ಲಾಕ್ ಡೌನ್ ಎಫೆಕ್ಟ್: ಪರಿಶುದ್ಧ ಗಾಳಿ, ನೆಮ್ಮದಿಯಾಗಿ ಉಸಿರಾಡುತ್ತಿರುವ ಬೆಂಗಳೂರು!

ಜಗತ್ತಿನಾದ್ಯಂತ ಮಹಾ ಹೆಮ್ಮಾರಿಯಾಗಿ ಮನುಕುಲವನ್ನು ಕಾಡುತ್ತಿರುವ ಕೊರೋನಾವೈರಸ್ ಅನೇಕ ಸಾವು, ನೋವು ನಷ್ಟಗಳಿಗೆ ಕಾರಣವಾಗಿರುವಂತೆಯೇ ಇದು ಸಮಾಜದಲ್ಲಿ ಒಂದು ರೀತಿಯ ಪರಿವರ್ತನೆಗೂ ಕಾರಣವಾಗಿದೆ.
ಬೆಂಗಳೂರು-ಹೈದ್ರಾಬಾದ್ ರಸ್ತೆ
ಬೆಂಗಳೂರು-ಹೈದ್ರಾಬಾದ್ ರಸ್ತೆ

ಬೆಂಗಳೂರು: ಜಗತ್ತಿನಾದ್ಯಂತ ಮಹಾ ಹೆಮ್ಮಾರಿಯಾಗಿ ಮನುಕುಲವನ್ನು ಕಾಡುತ್ತಿರುವ ಕೊರೋನಾವೈರಸ್ ಅನೇಕ ಸಾವು, ನೋವು ನಷ್ಟಗಳಿಗೆ ಕಾರಣವಾಗಿರುವಂತೆಯೇ ಇದು ಸಮಾಜದಲ್ಲಿ ಒಂದು ರೀತಿಯ ಪರಿವರ್ತನೆಗೂ ಕಾರಣವಾಗಿದೆ. ಕೊರೋನಾವೈರಸ್ ನಿಯಂತ್ರಣ ನಿಟ್ಟಿನಲ್ಲಿ ಜಾರಿಯಾಗಿರುವ ಲಾಕ್ ಡೌನ್ ನಿಂದಾಗಿ ಪ್ರಕೃತಿಗೆ ಹೊಸ ಹೊಳಪು ಬಂದಂತಾಗಿದ್ದು, ನೈರ್ಮಲ್ಯತೆಯ ಪಾಠ ಕಲಿಸಿದೆ. ನಗರ ಪ್ರದೇಶಗಳಲ್ಲಿ ವಾಯು ಮಾಲಿನ್ಯ ಪ್ರಮಾಣ ಕಡಿಮೆಯಾಗಿದ್ದು, ಜನರು ನೆಮ್ಮದಿಯಿಂದ ಉಸಿರಾಡುವಂತಾಗಿದೆ. 

ಮಾರ್ಚ್ 25ರಿಂದ ಜಾರಿಯಲ್ಲಿರುವ ಲಾಕ್ ಡೌನ್ ನಿಂದಾಗಿ ಬೆಂಗಳೂರಿನ ವಾಯು ಗುಣಮಟ್ಟದಲ್ಲಿ ಮಹತ್ವದ ಸುಧಾರಣೆಯಾಗಿದ್ದು, ಬೆಂಗಳೂರಿಗರು ಸುಲಭವಾಗಿ  ಉಸಿರಾಡುವಂತಾಗಿದೆ. ನಗರದಲ್ಲಿನ ವಾಯು ಗುಣಮಟ್ಟ ಸೂಚ್ಯಂಕವನ್ನು ಇತ್ತೀಚಿಗೆ ತುಲನಾತ್ಮಕವಾಗಿ ವಿಶ್ಲೇಷಿಸಿದ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ (ಐಎಸ್ ಇಸಿ) ಸಂಸ್ಥೆಯ ಸಂಶೋಧಕರು ಈ ರೀತಿಯಲ್ಲಿ ಹೇಳಿದ್ದಾರೆ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಾಯು ಗುಣಮಟ್ಟ ನಿರ್ವಹಣಾ ಪ್ರಕ್ರಿಯೆಯಲ್ಲಿ ವಾಯು ಗುಣಮಟ್ಟ ಸೂಚ್ಯಂಕದ ಮೌಲ್ಯ 64 ದಾಖಲಾಗಿದೆ. ಇದು ಏಪ್ರಿಲ್ 15 ರ ಹೊತ್ತಿಗೆ ತೃಪ್ತಿಕರವಾಗಿ ಉತ್ತಮ ಹವಾನಿಯಂತ್ರಣವಾಗಿದೆ, ಆದರೆ 2019 ರ ಏಪ್ರಿಲ್‌ನಲ್ಲಿ ವಾಯು ಗುಣಮಟ್ಟದ ಸೂಚ್ಯಂಕ ಮೌಲ್ಯ 87 ಆಗಿತ್ತು  ಎಂದು ಸಂಶೋಧನೆ ತಿಳಿಸಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವಿಶ್ಲೇಷಿಸಿರುವಂತೆ 103 ನಗರಗಳಲ್ಲಿ ಶೇ. 90 ರಷ್ಟು ವಾಯುಮಾಲಿನ್ಯ ಗುಣಮಟ್ಟ ಸೂಚ್ಯಂಕ ತೃಪ್ತಿಕರವಾಗಿದೆ. 

ವಾಯು ಗುಣಮಟ್ಟ ಸೂಚ್ಯಂಕ ಮೌಲ್ಯದ ಪ್ರಕಾರ 0-50 ನಡುವಿನ ಶ್ರೇಣಿಯನ್ನು ಉತ್ತಮ  ಎಂದು ಪರಿಗಣಿಸಲಾಗುತ್ತದೆ, 51-100 ತೃಪ್ತಿದಾಯಕ,  101-200  ಮಧ್ಯಮ ಎನ್ನಲಾಗುತ್ತದೆ, ಆದರೆ ಅದನ್ನು ಮೀರಿದ ಶ್ರೇಣಿಯನ್ನು  ಕಳಪೆ  ಎಂದು ಪರಿಗಣಿಸಲಾಗುತ್ತದೆ ಇಂತಹ ಕಡೆಗಳಲ್ಲಿ ವಾಯು ಮಾಲಿನ್ಯ ಹೆಚ್ಚಾಗುವುದರೊಂದಿಗೆ ಮಟ್ಟ, ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ 

ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಇಂತಹ ಲಾಕ್‌ಡೌನ್‌ಗಳು ಅಗತ್ಯವಾಗಬಹುದು. ಇದೀಗ, ಇದು ಬಲವಂತದ ಲಾಕ್‌ಡೌನ್ ಆಗಿದೆ ಮತ್ತು ಆದ್ದರಿಂದ ನಾವು ಪರಿಸರದಲ್ಲಿನ ವ್ಯತ್ಯಾಸವನ್ನು ನೋಡುತ್ತೇವೆ ಎಂದು ಸಂಶೋಧಕರಲ್ಲಿ ಒಬ್ಬರಾದ ಸುನಿಲ್ ನೌತಿಯಲ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. 

ವಿಶ್ಲೇಷಣೆ ಪ್ರಕಾರ ಬೆಂಗಳೂರು 1600 ಕೈಗಾರಿಕೆಗಳನ್ನು ಹೊಂದುವ ಮೂಲಕ ಕೆಂಪು ವರ್ಗದಲ್ಲಿದೆ. ಕಡ್ಡಾಯವಾಗಿ ಮನೆಯೊಳಗಿನ ಮಾಲಿನ್ಯ ನಿರ್ವಹಣೆ ಮಾಡಬೇಕಾಗುತ್ತದೆ. ಬೆಂಗಳೂರಿನ ಒಂಬತ್ತು ನಿರ್ವಹಣಾ ಕೇಂದ್ರಗಳ ಮೂಲಕ ಲಾಕ್ ಡೌನ್ ಪರಿಣಾಮದಿಂದ ವಾಯು ಗುಣಮಟ್ಟದಲ್ಲಾದ ವ್ಯತ್ಯಾಸವನ್ನು ವಿಶ್ಲೇಷಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com