ಕೊರೋನಾ ಎಫೆಕ್ಟ್: ಹೋಟೆಲ್ ಗಳನ್ನು ಕ್ವಾರಂಟೈನ್'ಗಳಾಗಿ ಬಳಸಲು ಮುಂದಾದ ಸರ್ಕಾರ

ಕೊರೆನಾ ಸೋಂಕು ತಡೆಯಲು ರಾಜ್ಯ ಸರ್ಕಾರ ನಡೆಸುತ್ತಿರುವ ಹೋರಾಟಕ್ಕೆ ಕೈಜೋಡಿಸಲು ಹೋಟೆಲ್ ಮಾಲೀಕರು ಸ್ವಯಂ ಪ್ರೇರಿತರಾಗಿ ಮುಂದೆ ಬಂದಿದ್ದು, ಇದೀಗ ರಾಜ್ಯದ ಹಲವು ಹೋಟೆಲ್ ಗಳನ್ನು ಕ್ವಾರಂಟೈನ್ ಗಳನ್ನಾಗಿ ಬಳಕೆ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೆನಾ ಸೋಂಕು ತಡೆಯಲು ರಾಜ್ಯ ಸರ್ಕಾರ ನಡೆಸುತ್ತಿರುವ ಹೋರಾಟಕ್ಕೆ ಕೈಜೋಡಿಸಲು ಹೋಟೆಲ್ ಮಾಲೀಕರು ಸ್ವಯಂ ಪ್ರೇರಿತರಾಗಿ ಮುಂದೆ ಬಂದಿದ್ದು, ಇದೀಗ ರಾಜ್ಯದ ಹಲವು ಹೋಟೆಲ್ ಗಳನ್ನು ಕ್ವಾರಂಟೈನ್ ಗಳನ್ನಾಗಿ ಬಳಕೆ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಮೂಲಗಳ ಪ್ರಕಾರ ಹುಬ್ಬಳ್ಳಿಯ ಮೆಟ್ರೋಪೊಲಿಸ್, ಚಾಮರಾಜನಗರದ ನಿಜಗುಣ ರೆಸಿಡೆನ್ಸಿ ಮತ್ತು ತುಮಕೂರಿನ ಎಸ್.ಎಸ್.ರೆಸಿಡೆನ್ಸಿ ಹೋಟೆಲ್ ಗಳ ಮಾಲೀಕರು ಒಟ್ಟಾರೆ ತಮ್ಮ 108 ಕೊಠಡಿಗಳನ್ನು ಕ್ವಾರಂಟೈನ್ ಕೇಂದ್ರಗಳಾಗಿ ಬಳಸಲು ಸರ್ಕಾರಕ್ಕೆ ಒಪ್ಪಿಗೆ ನೀಡಿ ಪತ್ರ ಬರೆದಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ಹುಬ್ಬಳ್ಳಿಯ ಕೊಪ್ಟಕರ್ ರಸ್ತೆಯಲ್ಲಿರುವ ಹೋಟೆಲ್ ಉದ್ಯಮಿ ಅಶ್ರಫ್ ಅಲಿ ಬಶೀರ್ ಅಹ್ಮದ್  ಅವರು ತಮ್ಮ ಮೆಟ್ರೋ ಪೊಲೀಸ್ ಹೋಟೆಲ್ ನ ಒಂದು ಭಾಗದ 46 ಕೊಠಡಿಗಳನ್ನು ಕ್ವಾರಂಟೈನ್ ನಲ್ಲಿರುವವರಿಗಾಗಿ ನೀಡಲು ಸಿದ್ಧ ಎಂದು ಹೇಳಿದ್ದಾರೆ. 

ಮಾಜಿ ಸಚಿವ, ಬಿಜೆಪಿ ಮುಖಂಡ ಸೊಗಡು ಶಿವಣ್ಣ ಅವರು ತುಮಕೂರಿನ ಬಸ್ ನಿಲ್ದಾಣದ ಬಳಿ 30 ಕೊಠಡಿಯ ಎಸ್ಎಸ್ ರೆಸಿಡೆನ್ಸಿ ಹೋಟೆಲ್, ಚಾಮರಾಜನಗರದ ಜನಪ್ರಿಯ ಹೋಟೆಲ್ ಉದ್ಯಮಿ, ಬಿಜೆಪಿ ಮುಖಂಡ ಜಿ,.ನಿಜಗುಣ ರಾಜುರ 32 ಕೊಠಡಿಗಳ ನಿಜಗುಣ ರೆಸಿಡೆನ್ಸಿಯನ್ನು ಕ್ವಾರಂಟೈನ್ ವಾರ್ಡ್ ಆಗಿ ಪರಿವರ್ತಿಸಿಕೊಳ್ಳುವಂತೆ ಕೇಳಿಕೊಕಂಡಿದ್ದಾರೆ. 


ಕೊರೋನಾ ಶಂಕಿತರನ್ನು ಇರಿಸಲು 17 ಸ್ಟಾರ್ ಹೋಟೆಲ್ ಗುರುತಿಸಿದ ಬಿಬಿಎಂಪಿ
ನಗರದಲ್ಲಿ ಕೊರೋನಾ ಸೋಂಕಿನ ಶಂಕಿತರನ್ನು ಪ್ರತ್ಯೇಕವಾಗಿರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 3 ಸ್ಟಾರ್ ಮಟ್ಟದ 17 ಹೋಟೆಲ್ ಗಳನ್ನು ಗುರುತಿಸಿದೆ.

Hotel nameLocationRoomsContact
Sabarwal ResidencySudamanagar509535545654
Emirates HotelBTM layout409902156509
EmpireKoramangala 5th Block399964024514
SilicrestKoramangala 4th Block309743658258
Oyo AmethystJayanagar 5th Block329945815408
Ramakrishna LodgeGandhinagar2009966670215
Hotel CitadelAnand Rao Circle111080 424042222
Likith InternationalGandhinagar709886605538
Fortune Park JP CelestialSampangiramanagara1299980072233
Arafa InnGandhinagar469844404411
Lemon Tree PremierUlsoor609686453398
Keys SelectHosur Road1209686392804
Chalukya HotelChalukya circle709845292804
Sri Lakshmi PGDomlur279108764221
Trinity Wood HotelITPL Main Road259844003230
Keys Select WhitefieldITPL Main Road220220- 9686353398
Oyo Townnear Ulsoor lake287338523838

ಕೋವಿಡ್ -19 ಶಂಕಿತರನ್ನು ಪರೀಕ್ಷೆಗೊಳಪಡಿಸಿ, ಅದರ ವರದಿ ಬರುವರೆಗೆ ಅಂದರೆ ಗರಿಷ್ಠ ಎರಡು ದಿನಗಳ ಕಾಲ ಈ ಹೋಟೆಲ್ ಗಳಲ್ಲಿ ಪ್ರತ್ಯೇಕವಾಗಿರಿಸಲಾಗುವುದು. ಈ ಹೋಟೆಲ್ ಗಳಲ್ಲಿರುವ ಹವಾನಿಯಂತ್ರಿತ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸುವಂತೆ ಸೂಚನೆ ನೀಡಲಾಗಿದೆ.

ಈ ಶಂಕಿತ ವ್ಯಕ್ತಿಗಳ ಸಂಖ್ಯೆಗಳಿಗನುಗುಣವಾಗಿ ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರ ನಿಗದಿಪಡಿಸಿ ದರವನ್ನು ಪಾವತಿಸಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com