ನಾವು ಕೋವಿಡ್ ಪರಿಸ್ಥಿತಿಯನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತೇವೆ-ಜಾವೇದ್ ಅಖ್ತರ್ 

ರಾಜ್ಯದಲ್ಲಿ ಕೋವಿಡ್-19 ಪರಿಸ್ಥಿತಿ ನಿಯಂತ್ರಣದಲ್ಲಿದೆ.ಸಾಂಕ್ರಾಮಿಕ ರೋಗದ ವಿರುದ್ದ ಸರ್ಕಾರ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ ಎಂದು ಆರೋಗ್ಯ ಇಲಾಖೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್ ಹೇಳಿದ್ದಾರೆ.
ಜಾವೇದ್ ಅಖ್ತರ್
ಜಾವೇದ್ ಅಖ್ತರ್

ಬೆಂಗಳೂರು:  ನಿನ್ನೆ ಒಂದೇ ದಿನ  918 ಕೋವಿಡ್-19 ಪ್ರಕರಣಗಳು ದಾಖಲಾಗುವುದರೊಂದಿಗೆ ರಾಜ್ಯದಲ್ಲಿ ಕೆಲ ದಿನಗಳಿಂದೀಚೆಗೆ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಜನರಲ್ಲಿ ಆತಂಕವನ್ನುಂಟುಮಾಡಿದೆ.
ಆದರೆ, ಪರಿಸ್ಥಿತಿ ನಿಯಂತ್ರಣದಲ್ಲಿದೆ.ಸಾಂಕ್ರಾಮಿಕ ರೋಗದ ವಿರುದ್ದ ಸರ್ಕಾರ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ ಎಂದು ಆರೋಗ್ಯ ಇಲಾಖೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್ ಹೇಳಿದ್ದಾರೆ.

ರಾಜ್ಯದಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಕಾರಣಗಳೇನು?

ಅನ್ ಲಾಕ್ ನಿಂದ ಹೊರಗಡೆಯಿಂದ ಹೆಚ್ಚು ಜನರು ಬರಲು ಕಾರಣವಾಯಿತು. ಪ್ರಕರಣಗಳ ಪತ್ತೆ ಹಚ್ಚುವ ಕಾರ್ಯದಲ್ಲಿ ರಾಜ್ಯ
ನಿರತವಾಗಿದೆ. ಮನೆ ಮನೆ ಸರ್ವೇ ಕಾರ್ಯ ನಡೆಯುತ್ತಿದ್ದು, ಶೇ. 95 ರಷ್ಟು ಕೆಲಸ ಈಗಾಗಲೇ ಪೂರ್ಣವಾಗಿದೆ. ಆರೋಗ್ಯದ ಸ್ಥಿತಿಗತಿ, ವಯಸ್ಸಿನ ವಿವರವನ್ನು ಕಲೆ ಹಾಕಲಾಗುತ್ತಿದೆ. ಐಎಲ್ ಐ ಪ್ರಕರಣಗಳನ್ನು ಕೂಡಾ ಕಂಡುಹಿಡಿಯಲಾಗುತ್ತಿದೆ. ಐಎಲ್ ಐ ಮತ್ತು ಸಾರಿ ಪ್ರಕರಣಗಳ ಬಗ್ಗೆ ಖಾಸಗಿ ಸಂಸ್ಥೆಗಳಿಂದಲೂ ಮಾಹಿತಿ ಕಲೆ ಹಾಕಲಾಗಿದೆ. ಜ್ವರಕ್ಕಾಗಿ ಔಷಧ ಕೊಳ್ಳುವವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಎಲ್ಲಾ ಮಾಹಿತಿಯಿಂದ ಪರೀಕ್ಷೆಯ ಗುರಿ ತಲುಪಲು ನೆರವಾಗಲಿದೆ. 

ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ

ಬೆಂಗಳೂರು ದೊಡ್ಡ ನಗರವಾಗಿದ್ದು, 1.2 ಕೋಟಿ ಜನಸಂಖ್ಯೆ ಇದೆ. ನಾಲ್ಕೈದು ವಾರಗಳ ಹಿಂದೆ ಬೇರೆ ಜಿಲ್ಲೆಗಳಿಗಿಂತಲೂ ಸಂಖ್ಯೆ ಕಡಿಮೆಯಿತ್ತು.ಚೆನ್ನೈ, ಮುಂಬೈ ಅಥವಾ ದೆಹಲಿಯಂತಹ ಇತರ ಮೆಟ್ರೋ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಕಡಿಮೆ. ಬೆಂಗಳೂರಿನಲ್ಲಿ ಅಪಾರ ಸಂಖ್ಯೆಯ ಐಟಿ ಮತ್ತಿತರ ಕಂಪನಿಗಳಿವೆ. ವೃತ್ತಿಪರರು ಬೇರೆ ಕಡೆ ಹೋಗುವುದರಿಂದಲೂ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಹಿರಿಯ ಅಧಿಕಾರಿಗಳನ್ನೊಳಗೊಂಡ 18 ತಂಡಗಳು , ಬಿಬಿಎಂಪಿ ಜೊತೆಗೂಡಿ ಕಾರ್ಯನಿರ್ವಹಿಸುತ್ತಿವೆ.

ಅನೇಕ ಪ್ರಕರಣಗಳಲ್ಲಿ ಸೋಂಕು ಹೇಗೆ ತಗುಲಿತು ಎಂಬುದು ಗೊತ್ತಾಗುತ್ತಿಲ್ಲ. ನಾವು ಸಮುದಾಯ ಪ್ರಸರಣ ಹಂತದಲ್ಲಿದ್ದೀವಾ?
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೋವಿಡ್- 19 ಸೋಂಕು ಸಮುದಾಯ ಪ್ರಸರಣ ಹಂತ ತಲುಪಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಕೂಡಾನಾವು ಸಮುದಾಯ ಪ್ರಸರಣ ಹಂತ ತಲುಪಿಲ್ಲ ಎಂದು ವ್ಯಾಖ್ಯಾನಿಸಿದೆ.

ಬೆಂಗಳೂರಿನಲ್ಲಿ ಸಾವಿನ ಪ್ರಮಾಣ ಹೆಚ್ಚಳಕ್ಕೆ ಕಾರಣ ಏನು?
ರಾಷ್ಟ್ರೀಯ ಸರಾಸರಿಯ ಶೇ.3. 1 ರಷ್ಟಿರುವ ಮರಣ ಪ್ರಮಾಣಕ್ಕೆ ಹೋಲಿಸಿದರೆ ರಾಜ್ಯ ಶೇ. 1. 6 ರಷ್ಟಿದ್ದು, 13ನೇ ಸ್ಥಾನದಲ್ಲಿದೆ. ಆದಾಗ್ಯೂ, ಕಳೆದ ವಾರದಲ್ಲಿ ಸಾವಿನ ಪ್ರಮಾಣ ಬೆಂಗಳೂರಿನಲ್ಲಿ ಹೆಚ್ಚಾಗಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳ ನೇತೃತ್ವದಲ್ಲಿನ ತಂಡ ಸಾವಿನ ಪ್ರಕರಣಗಳ ಬಗ್ಗೆ ವರದಿ ಸಂಗ್ರಹಿಸುತ್ತಿದೆ. ರೋಗಿಗಳನ್ನು ಆಸ್ಪತ್ರೆಗೆ ಕರೆತರುವಲ್ಲಿ ಹಾಗೂ ಪರೀಕ್ಷೆಗೊಳಪಡಿಸುವುದರಲ್ಲಿ ವಿಳಂಬ ಮಾಡಲಾಗುತ್ತಿದೆ.ಖಾಸಗಿ ಆಸ್ಪತ್ರೆಯಲ್ಲಿ ಪಾಸಿಟಿವ್ ಕಂಡುಬಂದಂತಹ ರೋಗಿಯನ್ನು ಚಿಕಿತ್ಸಾ ಸೌಕರ್ಯಗಳು ಇಲ್ಲದಿದ್ದರೂ ಅಲ್ಲಿಯೇ ಚಿಕಿತ್ಸೆ ಕೊಡಿಸಲಾಗುತ್ತಿದೆ.

ರೋಗಿಗಳಿಗೆ ಸಾಕಾಗುವಷ್ಟು ಹಾಸಿಗೆ ಮತ್ತು ವೆಂಟಿಲೇಟರ್ ಗಳ ಸೌಕರ್ಯವಿದೆಯೇ?
ಕಳೆದ ಮೂರು ತಿಂಗಳಲ್ಲಿ ಆರೋಗ್ಯ ಸೌಕರ್ಯಗಳನ್ನು ಆಧುನೀಕರಣಗೊಳಿಸಲಾಗಿದೆ. ಆರೋಗ್ಯ ಇಲಾಖೆ ವ್ಯಾಪ್ತಿಗೊಳಪಡುವ ಆಸ್ಪತ್ರೆಗಳಲ್ಲಿ  ಆಮ್ಲಜನಕ ಪೂರಕ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಇವುಗಳ ಸಂಖ್ಯೆಯನ್ನು ಹೆಚ್ಚಿಸಲು ಜಿಲ್ಲಾಆಡಳಿತದೊಂದಿಗೆ ಕೆಲಸ ಮಾಡುತ್ತಿದ್ದೇವೆ.ವೆಂಟಿಲೇಟರ್ ಖರೀದಿಸಲು ಕ್ರಮ ಕೈಗೊಳ್ಳಲಾಗಿದೆ. ಕೋವಿಡ್ ಆಸ್ಪತ್ರೆಗಳಾಗಿ ಕಾರ್ಯನಿರ್ವಹಿಸುತ್ತಿರುವ ತರಬೇತಿ ಆಸ್ಪತ್ರೆಗಳಿಗೆ 143 ಹೈ ಎಂಡ್ ವೆಂಟಿಲೇಟರ್ ನ್ನು ವೈದ್ಯಕೀಯ ಶಿಕ್ಷಣ ಇಲಾಖೆ 
ಖರೀದಿಸಿದೆ. ಆರೋಗ್ಯ ಇಲಾಖೆ ಮತ್ತೆ 153 ವೆಂಟಿಲೇಟರ್ ಖರೀದಿಸಿದೆ. ಮತ್ತೆ 500 ವೆಂಟಿಲೇಟರ್ ಗಳು ಬರುತ್ತಿವೆ. ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಯೊಂದಿಗೆ ಕನಿಷ್ಠ 125 ಹಾಸಿಗೆಗಳು, ಮತ್ತು ತಾಲೂಕ್ ಆಸ್ಪತ್ರೆಗಳಲ್ಲಿ 50 ಹಾಸಿಗೆಗಳ ವ್ಯವಸ್ಥೆ ಮಾಡಲು  ಮೂರು ತಿಂಗಳ ಹಿಂದೆಯೇ ಕ್ರಮ ಕೈಗೊಳ್ಳಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com