

ಬೆಂಗಳೂರು: ಬೆಂಗಳೂರಿನಲ್ಲಿ ಮೊದಲ ಕೊರೋನಾ ವೈರಸ್ ಪ್ರಕರಣ ಪತ್ತೆಯಾಗಿದೆ.
ಮಾ.09 ರಂದು ಕರೋನಾ ವೈರಸ್ ಬೆಂಗಳೂರಿನ ವ್ಯಕ್ತಿಯಲ್ಲಿ ಪತ್ತೆಯಾಗಿರುವುದು ಖಚಿತವಾಗಿದ್ದು, ಈ ಮಾಹಿತಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಮಾ.01 ರಂದು ಅಮೆರಿಕದಿಂದ ಬೆಂಗಳುರಿಗೆ ಬಂದಿದ್ದ 40 ವರ್ಷದ ಇಂಜಿನಿಯರ್ ಗೆ ಕೊರೋನಾ ಸೋಂಕು ತಗುಲಿದ್ದು, ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಮೆರಿಕಾದಿಂದ ಬಂದಿದ್ದ ಇಂಜಿನಿಯರ್ ಜೊತೆಗೆ ಪ್ರಯಾಣಿಸಿದ್ದವರ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ
ಕೊರೋನಾ ಪೀಡಿತ ವ್ಯಕ್ತಿಯ ಪತ್ನಿ, ಮಗು ಹಾಗೂ ಚಾಲಕನನ್ನೂ ಸಹ ಪ್ರತ್ಯೇಕವಾಗಿ ಇರಿಸಲಾಗಿದೆ. ಸೋಂಕು ತಗುಲಿರುವ ವ್ಯಕ್ತಿಯನ್ನು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.