ಕೋವಿಡ್-19: ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ 2 ಕೋಟಿ ರೂ. ನಷ್ಟು ಅಕ್ರಮ; ಕೆಆರ್ ಎಸ್ ಪಕ್ಷದಿಂದ ದೂರು ಸಲ್ಲಿಕೆ

ಕೋವಿಡ್-19 ವಿರುದ್ಧ ಹೋರಾಡಲು ರಕ್ಷ ಕವಚ ಪಿಪಿಇ ಕಿಟ್ ಗಳು, IV ಪ್ಲ್ಯೂಯಿಡ್  ಮತ್ತು  ಡಯಾಲಿಸಿಸ್ ಯಂತ್ರಗಳ ಖರೀದಿಯಲ್ಲಿ ರಾಜ್ಯ ಔಷಧಗಳ ಲಾಜೆಸ್ಟಿಕ್ ಮತ್ತು ದಾಸ್ತಾನು ಸೊಸೈಟಿಯಿಂದ 1.98 ಕೋಟಿಯಷ್ಟು ಭಾರೀ ಅಕ್ರಮ ನಡೆದಿದೆ ಎಂದು ರಾಜ್ಯ ರಾಷ್ಟ್ರ ಸಮಿತಿ ರಾಜಕೀಯ ಪಕ್ಷ ಆರೋಪಿಸಿದೆ. 
ಪಿಪಿಇ-ಕಿಟ್ ಧರಿಸಿರುವ ವೈದ್ಯರು
ಪಿಪಿಇ-ಕಿಟ್ ಧರಿಸಿರುವ ವೈದ್ಯರು
Updated on

ಬೆಂಗಳೂರು: ಕೋವಿಡ್-19 ವಿರುದ್ಧ ಹೋರಾಡಲು ರಕ್ಷ ಕವಚ ಪಿಪಿಇ ಕಿಟ್ ಗಳು, IV ಪ್ಲ್ಯೂಯಿಡ್  ಮತ್ತು  ಡಯಾಲಿಸಿಸ್ ಯಂತ್ರಗಳ ಖರೀದಿಯಲ್ಲಿ ರಾಜ್ಯ ಔಷಧಗಳ ಲಾಜೆಸ್ಟಿಕ್ ಮತ್ತು ದಾಸ್ತಾನು ಸೊಸೈಟಿಯಿಂದ 1.98 ಕೋಟಿಯಷ್ಟು ಭಾರೀ ಅಕ್ರಮ ನಡೆದಿದೆ ಎಂದು ರಾಜ್ಯ ರಾಷ್ಟ್ರ ಸಮಿತಿ ರಾಜಕೀಯ ಪಕ್ಷ ಆರೋಪಿಸಿದೆ. ಆದಾಗ್ಯೂ, ಈ ಆರೋಪವನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ.

ಈ ಸಂಬಂಧ ವಿಧಾನಸಭೆ ಸಾರ್ವಜನಿಕ ಲೆಕ್ಕ ಸಮಿತಿ ಅಧ್ಯಕ್ಷ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಎಚ್ ಕೆ ಪಾಟೀಲ್ ಅವರಿಗೆ ಸಮಿತಿ ಪತ್ರ ಬರೆದಿದ್ದು, ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸಲ್ಲಿಸಿದೆ. 

ಪಿಪಿಪಿ ಕಿಟ್ ಗಳ ಖರಿದೀಯಲ್ಲಿ ಅಕ್ರಮ ನಡೆದಿದೆ. ಈ ಸಂಬಂಧ ಏಳು ಕಂಪನಿಗಳಿಗೆ ವರ್ಕ್ ಆರ್ಡರ್ ನೀಡಲಾಗಿದೆ ಎಂದು ಕೆಆರ್ ಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿ  ದೀಪಕ್ ಸಿ.ಎನ್. ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಎರಡು ವರ್ಕ್ ಆರ್ಡರ್ ಗಳನ್ನು ಪ್ಲಾಸ್ಟಿ ಸರ್ಜ್ ಇಂಡಸ್ಟ್ರಿಗೆ ನೀಡಲಾಗಿದೆ. ಮಾರ್ಚ್ 9, 2020ರಲ್ಲಿ ನೀಡಲಾಗಿರುವ ವರ್ಕ್ ಆರ್ಡರ್ ನಲ್ಲಿ ಪ್ರತಿ ಪಿಪಿಇ- ಕಿಟ್ ಗಳ ಖರೀದಿಗೆ 330. 40 ರೂ. ಬೆಲೆ ಇರುವುದಾಗಿ ಉಲ್ಲೇಖಿಸಲಾಗಿದೆ. ಮಾರ್ಚ್ 14, 2020ರಲ್ಲಿ ನೀಡಲಾಗಿರುವ ಮತ್ತೊಂದು ಆರ್ಡರ್ ನಲ್ಲಿ  725 ರೂ. ನಿಗದಿಪಡಿಸಲಾಗಿದೆ. ಐದು ದಿನಗಳ ಅವಧಿಯಲ್ಲಿ ದುಪ್ಪಟ್ಟ ಹಣವನ್ನು ಪಾವತಿಸಲಾಗಿದೆ.

ಈ ಪಿಪಿಟಿ ಕಿಟ್ ಗಳ ವಿಲೇವಾರಿ ನಂತರ ಅವುಗಳ ಗುಣಮುಟ್ಟ ಕಡಿಮೆ ಎಂಬುದು ಕಂಡುಬಂದಿದೆ. ಆದ್ದರಿಂದ ಪ್ಲಾಸ್ಟಿ ಸರ್ಜ್ ಇಂಡಸ್ಟ್ರಿಯಿಂದ ಪೂರೈಸಲಾಗಿರುವ ಪಿಪಿಇ-ಕಿಟ್ ಗಳನ್ನು ಬಳಸದಂತೆ ಕೆಎಸ್ ಡಿಎಲ್ ಡಬ್ಲ್ಯೂಎಸ್ ಹೆಚ್ಚುವರಿ ಕಮೀಷನರ್ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಏಪ್ರಿಲ್ 3 ರಂದು ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

2013 ಮತ್ತು 2016ರ ನಡುವೆ ಪ್ರತಿ ಯೂನಿಟ್ ಗೆ 5, 82 ಸಾವಿರ ರೂ.ನಂತೆ 60 ಡಯಾಲಿಸೀಸ್ ಯಂತ್ರಗಳನ್ನು ಕೆಎಸ್ ಡಿಎಲ್ ಡಬ್ಲ್ಯೂಎಸ್ ಖರೀದಿಸಿರುವುದನ್ನು ಕೆಆರ್ ಎಸ್ ಹೈಲೆಟ್ ಮಾಡಿದೆ. ಆದಾಗ್ಯೂ, ಅವುಗಳಲ್ಲಿ 30ನ್ನು ಬಳಸದೆ 24, 14, 298 ರೂಗಳಿಗೆ ಆರೋಗ್ಯ ಇಲಾಖೆಯಿಂದ ಬಿಆರ್ ಎಸ್ ಆರೋಗ್ಯ ಮತ್ತು ಸಂಶೋಧನಾ ಸಂಸ್ಥೆಗೆ ಮಾರಾಟ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದರಿಂದ ಸರ್ಕಾರಕ್ಕೆ ಎಷ್ಟು ನಷ್ಟವಾಗಿದೆ ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ, ಸ್ಪೀಕರ್ ಕೆಎಸ್ ಡಿಎಲ್ ಡಬ್ಲ್ಯೂಎಸ್ , ಕೋವಿಡ್ ಆಸ್ಪತ್ರೆ ಮತ್ತು ಕ್ವಾರಂಟೈನ್ ಕೇಂದ್ರಗಳಿಗೆ ತೆರಳಿ ಪರಿಶೀಲಿಸುವಂತೆ ಕೋರುತ್ತವೆ ಎಂದು ಹೆಚ್. ಕೆ. ಪಾಟೀಲ್ ತಿಳಿಸಿದ್ದಾರೆ. 

ಹಳೆಯ, ಮುರಿದಿರುವ ವೆಂಟಿಲೇಟರ್ ಗಳನ್ನು ಖರೀದಿಸಲಾಗುತ್ತಿದೆ ಎಂಬ ಆರೋಪದಲ್ಲಿ ಹುರುಳಿಲ್ಲ, ಪ್ರೆಸೆನಿಯಸ್ ಕಬಿ ಕಂಪನಿಗೆ ಟೆಂಡರ್ ಗೆ ಆಹ್ವಾನಿಸಿದ್ದೇವೆ. ಆದರೆ, ಇನ್ನೂ  IV fluids ಪೂರೈಸಲು ಇನ್ನೂ 2-3 ತಿಂಗಳುಗಳು ಬೇಕಾಗಲಿದೆ ಎಂದು ಹೇಳಿದ್ದಾರೆ ಎಂದು ಕೆಎಸ್ ಡಿ ಡಬ್ಲ್ಯೂಎಲ್ ಎಸ್ ಹೆಚ್ಚುವರಿ ನಿರ್ದೇಶಕರಾದ ಮಂಜುಶ್ರೀ ಹೇಳಿದ್ದಾರೆ. 

ಮೊದಲ ಹಂತದಲ್ಲಿ ಪಿಪಿಇ ಕಿಟ್ ಗಳ ಖರೀದಿಗೆ ಆದೇಶಿಸಿದಾಗ ಬೆಲೆ ಕಡಿಮೆ ಇತ್ತು. ಆದರೆ, ಮುಂದಿನ ಆದೇಶ ನೀಡುವಾಗ ಬೆಲೆ ದುಪ್ಪಾಟಾಗಿತ್ತು. ಹಳೆಯ ಡಯಾಲಿಸಿಸ್ ಯಂತ್ರಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com