ಮಾನವೀಯತೆ: 6 ದಿನದಲ್ಲಿ ನಿರ್ಗತಿಕರಿಗೆ 3 ಸಾವಿರ ಆಹಾರ ಪೊಟ್ಟಣ ವಿತರಿಸಿದ ಬೆಂಗಳೂರಿಗ!

21 ದಿನಗಳ ಲಾಕ್ ಡೌನ್ ನಿಂದಾಗಿ ಭಾರತ ಅಕ್ಷರಶಃ ತತ್ತರಿಸಿದ್ದು ಅನ್ನ ಆಹಾರವಿಲ್ಲದೆ ಲಕ್ಷಾಂತರ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಬೆಂಗಳೂರು ವ್ಯಕ್ತಿ
ಬೆಂಗಳೂರು ವ್ಯಕ್ತಿ

ಬೆಂಗಳೂರು: 21 ದಿನಗಳ ಲಾಕ್ ಡೌನ್ ನಿಂದಾಗಿ ಭಾರತ ಅಕ್ಷರಶಃ ತತ್ತರಿಸಿದ್ದು ಅನ್ನ ಆಹಾರವಿಲ್ಲದೆ ಲಕ್ಷಾಂತರ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಲಾಕ್‌ಡೌನ್ ಮಧ್ಯೆ, ತಿನ್ನಲು ಆಹಾರವಿಲ್ಲದ ಹಲವಾರು ಜನರಿದ್ದಾರೆ. ಶಿವಾಜಿನಗರ ನಿವಾಸಿ ಎ.ಎಸ್. ಖಾನ್ ಅವರು ಮತ್ತು ಅವರ ಸ್ನೇಹಿತರು ಆಟೋ ಚಾಲಕರು, ಭಿಕ್ಷುಕರು, ಮನೆಯಿಲ್ಲದವರು ಮತ್ತು ಇತರ ದುರ್ಬಲ ಗುಂಪುಗಳಿಗೆ ಆಹಾರದ ಪೊಟ್ಟಣಗಳನ್ನು ನೀಡಿ ಮಾನೀಯತೆ ಮೆರೆದಿದ್ದಾರೆ.

ಲಾಕ್ ಡೌನ್ ಆದೇಶ ಬಂದ ನಂತರ ಇವರು ಕಳೆದ ಆರು ದಿನಗಳಲ್ಲಿ ಅವರು ಪಲಾವ್, ಗೀ ರೈಸ್ ಮತ್ತು ಮೊಸರ 3,000 ಪ್ಯಾಕೆಟ್ ಗಳನ್ನು ವಿತರಿಸಿದ್ದಾರೆ. ಕೊರೋನಾ ವೈರಸ್ ಹರಡುವಿಕೆಯನ್ನು ತಪ್ಪಿಸಲು ಪ್ರಧಾನ ಮಂತ್ರಿ ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com