6ನೇ ತರಗತಿಯಿಂದಲೇ ಬದಲಾದ ಅಮೂಲ್ಯ! ಎಸ್ ಐಟಿ ತನಿಖೆ ವೇಳೆ ಮಾಹಿತಿ ಬಹಿರಂಗ

ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಅಮೂಲ್ಯ ತಾನು 6ನೇ ತರಗತಿಯಲ್ಲಿದ್ದಾಗಲೇ ತನ್ನನ್ನು ಎಡಪಂಥೀಯ ಮನಸ್ಥಿತಿ ಆವರಿಸಿಕೊಂಡಿತ್ತು ಎಂದು ಆರೋಪಿ ಅಮೂಲ್ಯ ಲಿಯೋನಾ ಎಸ್ಐಟಿ ತನಿಖೆ ವೇಳೆ ಮಾಹಿತಿ ಬಹಿರಂಗಗೊಳಿಸಿದ್ದಾಳೆ
ಅಮೂಲ್ಯ
ಅಮೂಲ್ಯ

ಬೆಂಗಳೂರು: ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಅಮೂಲ್ಯ ತಾನು 6ನೇ ತರಗತಿಯಲ್ಲಿದ್ದಾಗಲೇ ತನ್ನನ್ನು ಎಡಪಂಥೀಯ ಮನಸ್ಥಿತಿ ಆವರಿಸಿಕೊಂಡಿತ್ತು ಎಂದು ಆರೋಪಿ ಅಮೂಲ್ಯ ಲಿಯೋನಾ ಎಸ್ಐಟಿ ತನಿಖೆ ವೇಳೆ ಮಾಹಿತಿ ಬಹಿರಂಗಗೊಳಿಸಿದ್ದಾಳೆ

ರಾಮಚಂದ್ರ ಗುಹಾ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಬರಹಗಳನ್ನು ಹೆಚ್ಚು ಓದುತ್ತಿದ್ದೆ. ಹೀಗಾಗಿ ಇಬ್ಬರ ಬರಹಗಳು ತಮಗೆ ಪ್ರೇರಣೆ ನೀಡಿದವು ಎಂದು ಅಮೂಲ್ಯ ಬಾಯ್ಬಿಟ್ಟಿದ್ದಾಳೆ

ಅಮೂಲ್ಯ ಭಾಷೆ, ಭಾಷಣ ಕೇಳಿ ಆಕೆಗೆ ಹಲವು ಎಡಪಂಥೀಯವರು  ಕೈಜೋಡಿಸಿದ್ದರು ಎಂಬ ಮಾಹಿತಿ ಎಸ್ಐಟಿಗೆ ಲಭ್ಯವಾಗಿದೆ.
ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಅಮೂಲ್ಯ, ನಂತರ ಕೆಲಸ ಬಿಟ್ಟು ಭಾಷಣ ಮಾಡುವುದನ್ನೇ ವೃತ್ತಿಯಾಗಿಸಿಕೊಂಡಿದ್ದಳು.

ಭಾಷಣ ಮಾಡುವುದು, ಹಿಂದುತ್ವ ವಿರುದ್ಧ ಹೋರಾಟ ಮಾಡುವುದು ಇದನ್ನೇ  ಜೀವನ ಎಂದು ಭಾವಿಸಿದ್ದ ಅಮೂಲ್ಯ ಗೆ ಹಲವರು ವೇದಿಕೆ ಕಲ್ಪಸಿಕೊಟ್ಟಿದ್ದರು ಫೆ.20ರಂದು ಘೋಷಣೆ ಕೂಗಿದ್ದ ಹಿಂದಿನ ದಿನ ಆಕೆ ಭಾಷಣ ಮಾಡಲು ಸಿದ್ಧತೆ ಮಾಡಿಕೊಂಡಿದ್ದು, ಭಾಷಣ ಮಾಡಲು ಹಲವರು ಸಹಾಯ ಮಾಡಿದ್ದರು ಎಂದು ತಿಳಿದು ಬಂದಿದೆ.

ಪಶ್ಚಿಮ ಬಂಗಾಳ ಮೂಲದ ಓರ್ವ ಯುವತಿ ಹೆಚ್ಚಾಗಿ ಅಮೂಲ್ಯ ಗೆ ಪ್ರಚೋದನೆ ಮಾಡಿದ್ದಳು. ಎಸ್ಐಟಿ ಪೊಲೀಸರು ಅಮೂಲ್ಯ ಹುಟ್ಟಿನಿಂದ ಇಲ್ಲಿಯವರೆಗೆ ಎಲ್ಲೆಲ್ಲಿ ವ್ಯಾಸಂಗ ಮಾಡಿದ್ದಾಳೆ. ಸಾಮಾನ್ಯವಾಗಿವಾಗಿದ್ದ ಹುಡುಗಿ ಎಡಪಂಥೀಯ ವಾದದ ಬಗ್ಗೆ ಇಷ್ಟೊಂದು ಆಕರ್ಷಣೆಗೆ ಒಳಗಾಗಿದ್ದು ಹೇಗೆ  ಎಂಬುದರ ಕುರಿತು ತನಿಖೆ ನಡೆಸಿದಾಗ ಈ ಎಲ್ಲಾ ಮಾಹಿತಿ ಗಳು ಬಹಿರಂಗವಾಗಿದೆ

ಪ್ರಾಥಮಿಕ ಶಿಕ್ಷಣವನ್ನು ಕೊಪ್ಪದಲ್ಲಿ ಮುಗಿಸಿ, ಬಳಿಕ ಉಜಿರೆಯ ಖಾಸಗಿ ಶಾಲೆಯಲ್ಲಿ ಪ್ರೌಢಶಿಕ್ಷಣ ವ್ಯಾಸಂಗ ಮಾಡಿದ್ದೆ. ನಂತರ  ಭಾಷಣ ಮಾಡುವುದಕ್ಕೆ ಹೆಚ್ಚು ಆಸಕ್ತಿ ತೋರಿದೆ ಎಂದು ಅಮೂಲ್ಯ ತನಿಖೆ ವೇಳೆ ತಿಳಿಸಿದ್ದಾಳೆ

ಕಾಲೇಜಿನಲ್ಲಿಯೂ ಅಮೂಲ್ಯ ಎಡಪಂಥೀಯ ಭಾಷಣವನ್ನು ಮಾಡುತ್ತಿದ್ದಳು ಎಂದು ತನಿಖೆ ವೇಳೆ ಪೊಲೀಸರಿಗೆ ತಿಳಿಸಿದ್ದಾಳೆ.
ಒಂದು ವಾರದಲ್ಲೇ ಅಮೂಲ್ಯ ರಾಜ್ಯದ ಹಲವೆಡೆ ಭಾಷಣಗಳನ್ನು ಮಾಡುತ್ತಿದ್ದಳು. ಹೀಗಾಗಿ ಇವಳ ಖರ್ಚು ವೆಚ್ಚ ಯಾರೂ ಭರಿಸುತ್ತಿದ್ದರು ಎಂಬುದರ ಕುರಿತು ಎಸ್ಐಟಿ ತಂಡ  ತೀವ್ರ ತನಿಖೆ ಕೈಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com