ಸಿಲಿಕಾನ್ ಸಿಟಿಯಲ್ಲಿ ತಲೆ ಎತ್ತಿವೆ ಅಕ್ರಮ ಜೂಜು ಅಡ್ಡೆಗಳು: ಎರಡು ತಿಂಗಳಲ್ಲಿ 72 ಪ್ರಕರಣ ದಾಖಲು

ಎರಡು ತಿಂಗಳಲ್ಲಿ ಬೆಂಗಳೂರಿನಲ್ಲಿ ಕ್ರಿಕೆಟ್ ಬೆಟ್ಟಿಂಗ್,ಬೀದಿಬದಿ ಹಾಗೂ ಮನೆಗಳಲ್ಲಿ ಜೂಜಾಟದಂತಹಾ  72 ಪ್ರಕರಣಗಳು ದಾಖಲಾಗಿದೆ ಎಂದು  ಸಿಟಿ ಕ್ರೈಂ ಬ್ರಾಂಚ್ (ಸಿಸಿಬಿ) ನ ಹಿರಿಯ ಅಧಿಕಾರಿಗಳು ವಿವರಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಎರಡು ತಿಂಗಳಲ್ಲಿ ಬೆಂಗಳೂರಿನಲ್ಲಿ ಕ್ರಿಕೆಟ್ ಬೆಟ್ಟಿಂಗ್,ಬೀದಿಬದಿ ಹಾಗೂ ಮನೆಗಳಲ್ಲಿ ಜೂಜಾಟದಂತಹಾ  72 ಪ್ರಕರಣಗಳು ದಾಖಲಾಗಿದೆ ಎಂದು  ಸಿಟಿ ಕ್ರೈಂ ಬ್ರಾಂಚ್ (ಸಿಸಿಬಿ) ನ ಹಿರಿಯ ಅಧಿಕಾರಿಗಳು ವಿವರಿಸಿದ್ದಾರೆ.

ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ಮಾತನಾಡಿ, ಹೈಕೋರ್ಟ್ ಆದೇಶವು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ಮನರಂಜನಾ ಕ್ಲಬ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ಅವಕಾಶ ನೀಡುತ್ತದೆ ಎಂದಿದ್ದಾರೆ.  “ನಮ್ಮಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ಪತ್ತೆಹಚ್ಚಲು ಸಹಾಯ ಮಾಡುವ ಗುಪ್ತಚರರ ಮಾಹಿತಿದಾರರು ಮತ್ತು ಸಾರ್ವಜನಿಕರೂ ಇದ್ದಾರೆ. ಆದರೆ ಕ್ರಿಕೆಟ್ ಬೆಟ್ಟಿಂಗ್ ಗಳನ್ನು ಆಡುವ  ಜೂಜುಕೋರರನ್ನು ಹಿಡಿಯುವುದರಲ್ಲಿ ಸವಾಲು ಇದೆ, ಏಕೆಂದರೆ ಇದನ್ನು ಆನ್‌ಲೈನ್‌ನಲ್ಲಿ ಬೆಟ್ಟಿಂಗ್ ವೆಬ್‌ಸೈಟ್‌ಗಳ ಮೂಲಕ ಮಾಡಲಾಗುತ್ತದೆ, ”ಎಂದು ಪಾಟೀಲ್ ಹೇಳಿದರು,

"ಬಹುತೇಕ ಜೂಜಿನ ಅಡ್ಡೆಗಳು ನಗರದಿಂದ ಗ್ರಾಮೀಣ ಭಾಗಗಳಿಗೆ ಸ್ಥಳಾಂತರವಾಗಿದೆ. ಆದರೆ ಈಗ, ಜೂಜುಕೋರರು ನಗರ ವ್ಯಾಪ್ತಿಯಲ್ಲಿಯೂ ತಮ್ಮ ಚಟುವಟಿಕೆ ಹಮ್ಮಿಕೊಳ್ಳಲು ಪ್ರಾರಂಭಿಸಿದ್ದಾರೆ.ಒಂದು ನಿರ್ದಿಷ್ಟ ಮೌಲ್ಯದ ಆಟ ಇಂದು ರಾತ್ರಿ ಇದೆ ಎಂದು ತಿಳಿಸುವ ಪಠ್ಯ ಸಂದೇಶವನ್ನು ಮೊದಲಿಗೆ ಕಳಿಸಲಾಗುವುದು. ಇದಕ್ಕೆ ಆಸಕ್ತಿ ತೋರಿ ಸಂದೇಶ ಮರು ರವಾನೆಯಾಗುತ್ತದೆ. ಆಗ ಆಟದ ಸ್ಥಳ ಹಾಗೂ ಸಮಯದ ಮಾಹಿತಿ ನೀಡಲಾಗುವುದು. ಜೂಜುಕೋರರು ತಮ್ಮ ಆಹ್ವಾನಗಳನ್ನು ವಾಟ್ಸಾಪ್‌ನಲ್ಲಿ ಸ್ವೀಕರಿಸುತ್ತಾರೆ. ಪೊಲೀಸರು ತಮ್ಮ ಜಾಡಿನಲ್ಲಿದ್ದಾರೆ ಎಂದು ಸಂಘಟಕರು ಕಂಡುಕೊಂಡರೆ ಸ್ಥಳ ಬದಲಾಗುತ್ತಲೇ ಇರುತ್ತದೆ. ಇಂತಹ ಆಟಗಳು ನಿಯಮಿತವಾಗಿ ಆಟಗಾರರ ಡೇಟಾಬೇಸ್‌ನಲ್ಲಿರುವ ವಿಲ್ಲಾಗಳು ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ನಡೆಯುತ್ತವೆ." ಮೂಲಗಳು ಹೇಳಿದೆ.

ಪ್ರತಿದಿನ, ಹೆಚ್ಚಿನ ದರ್ಜೆಯ ಜೂಜುಕೋರರು ಗರಿಷ್ಠ 10,000 ರೂ. ಬೆಟ್ಟಿಂಗ್ ನಡೆಸುತ್ತಾರೆ. ಅದರಲ್ಲಿ ಜಯಶಾಲಿಗಳಿಗೆ 40,000 ರಿಂದ 1 ಲಕ್ಷ ರೂ. ಸಿಗುತ್ತದೆ. . ಪ್ರಸ್ತುತ, 28 ಕಾನೂನುಬದ್ದ ಪೋಕರ್ ಕ್ಲಬ್‌ಗಳಿವೆ, ಅವು ಗಿಫ್ಟ್ ವೋಚರ್ ಗಳೊಂದಿಗೆ ಪಂದ್ಯಾವಳಿಗಳನ್ನು ನಡೆಸುತ್ತವೆ ವಿಜೇತರಿಗೆ ಸಣ್ಣ ನಗದು ಬಹುಮಾನವನ್ನು ನೀಡುತ್ತವೆ.

ಮೊದಲ ಬಾರಿಗೆ ಅಪರಾಧಿಗಳು ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಸೆಕ್ಷನ್ 79-80 ರ ಅಡಿಯಲ್ಲಿ ಒಂದು ತಿಂಗಳ ಜೈಲು ಶಿಕ್ಷೆಯೊಂದಿಗೆ 200 ರೂ.ವರೆಗೆ ದಂಡವನ್ನು ಎದುರಿಸಬೇಕಾಗುತ್ತದೆ. ಆದಾಗ್ಯೂ, ಜೈಲು ಶಿಕ್ಷೆಯು ಎರಡನೆಯ ಮತ್ತು ಮೂರನೆಯ ಬಾರಿಗೆ ಮೂರರಿಂದ ಆರು ತಿಂಗಳವರೆಗೆ ವಿಸ್ತರಿಸಬಹುದು. 

ಈ ಮಾಸದ ಪ್ರಾರಂಭದಲ್ಲಿ ಸಿಸಿಬಿ ಉಪ್ಪಾರಪೇಟೆ ನಲ್ಲಿ ಜೂಜಾಟದ ಕ್ಲಬ್‌ವೊಂದರ ಮೇಲೆ ದಾಳಿ ನಡೆಸಿ ಅಲ್ಲಿ 110 ಜೂಜುಕೋರರನ್ನು ಬಂಧಿಸಿತ್ತು. . ಇದಕ್ಕೂ ಮೊದಲು ಗುತ್ತಿಗೆದಾರರ ಕ್ಲಬ್‌ನಲ್ಲಿ ಮತ್ತೊಂದು ದಾಳಿ ನಡೆಸಲಾಗಿದ್ದು ಅಲ್ಲಿ  ರೌಡಿ-ಶೀಟರ್ ಓರ್ವ ಜೂಜಾಟದಲ್ಲಿ ಸಿಕ್ಕಿಬಿದ್ದಿದ್ದನು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com