ಬೆಂಗಳೂರು: ವಿಶ್ವದ 190ಕ್ಕೂ ಅಧಿಕ ದೇಶಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ನಮ್ಮಲ್ಲಿ ಪರಿಣಾಮಕಾರಿ ಔಷಧಿ ಇದೆ ಎಂದು ಖ್ಯಾತ ಆಯುರ್ವೇದ ತಜ್ಞ ಸಂತೋಷ್ ಗುರೂಜಿ ಹೇಳಿದ್ದಾರೆ.
ಈ ಕುರಿತಂತೆ ವಿಡಿಯೋ ಮೂಲಕ ಹೇಳಿಕೆ ನೀಡಿರುವ ಸಂತೋಷ್ ಗುರೂಜಿ ಅವರು, ಇಡೀ ದೇಶ ಮಾರಕ ಕೊರೋನಾ ವೈರಸ್ ನಿಂದಾಗಿ ತತ್ತರಿಸುತ್ತಿದೆ. ಆದರೆ ಈ ವೈರಸ್ ಗೆ ಭಯ ಪಡುವ ಅಗತ್ಯವಿಲ್ಲ. ಈ ಮಾರಕ ವೈರಸ್ ಗೆ ತಮ್ಮ ಆಶ್ರಮ ಪರಿಣಾಮಕಾರಿ ಔಷಧಿ ಕಂಡುಹಿಡಿದಿದೆ. ವಾಸ, ತಾಲಿಶ್ಪತ್ರ, ವಂಶಲೋಚನ, ಅಮೃತ ಇತ್ಯಾದಿ ಅತ್ಯಮೂಲ್ಯ ಗಿಡಮೂಲಿಕೆಗಳ ಮಿಶ್ರಣದಿಂದ ತಯಾರಿಸಲಾದ ಆಯುರ್ ಶ್ವಾಸ ಚೂರ್ಣವನ್ನು ತಯಾರಿಸಲಾಗಿದೆ. ಈಗಾಗಲೇ ಕೊರೋನಾ ವೈರಸ್ ಗೆ ವೈದ್ಯರು ಪರಿಣಾಮಕಾರಿ ಔಷಧಿ ನೀಡುತ್ತಿದ್ದು, ಅದರ ಜೊತೆಗೆ ನಮ್ಮ ಈ ಆಯುರ್ ಶ್ವಾಸ ಚೂರ್ಣವನ್ನು ಔಷಧಿಯಾಗಿ ತೆಗೆದುಕೊಂಡರೆ ಖಂಡಿತಾ ಕೊರೋನಾ ವೈರಸ್ ನಿರ್ಮೂಲನೆಯಾಗುತ್ತದೆ ಎಂದು ಹೇಳಿದ್ದಾರೆ.
ಅಂತೆಯೇ ತಮ್ಮ ಈ ಔಷಧಿಯನ್ನು ನಾವು ಸೋಂಕಿತರಿಗೆ ಉಚಿತವಾಗಿ ನೀಡಲು ಸಿದ್ಧವಿದ್ದು, ಇದಕ್ಕಾಗಿ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಸಂತೋಷ್ ಗುರೂಜಿ ಮನವಿ ಮಾಡಿದ್ದಾರೆ. ಇದೇ ವೇಳೆ ತಮಗೆ ಯಾವುದೇ ರೀತಿಯ ಹೆಸರು ಅಥವಾ ಖ್ಯಾತಿ ಬೇಕಿಲ್ಲ. ಭಾರತದಿಂದ ಈ ಕೊರೋನಾ ಹಿಮ್ಮೆಟಿದರೆ ಸಾಕು. ಅದೇ ನಮ್ಮ ಧ್ಯೇಯ. ನಾನೂ ಕೂಡ ಆಯುರ್ವೇದದಲ್ಲಿ ಸಾಕಷ್ಟು ಅನುಭವ ಪಡೆದಿದ್ದು, ಆ ಅನುಭವದ ಮೂಲಕ ಈ ಔಷಧಿ ತಯಾರಿಸಲಾಗಿದೆ. ಈ ಔಷಧಿಯನ್ನು ಸರ್ಕಾರ ಬೇಕಿದ್ದರೆ ಪರೀಕ್ಷೆ ನಡೆಸಿ ಬಳಿಕವೇ ರೋಗಿಗಳಿಗೆ ನೀಡಲಿ ಎಂದು ಸಂತೋಷ್ ಗುರೂಜಿ ಮನವಿ ಮಾಡಿದ್ದಾರೆ.
ಭಾರತದಲ್ಲಿ ಕೊರೋನಾ ಸೋಂಕು ಅಪಾಯಕಾರಿ ಮಟ್ಟಕ್ಕೆ ಬೆಳೆದಿಲ್ಲ. ಈಗಲೇ ನಾವು ಇದನ್ನು ಚಿವುಟಿ ಹಾಕಬೇಕಿದೆ. ಅದು ಸಾಧ್ಯ ಕೂಡ. ಹೀಗಾಗಿ ನಮ್ಮ ಔಷಧಿಯನ್ನು ಒಮ್ಮೆ ಪರೀಕ್ಷಿಸಿ ಎಂದು ಸರ್ಕಾರ ಮತ್ತು ಆಯುಷ್ ಇಲಾಖೆಗೆ ಮನವಿ ಮಾಡಿದ್ದಾರೆ.
Advertisement