲ್ಲಿ ಭರವಸೆ ಮೂಡಿಸಿದ್ದಾರೆ,

1923 ರಲ್ಲಿ ಜನಿಸಿದ್ದ ವ್ಯಕ್ತಿ ಬುಧವಾರ ಕೊರೋನಾದಿಂದ ಗುಣಮುಖರಾಗಿ ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ವಯಸ್ಸಾದ ರೋಗಿಗಳಲ್ಲಿ ದೇಶದಲ್ಲೇ  ಇವರೇ ಮೊದಲು ಕೊರೋನಾ ಗೆಲ್ಲುವಲ್ಲಿ ಯಶ ಸ್ವಿಯಾಗಿದ್ದಾರೆ.

ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಡಿಸ್ಟ್ರಿಕ್ ಮ್ಯಾಜಿಸ್ಟ್ರೇಟ್  ಪ್ರಭು ಎನ್ ಸಿಂಗ್ ಐತಿಹಾಸಿಕ ನಗರಿಯಲ್ಲಿ ಇದೊಂದು ಹೆಮ್ಮೆಯ ವಿಷಯ ಎಂದು ಹೇಳಿದ್ದಾರೆ,

ಅವರ ದೈನಂದಿನ ಚಲನವಲನಗಳ ಮೇಲೆ ನಮ್ಮ ತಂಡವೊಂದು ನಿಗಾ ಇರಿಸಿತ್ತು, ಅವರ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದಿದ್ದು ನಮಗೆಲ್ಲಾ ಸಂತೋಷ ತಂದಿದೆ ಎಂದು ತಿಳಿಸಿದ್ದಾರೆ.

97 ವರ್ಷದ ವೃದ್ಧರು ಕೊರೋನಾದಿಂದ ಗುಣಮುಖರಾಗಿರುವುದು ನಮ್ಮಲ್ಲಿ ಭರವಸೆಯ ಆಶಾ ಕಿರಣ ಮೂಡಿಸಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. 

ಏಪ್ರಿಲ್ 29 ರಂದು ನಯತಿ ಆಸ್ಪತ್ರೆಗೆ ದಾಖಲಾಗಿದ್ದರು, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಅವರಿಗೆ ಆರಂಭದಲ್ಲಿ ಆಕ್ಸಿಜನ್ ಕೊರತೆಯುಂಟಾಗಿತ್ತು. ಆಮೇಲೆ ನಿಧಾನವಾಗಿ ಅವರು ಚೇತರಿಸಿಕೊಂಡರು ಎಂದು ವಿವರಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com