• Tag results for ಗುಣಮುಖ

ಬೆಂಗಳೂರು: ಕೋವಿಡ್ ನಿಂದ ಚೇತರಿಸಿಕೊಂಡ ಶೇ.1-2 ರಷ್ಟು ರೋಗಿಗಳಿಗೆ ಮತ್ತೆ ಜ್ವರ

ಕೋವಿಡ್-19 ನಿಂದ ಚೇತರಿಸಿಕೊಂಡ ರೋಗಿಗಳಲ್ಲಿ 14 ದಿನಗಳ ನಂತರ ಮತ್ತೆ ಜ್ವರ ಕಾಣಿಸಿಕೊಳ್ಳುತ್ತಿದ್ದು, ಸ್ಪಷ್ಟ ಕಾರಣ ಇಲ್ಲದೆ ವೈದ್ಯರು ಗೊಂದಲಕ್ಕೊಳಗಾಗಿದ್ದಾರೆ.

published on : 24th October 2020

ಕೋವಿಡ್-19: ಸೋಂಕಿನಿಂದ ಗುಣಮುಖರಾದ ಶೇ.50ರಷ್ಟು ಮಂದಿಯಲ್ಲಿ ಆರೋಗ್ಯ ಸಮಸ್ಯೆ!

ಕೊರೋನಾ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಶೇ.50ರಷ್ಟು ಜನರಲ್ಲಿ ಮತ್ತೆ ಆರೋಗ್ಯ ಸಮಸ್ಯೆಗಳು ಎದುರಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

published on : 23rd October 2020

ಕೋವಿಡ್ ಸೋಂಕಿನಿಂದ ಗುಣಮುಖ: ವೈದ್ಯರಿಗೆ ಧನ್ಯವಾದ ಸಲ್ಲಿಸಿದ ಮಿಲ್ಕಿ ಬ್ಯೂಟಿ ತಮನ್ನಾ

ಮಿಲ್ಕಿ ಬ್ಯೂಟಿ  ತಮನ್ನಾ  ಕೋವಿಡ್ -19  ಸೋಂಕಿನಿಂದ  ಗುಣಮುಖರಾಗಿದ್ದು, ಇದೀಗ ಮುಂಬೈನಲ್ಲಿರುವ  ತಮ್ಮ  ಮನೆ ಸೇರಿಕೊಂಡಿದ್ದಾರೆ.

published on : 17th October 2020

ಶ್ವಾಸಕೋಶದ ಮೇಲಷ್ಟೇ ಅಲ್ಲ, ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟಿಸಿ ಮಾರಣಾಂತಿಕ ಸಮಸ್ಯೆ ಸೃಷ್ಟಿಸುತ್ತಿದೆ ಕೊರೋನಾ!

ಇಷ್ಟು ದಿನ ಶ್ವಾಸಕೋಶಗಳ ಮೇಲೆ ಪರಿಣಾಮ ಬೀರಿ ಉಸಿರಾಟ ಸಮಸ್ಯೆಯನ್ನು ಸೃಷ್ಟಿಸುತ್ತಿದೆ ಎಂದಷ್ಟೇ ಹೇಳಲಾಗುತ್ತಿದ್ದ ಮಹಾಮಾರಿ ಕೊರೋನಾ ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡು ಮನುಷ್ಯನ ಅಪಧಮನಿಗಳಲ್ಲಿ ರಕ್ತವನ್ನು ಹೆಪ್ಪುಗಟ್ಟಿಸಿ ಮಾರಣಾಂತಿಕ ಸಮಸ್ಯೆಯನ್ನು ಹುಟ್ಟುಹಾಕುತ್ತಿದೆ ಎಂದು ಹೇಳಲಾಗುತ್ತಿದೆ. 

published on : 16th October 2020

ಕ್ಯಾನ್ಸರ್ ರೋಗಿಗಳು ಸಹ ಯಾವುದೇ ತೊಂದರೆ ಇಲ್ಲದೆ ಕೋವಿಡ್-19 ನಿಂದ ಚೇತರಿಸಿಕೊಳ್ಳುತ್ತಿದ್ದಾರೆ!

ಕೊರೋನಾ ಸೋಂಕಿಗೊಳಗಾಗಿರುವ ರಾಜ್ಯದ ಅನೇಕ ಕ್ಯಾನ್ಸರ್ ರೋಗಿಗಳು ಯಾವುದೇ ತೊಂದರೆಗಳಿಲ್ಲದೆಯೇ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಬೆಳವಣಿಗೆಗಳು ಕಂಡು ಬರುತ್ತಿದೆ. 

published on : 7th October 2020

ದೇಶದಲ್ಲಿ ಹೆಚ್ಚುತ್ತಿರುವ ಗುಣಮುಖರ ಸಂಖ್ಯೆ: ಜಾಗತಿಕ ಮಟ್ಟದಲ್ಲಿ ಸ್ಥಾನ ಕಾಯ್ದುಕೊಂಡ ಭಾರತ

ಭಾರತದಲ್ಲಿ ಸೋಂಕಿತರ ಜೊತೆ ಜೊತೆಗೆ ಗುಣಮುಖರಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲಿದ್ದು, ಜಾಗತಿಕ ಮಟ್ಟದಲ್ಲಿ ತನ್ನ ಸ್ಥಾನವನ್ನು ಕಾಯ್ದುಕೊಂಡಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ.

published on : 2nd October 2020

ಡೊನಾಲ್ಡ್ ಟ್ರಂಪ್, ಮೆಲಾನಿಯಾ ಟ್ರಂಪ್'ಗೆ ಕೊರೋನಾ ದೃಢ: ಶೀಘ್ರಗತಿಯಲ್ಲಿ ಗುಣಮುಖರಾಗುವಂತೆ ಪ್ರಧಾನಿ ಮೋದಿ ಶುಭ ಹಾರೈಕೆ

ಕೊರೋನಾ ಸೋಂಕಿಗೊಳಗಾಗಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಮೆಲಾನಿಯಾ ಟ್ರಂಪ್ ಅವರು ಶೀಘ್ರಗತಿಯಲ್ಲಿ ಗುಣಮುಖರಾಗುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಶುಭ ಹಾರೈಸಿದ್ದಾರೆ.

published on : 2nd October 2020

ಕೋವಿಡ್-19ನಿಂದ ಗುಣಮುಖರಾದ ರೋಗಿಗಳಲ್ಲಿ ಬೊಜ್ಜುತನ! ಕಾರಣ, ವೈದ್ಯರ ಸಲಹೆಗಳು ಇಲ್ಲಿದೆ

ಕೋವಿಡ್-19 ನಿಂದ ಗುಣಮುಖರಾದ ರೋಗಿಗಳಲ್ಲಿ ಬೊಜ್ಜುತನ ಕಂಡುಬರುತ್ತಿರುವುದನ್ನು ವೈದ್ಯರು ಗಮನಿಸಿದ್ದಾರೆ. ಇಲ್ಲಿಯವರೆಗೆ ಅನೇಕರು ಹೃದಯದ ತೊಂದರೆಗಳು, ದೀರ್ಘಕಾಲದ ಉಸಿರಾಟದ ಕಾಯಿಲೆಗಳು, ಆಯಾಸ ಇತ್ಯಾದಿ ಸಮಸ್ಯೆಗಳನ್ನು ಗುಣಮುಖರಾದ ನಂತರ ಎದುರಿಸುತ್ತಿದ್ದಾರೆ.

published on : 29th September 2020

ಕೊರೋನಾ ವಿರುದ್ಧ ಭಾರತ ದಿಟ್ಟ ಹೋರಾಟ: 11 ದಿನಗಳಲ್ಲಿ 10 ಲಕ್ಷ ಮಂದಿ ಗುಣಮುಖ

ಕೊರೋನಾ ವಿರುದ್ಧ ದಿಟ್ಟ ಹೋರಾಟ ನಡೆಸುತ್ತಿರುವ ಭಾರತದಲ್ಲಿ ಕೇವಲ 11 ದಿನಗಳಲ್ಲಿ ಬರೋಬ್ಬರಿ 10 ಮಂದಿ ಗುಣಮುಖರಾಗಿದ್ದು, ಇದೀಗ ದೇಶದಲ್ಲಿ 60 ಲಕ್ಷ ಮಂದಿ ಗುಣಮುಖರ ಪೈಕಿ ಕೇವಲ 10 ಲಕ್ಷ ಸಕ್ರಿಯ ಪ್ರಕರಣಗಳಷ್ಟೇ ಇದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ. 

published on : 28th September 2020

ಕೋವಿಡ್-19: ಚೇತರಿಕೆಯಲ್ಲಿ ಬ್ರೆಜಿಲ್ ಹಿಂದಿಕ್ಕಿದ ಭಾರತ, ವಿಶ್ವದಲ್ಲಿಯೇ ನಂಬರ್ 1

ವಿಶ್ವದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯ ಕೋವಿಡ್-19 ರೋಗಿಗಳು ಭಾರತದಲ್ಲಿ ಗುಣಮುಖರಾಗುತ್ತಿದ್ದಾರೆ.ಜಾನ್ಸ್ ಹಾಪ್ ಕಿನ್ಸ್ ಯುನಿವರ್ಸಿಟಿ ಮಾಹಿತಿ ಪ್ರಕಾರ ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚಿನ  37, 80,107 ಮಂದಿ ಸೋಂಕಿತರು ಭಾರತದಲ್ಲಿ ಕೋವಿಡ್-19  ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

published on : 14th September 2020

ಮನೆಯಲ್ಲೇ ಚಿಕಿತ್ಸೆ ಪಡೆದು ಕೊರೋನಾ ಗೆದ್ದ 105 ವರ್ಷದ ವೃದ್ಧೆ!

ಕೊರೋನಾ ಹಾಟ್'ಸ್ಪಾಟ್ ಎಂದೇ ಹೇಳಲಾಗುತ್ತಿರುವ ಕೊಪ್ಪಳ ಜಿಲ್ಲೆಯಲ್ಲಿ ನಿತ್ಯವೂ ಸಾಲು ಸಾಲು ಸಾವುಗಳು ಸಾಮಾನ್ಯ ಎನ್ನುವಂತಾಗಿದೆ. ಇದರ ಮಧ್ಯೆಯೂ ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ 105 ವರ್ಷದ ಕಮಲಮ್ಮ ಲಿಂಗನಗೌಡ ಹಿರೇಗೌಡ್ರ ಅವರು, ಸೋಂಕು ತಗುಲಿದ್ದರೂ ಮನೆಯಲ್ಲಿಯೇ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. 

published on : 13th September 2020

ಕೋವಿಡ್-19: 24 ಗಂಟೆಗಳಲ್ಲಿ ಗರಿಷ್ಠ 81,533 ಸೋಂಕಿತರು ಗುಣಮುಖ, 5 ರಾಜ್ಯಗಳ ಪಾಲೇ ಶೇ.60

ಭಾರತದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವಂತೆಯೇ ಗುಣಮುಖರಾಗುತ್ತಿರುವವರ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗುತ್ತಿದೆ.

published on : 12th September 2020

ಭಾರತದಲ್ಲಿ 3/4 ರಷ್ಟು ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ: ಕೇಂದ್ರ ಸರ್ಕಾರ

ಭಾರತದಲ್ಲಿ ಒಟ್ಟಾರೆ 46,59,985 ಸೋಂಕಿತರ ಪೈಕಿ ಶೇ.77.65ರಷ್ಟು ಜನರು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶನಿವಾರ ಮಾಹಿತಿ ನೀಡಿದೆ. 

published on : 12th September 2020

ಆಂಧ್ರ ಪ್ರದೇಶ: ಹೋಮ್ ಐಸೋಲೇಷನ್ ನಲ್ಲಿ ಕೋವಿಡ್-19 ನಿಂದ ಗುಣಮುಖರಾದ 102 ವರ್ಷದ  ವೃದ್ಧ ಮಹಿಳೆ

ಹೋಮ್ ಐಸೋಲೇಷನ್ ನಲ್ಲಿ ಕೋವಿಡ್-19 ನಿಂದ 102 ವರ್ಷದ ವೃದ್ಧ ಮಹಿಳೆಯೊಬ್ಬರು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಗುಣಮುಖರಾಗುವ ಮೂಲಕ ಜನರಲ್ಲಿ ಆತ್ಮ ವಿಶ್ವಾಸ ತುಂಬಿಸಿದ್ದಾರೆ.

published on : 8th September 2020

ಶೇ.78ರ ಸಮೀಪಕ್ಕೆ ಕೊರೋನಾ ಗುಣಮುಖರ ಪ್ರಮಾಣ

ದೇಶದಲ್ಲಿ ಕೋವಿಡ್ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಗುಣಮುಖ ಪ್ರಮಾಣ ಈಗ ಶೇ.8ರ ಸಮೀಪಕ್ಕೆ ಬಂದಿದೆ. 

published on : 7th September 2020
1 2 >