ರಾಜ್ಯದಲ್ಲಿ ಹೂಡಿಕೆ ಮಾಡಲು ಉತ್ಸುಕರಾಗಿರುವ ಸಂಸ್ಥೆಗಳಿಗೆ ಎಲ್ಲ ರೀತಿಯ ನೆರವು - ಬಿ.ಎಸ್. ಯಡಿಯೂರಪ್ಪ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಗುರುವಾರ ಏರೋಸ್ಪೇಸ್ ಸಂಸ್ಥೆ ಲಾಕ್ಹೀಡ್ ಮಾರ್ಟಿನ್ ಮತ್ತು ಐಕೆಇಎ ಇಂಡಿಯಾದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಹೂಡಿಕೆ ಯೋಜನೆಗಳು ಮತ್ತು ಅವುಗಳ ಪ್ರಸ್ತುತ ಯೋಜನೆಗಳ ಬಗ್ಗೆ ಚರ್ಚಿಸಿದರು
ಬಿಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮತ್ತಿತರರು
ಬಿಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮತ್ತಿತರರು

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಗುರುವಾರ ಏರೋಸ್ಪೇಸ್ ಸಂಸ್ಥೆ ಲಾಕ್ಹೀಡ್ ಮಾರ್ಟಿನ್ ಮತ್ತು ಐಕೆಇಎ ಇಂಡಿಯಾದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಹೂಡಿಕೆ ಯೋಜನೆಗಳು ಮತ್ತು ಅವುಗಳ ಪ್ರಸ್ತುತ ಯೋಜನೆಗಳ ಬಗ್ಗೆ ಚರ್ಚಿಸಿದರು

ರಾಜ್ಯದಲ್ಲಿ ಹೂಡಿಕೆ ಮಾಡಲು ಉತ್ಸುಕರಾಗಿರುವ ಸಂಸ್ಥೆಗಳಿಗೆ ಎಲ್ಲ ರೀತಿಯ ನೆರವನ್ನು ನೀಡಲಾಗುವುದು ಎಂದು ಅವರು ಇದೇ ವೇಳೆ ಭರವಸೆ ನೀಡಿದರು.

ವಿಶ್ವ ಆರ್ಥಿಕ ಒಕ್ಕೂಟ ಶೃಂಗಸಭೆಗಾಗಿ ದಾವೋಸ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಲಾಕ್ಹೀಡ್ ಮಾರ್ಟಿನ್ ಸೇರಿದಂತೆ ಹಲವು ಉನ್ನತ ಅಧಿಕಾರಿಗಳನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭೇಟಿ ಮಾಡಿದ್ದರು. 

ರಾಜ್ಯದಲ್ಲಿ ಹೂಡಿಕೆ ಮಾಡಲು ಉತ್ಸುಕರಾಗಿರುವ ಲಾಕ್ಹೀಡ್ ಮಾರ್ಟಿನ್  ಸಂಸ್ಥೆಗೆ ಎಲ್ಲ ರೀತಿಯ ನೆರವು ಒದಗಿಸುವಂತೆ ಕೈಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ  ಸಭೆಯಲ್ಲಿ ನಿರ್ದೇಶಿಸಿದರು. 

ಇದು ಸೌಜನ್ಯದ ಭೇಟಿ, ಹೈದರಾಬಾದ್‌ನಲ್ಲಿರುವಂತೆ  ಬೆಂಗಳೂರಿನ ನಾಗಸಂದ್ರ ಪ್ರದೇಶದಲ್ಲಿ ಕಂಪನಿಯ ಮಳಿಗೆ ತಲೆ ಎತ್ತಲಿದೆ.  ಬೆಂಗಳೂರಿನ ವಿವಿಧ ಭಾಗಗಳಲ್ಲಿ “ಗ್ರಾಹಕ ಸಭೆ ಕೇಂದ್ರಗಳು” ಅಥವಾ ವಿವಿಧ ಸ್ವರೂಪಗಳ ಮಳಿಗೆಗಳನ್ನು ತೆರೆಯಲು ಕಂಪನಿಯು ಯೋಜಿಸಿದೆ ಎಂದು ಐಕೆಇಎ ಇಂಡಿಯಾ ಅಧಿಕಾರಿಗಳು ತಿಳಿಸಿದರು. 

ಗುರುವಾರ ನಡೆದ ಸಭೆಯಲ್ಲಿ ಕಂಪನಿಯ ಅಧಿಕಾರಿಗಳು,  ಪ್ರಸ್ತುತ ನಡೆಯುತ್ತಿರುವ ಯೋಜನೆ ಮತ್ತು ಬೆಂಗಳೂರಿನಲ್ಲಿ ಹೆಚ್ಚಿನ ಮಳಿಗೆಗಳನ್ನು ತೆರೆಯುವ ಯೋಜನೆಗಳ ಬಗ್ಗೆ ಸಿಎಂಗೆ ವಿವರಿಸಿದರು. ಕಂಪನಿಯು ಕೆಲವು ವರ್ಷಗಳ ಹಿಂದೆ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com