ಬೆಂಗಳೂರಿನಲ್ಲಿ ಕೊರೋನಾ ಅಟ್ಟಹಾಸಕ್ಕೆ ರಾಜೀವ್ ಗಾಂಧಿ ಅಸ್ಪತ್ರೆ ಸಿಬ್ಬಂದಿಗಳು ಹೈರಾಣ

ತೀವ್ರ ತೀವ್ರ ಉಸಿರಾಟದ ಕಾಯಿಲೆ (ಸಾರಿ) ಮತ್ತು ಇನ್ಫ್ಲುಯೆಂಜಾ ಮಾದರಿಯ ಅನಾರೋಗ್ಯ (ಐಎಲ್ಐ) ಪ್ರಕರಣಗಳನ್ನು ಮಾತ್ರವೇ ಗಮನಿಸುತ್ತಿದ್ದ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಎದೆ ರೋಗಗಳು (ಆರ್ಜಿಐಸಿಡಿ) ಗುರುವಾರ ಕೋವಿಡ್ ಗೆ ಗೊತ್ತುಪಡಿಸಿದ ಆಸ್ಪತ್ರೆ ಆಗಿ ಮಾರ್ಪಟ್ಟಿದೆ. ಇದಲ್ಲದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಡ್ ಗಳ ಕೊರತೆಯಾದ ನಂತರ ಆರ್ಜಿಐಸಿಡಿಗೆ ಕೋವಿಡ್ ಟ
ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಚೆಸ್ಟ್ ಡಿಸೀಸಸ್
ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಚೆಸ್ಟ್ ಡಿಸೀಸಸ್
Updated on: 

ಬೆಂಗಳೂರು: ತೀವ್ರ ಉಸಿರಾಟದ ಕಾಯಿಲೆ (ಸಾರಿ) ಮತ್ತು ಇನ್ಫ್ಲುಯೆಂಜಾ ಮಾದರಿಯ ಅನಾರೋಗ್ಯ (ಐಎಲ್ಐ) ಪ್ರಕರಣಗಳನ್ನು ಮಾತ್ರವೇ ಗಮನಿಸುತ್ತಿದ್ದ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಚೆಸ್ಟ್ ಡಿಸೀಸಸ್  (ಆರ್ಜಿಐಸಿಡಿ) ಗುರುವಾರ ಕೋವಿಡ್ ಗೆ ಗೊತ್ತುಪಡಿಸಿದ ಆಸ್ಪತ್ರೆ ಆಗಿ ಮಾರ್ಪಟ್ಟಿದೆ. ಇದಲ್ಲದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಡ್ ಗಳ ಕೊರತೆಯಾದ ನಂತರ ಆರ್ಜಿಐಸಿಡಿಗೆ ಕೋವಿಡ್ ಟ್ಯಾಗ್ ಸಿಕ್ಕಿದ್ದು ಇದೀಗ ಹೆಚ್ಚಿನ ಕೇಸುಗಳನ್ನು ಇಲ್ಲಿಗೆ ಕರೆತರಲಾಗುತ್ತಿದೆ.

ಆಸ್ಪತ್ರೆಯಲ್ಲಿ 15 ವೈದ್ಯರು ಮತ್ತು ಕೆಲವು ದಾದಿಯರು ಇದ್ದಾರೆ, ಅವರು ಸಾರಿ ಹಾಗೂ ಐಎಲ್ಐ ಪ್ರಕರಣಗಳೊಡನೆ ಇತರ ಪರಿಸ್ಥಿತಿಗಳೊಂದಿಗೆ ಬರುವ ಜನರನ್ನು ಸಹ ಗಮನಿಸಬೇಕಿದೆ.

"ಕೆಲಸದ ಹೊರೆ ಈಗ ಹೆಚ್ಚಾಗಿದೆ, ಮತ್ತು ನಾವು ಮೊದಲ ದಿನದಿಂದ ಕೋವಿಡ್ ಯುದ್ಧದಲ್ಲಿ ಭಾಗಿಯಾಗಿದ್ದೇವೆ. ನಾವೆಲ್ಲರೂ ದಣಿವರಿಯದೆ ಕೆಲಸ ಮಾಡುತ್ತಿದ್ದೇವೆ ಮತ್ತು ನಮ್ಮ ವೈದ್ಯರು ಮತ್ತು ದಾದಿಯರು ಯಾರೂ ರಜಾ ತೆಗೆದುಕೊಂಡಿಲ್ಲ. ಈಗ, ಇದು ನಮಗೆ ಕಷ್ಟಕರವಾಗುತ್ತಿದೆ. ಬೆಂಗಳೂರು ವೈದ್ಯಕೀಯ ಕಾಲೇಜು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್ಐ) ವೈದ್ಯರನ್ನು ನಿಯೋಜಿಸಲು ನಾವು ಸರ್ಕಾರವನ್ನು ಕೇಳಿದ್ದೇವೆ ಮತ್ತು ಅವರು 20 ವೈದ್ಯರನ್ನು ಕಳುಹಿಸಲು ಒಪ್ಪಿದ್ದಾರೆ. ಅವರು ಒಮ್ಮೆ ಬಂದರೆ ಪರಿಸ್ಥಿತಿ ಸುಧಾರಿಸುತ್ತದೆ. " ಆರ್‌ಜಿಐಸಿಡಿ ನಿರ್ದೇಶಕ ಡಾ.ಸಿ.ನಾಗರಾಜ್  ಹೇಳಿದ್ದಾರೆ.

ಆರ್ಜಿಐಸಿಡಿ ಕೋವಿಡ್ ರೋಗಿಗಳಿಗಾಗಿ 104 ಹಾಸಿಗೆಗಳನ್ನು ಮೀಸಲಿಟ್ಟಿತ್ತು, ಆದರೆ ಭಾನುವಾರದ ಹೊತ್ತಿಗೆ ಎಲ್ಲಾ ಹಾಸಿಗೆಗಳು ತುಂಬಿವೆ. "ನಾವು ಅಷ್ಟು ರೋಗಿಗಳನ್ನು ನಿರೀಕ್ಷಿಸಿರಲಿಲ್ಲ. ಖಾಸಗಿ ಆಸ್ಪತ್ರೆಗಳ ಸೇವೆಗಳನ್ನು ತೆಗೆದುಕೊಳ್ಳಲು ಸರ್ಕಾರ ಇತ್ತೀಚೆಗೆ ನಿರ್ಧರಿಸಿದ್ದರಿಂದ, ನಮ್ಮ ಆಸ್ಪತ್ರೆ ಮತ್ತು ಇತರ ಸರ್ಕಾರಿ ಸೌಲಭ್ಯಗಳ ಮೇಲಿನ ಹೊರೆ ಕಡಿಮೆಯಾಗಬಹುದು" ಎಂದು ಅವರು ಹೇಳಿದರು.

ಈ ಮಧ್ಯೆ ಆರ್ಜಿಐಸಿಡಿ ಆಸ್ಪತ್ರೆಯಲ್ಲಿ ರೋಗಿಗಳು ಕೆಟ್ಟ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ನೈರ್ಮಲ್ಯದ ಕೊರತೆ ಸೇರಿದಂತೆ ಅನೇಕ ತೊಂದರೆಗಳಿದೆ ಎಂದು ಆರೋಪ ಬಂದಿದ್ದು ಈ ಸಂಬಂಧ ವೀಡಿಯೋ ಸಹ ವೈರಲ್ ಆಗಿತ್ತು. ಆ ಕುರಿತು ಮಾತನಾಡಿದ ಡಾ.ಸಿ.ನಾಗರಾಜ್ "ರೋಗಿಗಳಿಗೆ ಶೌಚಾಲಯಗಳು ಮತ್ತು ವಿಭಿನ್ನ ಪಾಕಪದ್ಧತಿಗಳು ಬೇಕಾಗಿದ್ದವು. ಆದರೆ ನಾವು ಅವರಿಗೆ ಆಹಾರ ತಜ್ಞರು ಸೂಚಿಸಿದ್ದನ್ನು ನೀಡುತ್ತಿದ್ದೇವೆ. ಇದಲ್ಲದೆ ನಾವು ವಾರ್ ರೂಮ್ ಅನ್ನು ಸ್ಥಾಪಿಸಿದ್ದೇವೆ. ವೈದ್ಯರು ಪ್ರತ್ಯೇಕವಾಗಿ ರೋಗಿಗಳಿಗೆ ಏನು ಬೇಕು ಎಂದು ಕೇಳುತ್ತಿದ್ದಾರೆ ಮತ್ತು ನಾವು ಅದನ್ನು ಒದಗಿಸುತ್ತಿದ್ದೇವೆ. ನಾವು ಈಗ ಅವರ ಅಗತ್ಯಗಳನ್ನು ಎರಡು ಬಾರಿ ಪರಿಶೀಲಿಸುತ್ತಿದ್ದೇವೆ , " ಎಂದರು. 

ಕೋವಿಡ್ ವಾರ್ಡಿನಲ್ಲಿ  ರೋಗಿಯಾದ ಗಿರೀಶ್ ಕುಮಾರ್, ಮಾತನಾಡಿ "ನಮಗೆ ಈಗ ಯಾವುದೇ ಸಮಸ್ಯೆಗಳಿಲ್ಲ. ಎಲ್ಲಾ ಸೌಲಭ್ಯಗಳು ಸರಿಯಾದ ಸಮಯಕ್ಕೆ ಸಿಗುತ್ತಿದೆ" ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com