ಅಸಾಧ್ಯವನ್ನು ಸಾಧಿಸಿದ ಕೊರೋನಾ! ಬೆಂಗಳೂರು ಟ್ರಾಫಿಕ್ ಪ್ರಮಾಣದಲ್ಲಿ ಶೇ.50 ಕಡಿತ

ಮಾರಕ ಕೊರೋನಾವೈರಸ್ ಜನರಲ್ಲಿ ಭೀತಿಯನ್ನುಂಟು ಮಾಡಿರುವ ಬೆನ್ನಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಹಲವು ವರ್ಷಗಳಿಂದ  ಯಾವ ವಿವಿಧ ಕ್ರಮ ತೆಗೆದುಕೊಂಡರೂ ಸಾಧ್ಯವಾಗದ ಸಮಸ್ಯೆಯನ್ನು ಯಶಸ್ವಿಯಾಗಿ ಬಗೆಹರಿಸಿದೆ! ಅರೆ, ಇದ್ಯಾವ ಸಮಸ್ಯೆ ಎಂದು ಯೋಚಿಸಿದ್ದರೆ ಅದುವೇ ನಗರದ ಟ್ರಾಫಿಕ್ ಸಮಸ್ಯೆ! ಹೌದು, ಈ ಸಾಂಕ್ರಾಮಿಕ ರೋಗ ಭೀತಿ ನಗರದ ವಾಹನ ದಟ್ಟಣೆಯನ್ನು ಶೇಕಡಾ 30
ಬೆಂಗಳೂರಿನ ಒಂದು ರಸ್ತೆ
ಬೆಂಗಳೂರಿನ ಒಂದು ರಸ್ತೆ

ಬೆಂಗಳೂರು: ಮಾರಕ ಕೊರೋನಾವೈರಸ್ ಜನರಲ್ಲಿ ಭೀತಿಯನ್ನುಂಟು ಮಾಡಿರುವ ಬೆನ್ನಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಹಲವು ವರ್ಷಗಳಿಂದ  ಯಾವ ವಿವಿಧ ಕ್ರಮ ತೆಗೆದುಕೊಂಡರೂ ಸಾಧ್ಯವಾಗದ ಸಮಸ್ಯೆಯನ್ನು ಯಶಸ್ವಿಯಾಗಿ ಬಗೆಹರಿಸಿದೆ! ಅರೆ, ಇದ್ಯಾವ ಸಮಸ್ಯೆ ಎಂದು ಯೋಚಿಸಿದ್ದರೆ ಅದುವೇ ನಗರದ ಟ್ರಾಫಿಕ್ ಸಮಸ್ಯೆ! ಹೌದು, ಈ ಸಾಂಕ್ರಾಮಿಕ ರೋಗ ಭೀತಿ ನಗರದ ವಾಹನ ದಟ್ಟಣೆಯನ್ನು ಶೇಕಡಾ 30-50ರಷ್ಟು ಕಡಿತಗೊಳಿಸಿದೆ ಮತ್ತು ನಗರವು ನಿರ್ಜನ ದೃಶ್ಯಗಳನ್ನು ಕಾಣುತ್ತಿದ್ದು ಶಬ್ದ ಮತ್ತು ವಾಯುಮಾಲಿನ್ಯ ಕಡಿಮೆಯಾಗಿದೆ.

ಜೆಸಿ ರಸ್ತೆ, ಮೈಸೂರು ರಸ್ತೆ, ಕೆಜಿ ರಸ್ತೆ, ಲಾಲ್‌ಬಾಗ್ ರಸ್ತೆ, ಕೆಹೆಚ್ ರಸ್ತೆ, ಟ್ರಿನಿಟಿ ಸರ್ಕಲ್, ಎಂಜಿ ರಸ್ತೆ, ಕನ್ನಿಂಗ್ಹ್ಯಾಮ್ ರಸ್ತೆ ಮತ್ತು ರೇಸ್ ಕೋರ್ಸ್ ರಸ್ತೆ ಸೇರಿ ಅನೇಕ ಕಡೆ ವಾಹನ ದಟ್ಟಣೆ ಸಾಕಷ್ಟು ಕಡಿಮೆ ಆಗಿದೆ. 

ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಮನೆಯಿಂದ ಕೆಲಸ ಮಾಡಲುಹೇಳಿರುವುದು, ಜನಸಂದಣಿಯ ಸ್ಥಳಗಳನ್ನು ತಪ್ಪಿಸಲು ಸರ್ಕಾರದಿಂದ ನಾಗರಿಕರಿಗೆ ಸಾಮಾನ್ಯ ಸಲಹೆಗಳು ಇದಕ್ಕೆ ಕಾರಣವಾಗಿದೆ. 

“ನಾವು ಕಡಿಮೆ ಹೊಂಕಿಂಗ್ ಮತ್ತು ವಾಯುಮಾಲಿನ್ಯವನ್ನು ಗಮನಿಸಿದ್ದೇವೆ. ನಗರ ಮತ್ತು ಸುತ್ತಮುತ್ತ ವಾಹನಗಳ ಸಂಚಾರ ಕಡಿಮೆಯಾಗಿರುವುದರಿಂದ ಪಾದಚಾರಿಗಳು ಸಹ ಕಡಿಮೆ ಅಪಾಯಕ್ಕೆ ಒಳಗಾಗುತ್ತಾರೆ. ಅಲ್ಲದೆ, ನಮ್ಮ ಸಿಬ್ಬಂದಿಗಳಿಗೆ ದಟ್ಟಣೆಯನ್ನು ತೆರವುಗೊಳಿಸುವ ಕಾರ್ಯನಿರತ ಜಂಕ್ಷನ್‌ಗಳಲ್ಲಿ ನಿಲ್ಲುವ ಬದಲು ಕಚೇರಿ ಕೆಲಸ ಮಾಡಲು ಹೆಚ್ಚು ಸಮಯ ದೊರಕುತ್ತಿದೆ" ಹಿರಿಯ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸಂಚಾರ ಉಲ್ಲಂಘಿಸುವವರನ್ನು ಹಿಡಿಯಲು ಮತ್ತು ಮೊದಲಿನಂತೆ ದಂಡ ವಿಧಿಸಲು ಸಾಕಷ್ಟು ಸಮಯವನ್ನು ಬೇಡಬೇಕಾಗುತ್ತಿದೆ. ಪೂರ್ವ ವಿಭಾಗದ ಟ್ರಾಫಿಕ್ ಅಧಿಕಾರಿಯೊಬ್ಬರು  ಶನಿವಾರ, ಹಲಸೂರು  ಟ್ರಾಫಿಕ್ ಪೊಲೀಸರು ದ್ವಿಚಕ್ರ ವಾಹನ ಸವಾರನೊಬ್ಬನಿಗೆ  19,300 ರೂ. ದಂಡ ವಿಧಿಸಿದ್ದಾರೆ ಏಕೆಂದರೆ ಆತನ ವಿರುದ್ಧ 83 ಪ್ರಕರಣಗಳಿದ್ದವು. ಅವುಗಳಲ್ಲಿ ಹೆಚ್ಚಿನವು ಸಿಗ್ನಲ್ ಜಂಪಿಂಗ್ ಆಗಿತ್ತು. 

ಆಗ್ನೇಯ ವಿಭಾಗದ ಇನ್ನೋರ್ವ ಅಧಿಕಾರಿ  “ಕಳೆದ ಕೆಲವು ದಿನಗಳಿಂದ ಕಾಡುಬೀಸನಹಳ್ಳಿ  ರಸ್ತೆ ಮತ್ತು ಮಾರತ್ ಹಳ್ಳಿ  ರಿಂಗ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಶೇಕಡಾ 50 ರಷ್ಟು ಕಡಿಮೆಯಾಗಿದೆ” ಎಂದು ಹೇಳಿದರು.

ಸಾಂಕ್ರಾಮಿಕ ರೋಗ ಕಾರಣಕ್ಕೆ ಹೆಚ್ಚಿನ ಐಟಿ ಕಂಪನಿಗಳು ಉದ್ಯೋಗಿಗಳನ್ನು ಮನೆಯಿಂದ ಕೆಲಸ ಮಾಡಲು ಕೇಳಿಕೊಂಡಿವೆ ಮತ್ತು ಜನರು ಅನಾವಶ್ಯಕವಾಗಿ ಹೊರಗೆ ಅಡ್ದಾಡದಿರಲು ಇದು ಒಂದು ಪ್ರಮುಖ ಕಾರಣವಾಗಿದೆ ಎಂದು ಸಂಚಾರ ಸಲಹೆಗಾರ ಮತ್ತು ತಜ್ಞ ಎಂ.ಎನ್.ಶ್ರೀಹರಿ ಹೇಳಿದ್ದಾರೆ. “ಸಾಮಾನ್ಯವಾಗಿ, ಕನಿಷ್ಠ 25 ಲಕ್ಷ ವಾಹನಗಳು ರಸ್ತೆಗಳಲ್ಲಿ ಸಂಚರಿಸುತ್ತವೆ ನಗರ. ರಸ್ತೆಗಳಲ್ಲಿ ವಾಹನಗಳ ಸಂಖ್ಯೆಯಲ್ಲಿ ಕನಿಷ್ಠ ಶೇಕಡಾ 30 ರಷ್ಟು ಕಡಿತವಾಗಿದೆ ಎಂದು ನಾನು ಭಾವಿಸುತ್ತೇನೆ, ”ಎಂದು ಅವರು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com