ಅಂತೂ ಇಂತೂ ಪಿಯುಸಿ ಪರೀಕ್ಷೆ ಮುಗೀತು!

ಮಾರಕ ಕೊರೋನಾ ವೈರಸ್ ನಿಂದಾಗಿ ಮುಂದೂಡಲ್ಪಟ್ಟಿದ್ದ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ಕೊನೆಗೂ ಇಂದು ನೆರವೇರಿದ್ದು, ಸೋಂಕಿನ ಭೀತಿ ನಡುವೆಯೇ ಸರ್ಕಾರ 3 ತಿಂಗಳ ಬಳಿಕ ಪರೀಕ್ಷೆಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದೆ.
ಹುಬ್ಬಳ್ಳಿ ಪರೀಕ್ಷಾ ಕೇಂದ್ರದಲ್ಲಿ ಪ್ರಾರ್ಥಿಸುತ್ತಿರುವ ವಿದ್ಯಾರ್ಥಿನಿ (TNIE ಚಿತ್ರ)
ಹುಬ್ಬಳ್ಳಿ ಪರೀಕ್ಷಾ ಕೇಂದ್ರದಲ್ಲಿ ಪ್ರಾರ್ಥಿಸುತ್ತಿರುವ ವಿದ್ಯಾರ್ಥಿನಿ (TNIE ಚಿತ್ರ)

ಬೆಂಗಳೂರು: ಮಾರಕ ಕೊರೋನಾ ವೈರಸ್ ನಿಂದಾಗಿ ಮುಂದೂಡಲ್ಪಟ್ಟಿದ್ದ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ಕೊನೆಗೂ ಇಂದು ನೆರವೇರಿದ್ದು, ಸೋಂಕಿನ ಭೀತಿ ನಡುವೆಯೇ ಸರ್ಕಾರ 3 ತಿಂಗಳ ಬಳಿಕ ಪರೀಕ್ಷೆಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದೆ.

ಮಾರ್ಚ್ ನಲ್ಲೇ ದ್ವಿತೀಯ ಪರೀಕ್ಷೆ ಆರಂಭವಾಗಿತ್ತು. ಅಂತಿಮವಾಗಿ ಮಾರ್ಚ್ 23 ರಂದು ಇಂಗ್ಲೀಷ್ ವಿಷಯದ ಪರೀಕ್ಷೆ ಒಂದೇ ಒಂದು ಬಾಕಿ ಇತ್ತು. ಆದರೆ ಪರೀಕ್ಷೆಗೂ ಮುನ್ನವೇ ಕೊರೋನಾ ಲಾಕ್ ಡೌನ್ ಆರಂಭವಾಗಿದ್ದರಿಂದ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಇದೀಗ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಕೈಗೊಂಡ ನಿರ್ಣಾಯಕ ನಿರ್ಧಾರ ಮತ್ತು ಸೂಕ್ತ ಮುಂಜಾಗ್ರತಾ ಕ್ರಮಗಳಿಂದಾಗಿ ಪರೀಕ್ಷೆ ಮುಕ್ತಾಯವಾಗಿದೆ. 

ಇಂದು ರಾಜ್ಯಾದ್ಯಂತ ಒಟ್ಟು 5.59 ಲಕ್ಷ ವಿದ್ಯಾರ್ಥಿಗಳು 1 ಸಾವಿರಕ್ಕೂ ಅಧಿಕ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದಾರೆ.  ಪರೀಕ್ಷೆಗಾಗಿ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕೆಲಸ ನಿರ್ವಹಿಸಿದ್ದು, ಪರೀಕ್ಷಾ ಕೇಂದ್ರ, ಡೆಸ್ಕ್ ಗಳನ್ನು ಸ್ಯಾನಿಟೈಸ್ ಮಾಡಿದ್ದರು. ಅಲ್ಲದೆ ಪರೀಕ್ಷೆಗೆ ಹಾಜರಾಗುವ ಪ್ರತೀಯೊಬ್ಬ ವಿದ್ಯಾರ್ಥಿಯನ್ನೂ ಥರ್ಮಲ್ ಸ್ಕ್ರೀನಿಂಗ್ ಮಾಡಿ ಬಳಿಕ ಹ್ಯಾಂಡ್ ಸ್ಯಾನಿಟೈಸ್ ನೀಡಿ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಅಲ್ಲದೆ ಎಲ್ಲ ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿತ್ತು. 

ಅಲ್ಲದೆ ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೂ ಕೆಲ ಜಿಲ್ಲೆಗಳಲ್ಲಿ ಪೋಷಕರು ಆತಕಂದಿಂದ ತಮ್ಮ ಮಕ್ಕಳೊಂದಿಗೇ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದರು. ಹೀಗಾಗಿ ಸಾಮಾಜಿಕ ಅಂತರ ಪಾಲನೆಯನ್ನು ಮರೆತು ಮಕ್ಕಳನ್ನು ಪರೀಕ್ಷಾ ಕೇಂದ್ರ ಕಳುಹಿಸಿಕೊಟ್ಟರು. ಪೋಷಕರನ್ನು ನಿಯಂತ್ರಿಸಲು ಅಧಿಕಾರಿಗಳು ಹರಸಾಹಸಪಡುವಂತಾಯಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com