ಕೊರೊನಾ ವೈರಸ್ ಭೀತಿಯ ನಡುವೆ ಬೆಂಗಳೂರಿನಲ್ಲಿ ಕಾಲರಾ ರೀತಿಯ ರೋಗ ಲಕ್ಷಣಗಳು ಪತ್ತೆ!

ಒಂದೆಡೆ ಕೊರೊನಾ ವೈರಸ್ ಭೀತಿ ಈಗ ಎಲ್ಲೆಡೆಯಿದ್ದರೆ ಮತ್ತೊಂದೆಡೆ ನಗರದ ಅನೇಕ ಆಸ್ಪತ್ರೆಗಳಲ್ಲಿ ಕಾಲರಾ ತರಹದ ರೋಗಲಕ್ಷಣಗಳನ್ನು ಹೊಂದಿರುವ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದಾರೆ. ಆದರೆ ಇವರ ರಕ್ತದ ಮಾದರಿಯಲ್ಲಿ ಕಾಲರಾ ತರುವ ವಿಬ್ರಿಯೊ ಕಾಲರಾ ಬ್ಯಾಕ್ಟೀರಿಯಾಗಳು ಇರುವುದು ಪತ್ತೆಯಾಗಿಲ್ಲ.
ರಸ್ತೆಬದಿ ಆಹಾರಗಳಿಂದ ಆದಷ್ಟು ದೂರವಿರುವಂತೆ ವೈದ್ಯರು ಸಲಹೆ ನೀಡುತ್ತಾರೆ
ರಸ್ತೆಬದಿ ಆಹಾರಗಳಿಂದ ಆದಷ್ಟು ದೂರವಿರುವಂತೆ ವೈದ್ಯರು ಸಲಹೆ ನೀಡುತ್ತಾರೆ
Updated on

ಬೆಂಗಳೂರು; ಒಂದೆಡೆ ಕೊರೊನಾ ವೈರಸ್ ಭೀತಿ ಈಗ ಎಲ್ಲೆಡೆಯಿದ್ದರೆ ಮತ್ತೊಂದೆಡೆ ನಗರದ ಅನೇಕ ಆಸ್ಪತ್ರೆಗಳಲ್ಲಿ ಕಾಲರಾ ತರಹದ ರೋಗಲಕ್ಷಣಗಳನ್ನು ಹೊಂದಿರುವ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದಾರೆ. ಆದರೆ ಇವರ ರಕ್ತದ ಮಾದರಿಯಲ್ಲಿ ಕಾಲರಾ ತರುವ ವಿಬ್ರಿಯೊ ಕಾಲರಾ ಬ್ಯಾಕ್ಟೀರಿಯಾಗಳು ಇರುವುದು ಪತ್ತೆಯಾಗಿಲ್ಲ.


ಕಾಲರಾ ರೀತಿಯ ರೋಗ ಲಕ್ಷಣಗಳನ್ನು ಹೊಂದಿರುವ ರೋಗಿಗಳು ಅತಿಸಾರ, ನಿರ್ಜಲೀಕರಣ, ವಾಂತಿ ಮತ್ತು ಬಳಲಿಕೆ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಕೂಡ ಇದು ಏನು ಕಾಯಿಲೆ ಎಂದು ನಿರ್ಧಾರಕ್ಕೆ ಬರುವುದಕ್ಕೆ ಸಾಧ್ಯವಾಗಿಲ್ಲ.


ನಗರದ ಅಪೊಲೊ ಆಸ್ಪತ್ರೆಯ ತಜ್ಞ, ಹಿರಿಯ ಸಲಹೆಗಾರ ಡಾ ಸಂದೀಪ್ ಎಂಎಸ್ ಅವರು ತಮ್ಮ ಆಸ್ಪತ್ರೆಯಲ್ಲಿ ಮೂರು ಕಾಲರಾ ಕೇಸುಗಳು ದೃಢಪಟ್ಟಿವೆ ಎನ್ನುತ್ತಾರೆ. ಜಠರಗರುಳಿನ ಕಾಯಿಲೆಗಳ ಲಕ್ಷಣಗಳು ಕಾಲರಾ ಲಕ್ಷಣಗಳನ್ನೇ ಹೋಲುತ್ತಿವೆ. ಆದರೆ ಅವು ಕಾಲರಾಗಳಲ್ಲ ಎಂದು ಹೇಳಿದ್ದಾರೆ.


ರೋಗಿಗಳು ಅತಿಸಾರ, ಡಿಹೈಡ್ರೇಶನ್(ನೀರು ಆರುವುದು), ವಾಂತಿ, ಭೇದಿ ಎಂದು ಹೇಳಿಕೊಂಡು ಬರುತ್ತಾರೆ. ಆದರೆ ಅವರ ರಕ್ತದ ಮಾದರಿಯನ್ನು ಪರೀಕ್ಷೆಗೊಳಪಡಿಸಿದಾಗ ಕಾಲರಾಕ್ಕೆ ಕಾರಣವಾಗುವ ವಿಬ್ರಿಯೊ ಕಾಲರಾ ಬ್ಯಾಕ್ಟೀರಿಯಾಗಳು ಕಂಡುಬಂದಿಲ್ಲ. ನನ್ನ ಬಳಿ ಬಂದವರಲ್ಲಿ ಮೂರು ಕಾಲರಾ ಕೇಸುಗಳು ಮತ್ತು 60 ಜಠರಕರುಳಿನ ಕಾಯಿಲೆಗಳು ಪತ್ತೆಯಾಗಿವೆ ಎಂದು ಡಾ ಸಂದೀಪ್ ಹೇಳುತ್ತಾರೆ.


ಈ ರೀತಿಯ ಕಾಲರಾ ಲಕ್ಷಣಗಳನ್ನು ಹೊಂದಿರುವ ಕಾಯಿಲೆ ಮಣಿಪಾಲ ಆಸ್ಪತ್ರೆಯಲ್ಲಿ ಕೂಡ ವರದಿಯಾಗಿದೆ. ನಮ್ಮಲ್ಲಿ ಬಂದ ರೋಗಿಗಳಲ್ಲಿ ಒಬ್ಬರಲ್ಲಿ ಕಾಲರಾ ಪತ್ತೆಯಾಗಿದ್ದು, ಇನ್ನುಳಿದ ಇಬ್ಬರ ರಕ್ತ ಪರೀಕ್ಷೆ ಮಾದರಿಗೆ ಕಾಯುತ್ತಿದ್ದೇವೆ. ಇನ್ನುಳಿದ ಮೂರ್ನಾಲ್ಕು ಮಂದಿಯಲ್ಲಿ ಕಾಲರಾ ರೀತಿಯ ಲಕ್ಷಣಗಳು ಕಂಡುಬರುತ್ತಿವೆ. ರಸ್ತೆಬದಿಯ ಆಹಾರದಲ್ಲಿರುವ ಮಾಲಿನ್ಯಗಳಿಂದ ಕಾಲರಾ ಬರುತ್ತವೆ.ಈ ಸಮಯದಲ್ಲಿ ಹೊಟ್ಟೆಯ ಆರೋಗ್ಯವನ್ನು ನೋಡಿಕೊಳ್ಳಬೇಕಾಗುತ್ತದೆ ಎಂದು ಮಣಿಪಾಲ ಆಸ್ಪತ್ರೆಯ ಡಾ ಮನೋಹರ್ ಕೆ ಎನ್ ಹೇಳುತ್ತಾರೆ.


ಬಿಬಿಎಂಪಿ ಏನು ಹೇಳುತ್ತದೆ?: ಬೇಸಿಗೆ ಕಾಲದಲ್ಲಿ ಈ ರೀತಿ ಬ್ಯಾಕ್ಟೀರಿಯಾ ಸೋಂಕಿನ ಅನೇಕ ಕಾಯಿಲೆಗಳು ಕಂಡುಬರುವುದು ಸಾಮಾನ್ಯ. ಇಂತಹ ಬ್ಯಾಕ್ಟೀರಿಯಾ ಸಂಬಂಧಿ ಕಾಯಿಲೆಗಳಲ್ಲಿ ಒಂದು ಇದಾಗಿರಬಹುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಡಾ ಬಿ ಕೆ ವಿಜೇಂದ್ರ ಹೇಳುತ್ತಾರೆ.


ಕೆಲವು ಪ್ರಕರಣಗಳಲ್ಲಿ ಕಾಲರಾ ಕಾಯಿಲೆಗೆ ಅನುಸರಿಸುವ ಚಿಕಿತ್ಸೆಗಳನ್ನೇ ಕಾಲರಾ ಮಾದರಿಯ ರೋಗಲಕ್ಷಣಗಳನ್ನು ಹೊಂದಿರುವ ಕಾಯಿಲೆಗಳಿಗೂ ಬಳಸಲಾಗುತ್ತದೆ ಎಂದರು.


ಕಾಲರಾ ರೋಗಲಕ್ಷಣಗಳೇನು, ಚಿಕಿತ್ಸೆ ಯಾವ ರೀತಿ?: ಕಾಲರಾ ರೋಗಿಗಳಿಗೆ ಆಂಟಿ ಬಯಾಟಿಕ್ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಕಾಲರಾ ರೀತಿಯ ರೋಗಲಕ್ಷಣಗಳನ್ನು ಹೊಂದಿರುವವರಿಗೆ ಇದು ಸರಿ ಹೊಂದುವುದಿಲ್ಲ. ನಿರ್ಜಲೀಕರಣ ಚಿಕಿತ್ಸೆಯನ್ನು ಕಾಲರಾ ರೋಗಿಗಳಿಗೆ ನೀಡಲಾಗುತ್ತದೆ. ಪ್ರತಿದಿನ ವ್ಯಕ್ತಿಗೆ 3ರಿಂದ 4 ಲೀಟರ್ ನೀರು ಬೇಕಾಗುತ್ತದೆ. ಕಾಲರಾ ಬಂದಾಗ ದಿನಕ್ಕೆ 8ರಿಂದ 10 ಲೀಟರ್ ನಷ್ಟು ನೀರು ದೇಹದಿಂದ ನಿರ್ಜಲೀಕರಣಗೊಳ್ಳುತ್ತದೆ ಎಂದು ಫೊರ್ಟಿಸ್ ಆಸ್ಪತ್ರೆಯ ಡಾ ಶೀಲಾ ಚಕ್ರವರ್ತಿ ಹೇಳುತ್ತಾರೆ. 

ಬಿಬಿಎಂಪಿ ವಲಯದಲ್ಲಿ ಈ ವರ್ಷ 17 ಕಾಲರಾ ಕೇಸುಗಳು ಪತ್ತೆಯಾಗಿವೆ. ಇನ್ನೂ 25 ಶಂಕಿತ ಕೇಸುಗಳಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com