ಮಾತೆ ಮಾಣಿಕೇಶ್ವರಿ ಅಂತ್ಯ ಸಂಸ್ಕಾರ: ಕಣ್ಣೀರ ವಿದಾಯ ಹೇಳಿದ ಲಕ್ಷಾಂತರ ಭಕ್ತರು

ತಮ್ಮ ನಿರಾಹಾರ, ಶಿವಧ್ಯಾನ, ಅಹಿಂಸಾ ಬೋಧನೆಯಿಂದಲೇ ಜನಮಾನಸದಲ್ಲಿ ನೆಲೆಯೂರಿರುವ ಕಲ್ಯಾಣ ಕರ್ನಾಟಕದ ನಡೆದಾಡುವ ದೇವರು, ಗಿರಿ ಯೋಗಿನಿ ಸೇಡಂ ತಾಲೂಕಿನ ಯಾನಾಗುಂದಿ ಬೆಟ್ಟದ ಭಕ್ತರ ಮಾಣಿಕ್ಯ ಮಾತಾ ಮಾಣಿಕೇಶ್ವರಿ ಅಮ್ಮನವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರದ ಸೂರ್ಯನಂದಿ ಕ್ಷೇತ್ರದಲ್ಲಿ ಸೋಮವಾರ ಲಕ್ಷಾಂತರ ಭಕ್ತರ ಉಪಸ್ಥಿತಿಯಲ್ಲಿ ನೆರವೇರಿತು. 
ಮಾತೇ ಮಾಣಿಕೇಶ್ವರಿ
ಮಾತೇ ಮಾಣಿಕೇಶ್ವರಿ
Updated on

ಕಲಬುರಗಿ: ತಮ್ಮ ನಿರಾಹಾರ, ಶಿವಧ್ಯಾನ, ಅಹಿಂಸಾ ಬೋಧನೆಯಿಂದಲೇ ಜನಮಾನಸದಲ್ಲಿ ನೆಲೆಯೂರಿರುವ ಕಲ್ಯಾಣ ಕರ್ನಾಟಕದ ನಡೆದಾಡುವ ದೇವರು, ಗಿರಿ ಯೋಗಿನಿ ಸೇಡಂ ತಾಲೂಕಿನ ಯಾನಾಗುಂದಿ ಬೆಟ್ಟದ ಭಕ್ತರ ಮಾಣಿಕ್ಯ ಮಾತಾ ಮಾಣಿಕೇಶ್ವರಿ ಅಮ್ಮನವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರದ ಸೂರ್ಯನಂದಿ ಕ್ಷೇತ್ರದಲ್ಲಿ ಸೋಮವಾರ ಲಕ್ಷಾಂತರ ಭಕ್ತರ ಉಪಸ್ಥಿತಿಯಲ್ಲಿ ನೆರವೇರಿತು. 
    
ಮಧ್ಯಾಹ್ನ 2.30ರವರಗೆ ಸಾರ್ವಜನಿಕರಿಗೆ ಪಾರ್ಥೀವ ಶರೀರದ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇದರ ಜೊತೆಗೆ ವೀರ ಶೈವ ಸಂಪ್ರದಾಯದಂತೆ ಶ್ರೀಶೈಲ, ಯಾನಾಗುಂದಿಯ ಪುರೋಹಿತರ ತಂಡದಿಂದ ವೇದಘೋಷ, ಪೂಜೆ ನಡದಾದ ಮೇಲೆ ಅಂತಿಮ ವಿಧಿಯ ಪ್ರಕಾರ ಅಮ್ಮನವರಿಗೆ ನಾಗಸಿಂಹಾಸನದಲ್ಲಿ ವಿಶೇಷ ಪೂಜೆ ನಡೆಸಲಾಗಿತ್ತು. ಶಿಲೆಯಲ್ಲಿ ನಿರ್ಮಿಸಲಾಗಿದ್ದ ಲಿಂಗದಲ್ಲಿ ವಿಭೂತಿ, ಏಕಬಿಲ್ವಪತ್ರ ದಳಗಳು, ತುಳಸಿ, ಗಂದದ ಕಟ್ಟಿಗೆ ಇಡಲಾಯ್ತು. ನಂತರ ನಾಗಸಿಂಹಾಸನದ ಕೆಳಗಡೆಯಿರುವ ಲಿಂಗಾಕಾರದ ಪುಟ್ಟ ಗುಹೆಯಲ್ಲಿ ಅಮ್ಮನವರ ಪಾರ್ಥೀವ ಶರೀರವಿಟ್ಟು ಪೂಜೆ ಸಲ್ಲಿಸಲಾಯಿತು. ಸರಳ ಪೂಜೆ, ಆರತಿ ಬಲಿಕ ಮಾತಾಜಿ ಪಾರ್ಥೀವ ಶರೀರವನ್ನು ಸೂರ್ಯನಂದಿ ಕ್ಷೇತ್ರದಲ್ಲಿ ಮಹಾಮಂದಿರದ ಒಳಗೆ ಇದ್ದ ಕಲ್ಲಿನ ಲಿಂಗದೊಳಗೆ ಇಡಲಾಯಿತು. 

ಬೀದರಿನ ಮಾಣಿಕ್ಯ ಗಿರಿ ಸಂಸ್ಥಾನದ ಅಪ್ಪಸಾಹೇಬ್ ಮಹಾರಾಜರ ಸ್ವಾಮಿಯ ಆಶ್ರಮದಲ ಮಹಾಸ್ವಾಮಿ ವಿಶ್ವನಾಥ ಶಾಸ್ತ್ರೀ ಮತ್ತು ಶ್ರೀಶೈಲಂನ ನಂದಿಶ್ವರ ಸ್ವಾಮಿ ಹಾಗೂ ಟ್ರಸ್ಟ್ ಕಾರ್ಯದರ್ಶಿ ಶಿವಯ್ಯ ಸ್ವಾಮಿ ಮೂಲಕ ವೇದಮಂತ್ರಗಳನ್ನು ಪಠಿಸುತ್ತ ರುದ್ರಾಭಿಷೇಕ, ಮಹಾ ಪೂಜೆ ನೆರವೇರಿಸಿದರು. ನಿರಂತರ ಮೂರು ಗಂಟೆಗಳ ಕಾಲ ವಿಧಿ ವಿಧಾನಗಳು ನೇರವೇರಿದ ಬಳಿಕ 3.15ಕ್ಕೆ ಯೋಗಿನಿ ಮಾತಾ ಮಾಣಿಕೇಶ್ವರಿ ಲಿಂಗದಲ್ಲಿ ಲೀನವಾದರು. 

ಇದಕ್ಕೂ ಮೊದಲು ಮಧ್ಯಾಹ್ನ 12.58ಕ್ಕೆ ಸರ್ಕಾರದಿಂದ ಕೆಲ ಗೌರವಗಳನ್ನು ಮಾತೆಗೆ ಅರ್ಪಿಸಲಾಯ್ತು. ಯಾದಗಿರಿ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ್ ಸರ್ಕಾರದ ಪ್ರತಿನಿಧಿಯಾಗಿ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಕಲ್ಯಾಣ ಕರ್ನಾಟಕದ ಅನೇಕ ಮಠಗಳ ಸ್ವಾಮೀಜಿಗಳು ಉಪಸ್ಥಿತರಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com