ಕೊರೋನಾ ಆತಂಕ ನಡುವಲ್ಲೂ ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ಮಾಯವಾದ ಸಾಮಾಜಿಕ ಅಂತರ!

ನಗರದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚುತ್ತಲೇ ಇದ್ದು, ಈ ನಡುವಲ್ಲೇ ಬೆಂಗಳೂರು ಮಹಾನಗರ ಸಾರಿಗೆ ನಿಗಮದ ನಿಲ್ದಾಣಗಳಲ್ಲಿ ಸಾಮಾಜಿಕ ಅಂತರ ಮರೆಯುತ್ತಿರುವ ಜನರು, ಬಸ್ ಹತ್ತಲು ಮುಗಿಬೀಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬರುತ್ತಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚುತ್ತಲೇ ಇದ್ದು, ಈ ನಡುವಲ್ಲೇ ಬೆಂಗಳೂರು ಮಹಾನಗರ ಸಾರಿಗೆ ನಿಗಮದ ನಿಲ್ದಾಣಗಳಲ್ಲಿ ಸಾಮಾಜಿಕ ಅಂತರ ಮರೆಯುತ್ತಿರುವ ಜನರು, ಬಸ್ ಹತ್ತಲು ಮುಗಿಬೀಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬರುತ್ತಿವೆ. 

ಈಗಾಗಲೇ ಬಿಎಂಟಿಸಿ ಚಾಲಕ-ನಿರ್ವಾಹಕರೊಬ್ಬರಲ್ಲಿ ಕೊರೋನಾ ಸೋಂಕು ಪಾಸಿಟಿವ್ ಬಂದಿರುವುದು ಬೆಳಕಿಗೆ ಬಂದಿದೆ. ಆದರೂ, ಜನರು ಆತಂಕವನ್ನು ಪಕ್ಕಕ್ಕಿಟ್ಟು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದು ವಿಪರ್ಯಾಸವೇ ಸರಿ. 

ಈಗಾಗಲೇ ಕಲಬುರಗಿ ಜಿಲ್ಲೆಯ ಅಫ್ಜಲ್ಪುರ ಮೂಲದ ಸುಮಾರು 40 ವರ್ಷದ ಚಾಲಕ ಹಾಗೂ ನಿರ್ವಾಹಕ ನಗರದ ಕೆ.ಆರ್.ಪುರಂ ಬಳಿಯ ದೂರವಾಣಿ ನಗರದ ಬಿಎಂಪಿಸಿ ಡಿಪೋ-24ರಲ್ಲಿ ಕರ್ತವ್ಯನ ನಿರ್ವಹಿಸುತ್ತಿದ್ದರು. ಲಾಕ್'ಡೌನ್ ವೇಳೆ ಮನೆಯಲ್ಲಿದ್ದ ಅವರು. ಮೇ.31ರಂದು ಕರ್ತವ್ಯಕ್ಕೆ ಹಾಜರಾಗಿದ್ದರು. ಈ ವೇಳೆ ಆರೋಗ್ಯ ತಪಾಸಣೆಗೆ ಒಳಗಾಗಿದ್ದು, ರೋಗ ಲಕ್ಷಣಗಳು ಇರಲಿಲ್ಲ. ಹೆಬ್ಬಾಳ-ಸಿಲ್ಕ್ ಬೋರ್ಡ್, ಮುಕ್ತೂರು-ಕೆ.ಆರ್.ಮಾರುಕಟ್ಟೆ, ಏರ್ಪೋರ್ಟ್-ವೈಟ್ ಫೀಲ್ಡ್ ಮಾರ್ಗಗಳಲ್ಲಿ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದು. ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂ.7ರಂದು ಬೌರಿಂಗ್ ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಿಸಿದ್ದರು. ಜೂ.10ಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದರು. ಪರೀಕ್ಷೆ ವರದಿ ಬುಧವಾರ ಹೊರಬಿದ್ದಿದೆ. 

ಕೊರೋನಾ ಪಾಸಿಟಿವ್ ಇದ್ದಿದ್ದರಿಂದ ಬಿಬಿಎಂಪಿ ಅಧಿಕಾರಿಗಳು ತಡರಾತ್ರಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜೊತೆಗೆ ಅವರ ಪತ್ನಿಯನ್ನೂ ಕ್ವಾರಂಟೈನ್ ಮಾಡಿದ್ದಾರೆ. 

ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಬಸ್ಸಿನಲ್ಲಿ ಸೀಟುಗಳಿರುವಷ್ಟು ಜನರು ಮಾತ್ರ ಬಸ್ ಹತ್ತಲು ಅವಕಾಶ ನೀಡಲಾಗಿದ್ದು, ಹೀಗಾಗಿ ಬಸ್ ಬರುತ್ತಿದ್ದಂತೆಯೇ ಬಸ್ ಬಳಿ ಮುಗಿಬೀಳುವ ಜನರು ಸೀಟಿಗಾಗಿ ಹುಡುಕಾಡುತ್ತಿದ್ದಾರೆ. ಬಳಿಕ ಸೀಟು ಸಿಗದೆ ನಿಲ್ಲುವ ಜನರನ್ನು ಬಸ್ಸಿನಿಂದ ಕೆಳಗಿಳಿಯುವಂತೆ ನಿರ್ವಾಹಕರು ಸೂಚಿಸುತ್ತಿದ್ದಾರೆ. 

ಪ್ರತೀ ಬಸ್ ನಲ್ಲಿ 40 ಮಂದಿ ಪ್ರಯಾಣಿಕರು ಕೂರುವಷ್ಟು ಅವಕಾಶ ಬಿಎಂಟಿಸಿ ಬಸ್ ನಲ್ಲಿದೆ. ಕೊರೋನಾ ಹಿನ್ನೆಲೆಯಲ್ಲಿ ಕೆಲವೇ ಬಸ್ ಗಳು ರಸ್ತೆಗಿಳಿದಿವೆ. ನಾವು ಬಸ್ ಗಳಲ್ಲಿಯೇ ಓಡಾಡುವ ಅಗತ್ಯವಿದೆ. ಆಟೋ ಅಥವಾ ಕ್ಯಾಬ್ ಗಳಲ್ಲಿ ಹೋಗಬೇಕಾದರೆ, ಪ್ರತೀದಿನ ರೂ.100 ಖರ್ಚು ಮಾಡಬೇಕು ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ. 

ನಮಗೆ ಬೇರೆ ದಾರಿಯಿಲ್ಲ. ಹೀಗಾಗಿ ಸೀಟಿಗಾಗಿ ಮುಗಿಬೀಳಲೇಬೇಕು. ವೈರಸ್ ಭೀತಿ ಒಂದೆಡೆಯಾದರೆ, ಮತ್ತೊಂದರೆ ಜೀವನ ಕೂಡ ಇದೆ. ಪ್ರಸ್ತುತ ಇರುವ ಹಣವನ್ನೆಲ್ಲವನ್ನೂ ಈಗಲೇ ಖರ್ಚು ಮಾಡಿದರೆ, ಮುಂದಿನ ದಿನದಲ್ಲಿ ನಾವೇನು ಮಾಡುವುದು. ನನ್ನಂತೆಯೇ ಸಾಕಷ್ಟು ಜನರು ಯೋಜನೆ ಮಾಡುತ್ತಿದ್ದಾರೆಂದು ಮತ್ತೊಬ್ಬ ಪ್ರಯಾಣಿಕ ಹೇಳಿದ್ದಾರೆ. 

ಬಿಎಂಟಿಸಿ ಬಸ್ ನಿರ್ವಾಹಕರು ಹಾಗೂ ಚಾಲಕರಿಗೆ ಪ್ರಸ್ತುತದ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸಲು ಇಷ್ಟವಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ. 

ಈಗಾಗಲೇ ಬೆಂಗಳೂರಿನಲ್ಲಿ ಗುರುವಾರ ಒಂದೇ ದಿನ ಬರೋಬ್ಬರಿ 17 ಪ್ರಕರಣಗಳು ಬೆಳಕಿಗೆ ಬಂದಿವೆ. ಕ್ಯೂ ವ್ಯವಸ್ಥೆಯನ್ನು ನಾವು ಅನುಸರಿಸಬಹುದು. ಆದರೆ, ಪ್ರಯಾಣಿಕರು ಅದನ್ನು ಪಾಲನೆ ಮಾಡುತ್ತಾರೆಯೇ? ಬಸ್ ಗಳಲ್ಲಿ ಹೆಚ್ಚೆಚ್ಚು ಜನರು ಒಳಗೆ ಬಾರದಂತೆ ನಿರ್ವಾಹಕರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆಂದು ಬಿಎಂಟಿಸಿ ನಿರ್ವಾಹಕ ನಿರ್ದೇಶಕಿ ಸಿ.ಶಿಖಾ ಅವರು ಹೇಳಿದ್ದಾರೆ. 

ಸಾರಥಿ ವಾಹನಗಳನ್ನು ಕಳುಹಿಸಲು ನಾವು ಆರಂಭಿಸುತ್ತಿದ್ದೇವೆ. ಈ ವೇಳೆ ಸಾಲಿನಲ್ಲಿ ನಿಂತು ಬಸ್ ಹತ್ತುವಂತೆ ಮನವಿ ಮಾಡಿಕೊಳ್ಳುತ್ತೇವೆಂದು ಬಿಎಂಟಿಸಿ ಮುಖ್ಯಸ್ಥೆ ನಂದೈಶ ರೆಡ್ಡಿಯವರು ಹೇಳಿದ್ದಾರೆ. 

ಪ್ರಯಾಣಿಕರದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ವಿವಿಧ ಪ್ರದೇಶಗಳಲ್ಲಿ ಜನರು ಹೆಚ್ಚೆಚ್ಚು ಸೇರಿರುವ ಸಂದರ್ಭದಲ್ಲಿ ಇಂತಹ ಕಾರ್ಯಗಳನ್ನು ಮಾಡುವುದು ಕಠಿಣವಾಗಿರುತ್ತೆದ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com