'ನಿತ್ಯೋತ್ಸವ' ಹಿರಿಯ ಸಾಹಿತಿ ಕೆಎಸ್ ನಿಸಾರ್ ಅಹಮ್ಮದ್ ವಿಧಿವಶ!

ಹಿರಿಯ ಸಾಹಿತಿ ಪ್ರೊಪೆಸರ್ ಕೆಎಸ್ ನಿಸಾರ್ ಅಹಮ್ಮದ್ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿವಶರಾಗಿದ್ದಾರೆ.
ನಿಸಾರ್ ಅಹಮ್ಮದ್
ನಿಸಾರ್ ಅಹಮ್ಮದ್
Updated on

ಬೆಂಗಳೂರು: ಹಿರಿಯ ಸಾಹಿತಿ ಪ್ರೊಪೆಸರ್ ಕೆಎಸ್ ನಿಸಾರ್ ಅಹಮ್ಮದ್ ವಿಧಿವಶರಾಗಿದ್ದಾರೆ. 

ಇತ್ತೀಚೆಗೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿವಶರಾಗಿದ್ದಾರೆ.

84 ವರ್ಷ ವಯಸ್ಸಿನ ನಿಸಾರ್ ಅಹಮ್ಮದ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ 1936ರ ಫೆಬ್ರವರಿ 5ರಂದು ಜನಿಸಿದ್ದರು. 

ಮನಸು ಗಾಂಧಿ ಬಜಾರು, ನೆನೆದವರ ಮನದಲ್ಲಿ, ಸುಮಹೂರ್ತ, ಸಂಜೆ ಐದರ ಮಳೆ, ನಾನೆಂಬ ಪರಕೀಯ, ಆಯ್ದ ಕವಿತೆಗಳು, ಸ್ವಯಂ ಸೇವೆಯ ಗಿಳಿಗಳು, ಅನಾಮಿಕ ಆಂಗ್ಲರು, ಬರಿರಂತರ, ಸಮಗ್ರ ಕವಿತೆಗಳು, ನವೋಲ್ಲಾಸ, ಆಕಾಶಕ್ಕೆ ಸರಹದ್ದುಗಳಿಲ್ಲ, ಅರವತ್ತೈದರ ಐಸಿರಿ, ಸಮಗ್ರ ಭಾವಗೀತೆಗಳು, ಪ್ರಾತಿನಿಧಿಕ ಕವನಗಳು, ನಿತ್ಯೋತ್ಸವ ಪ್ರಮುಖ ಕವನಸಂಕಲನಗಳು.

ಪ್ರಶಸ್ತಿ ಪುರಸ್ಕಾರಗಳು!
* ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
* ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
* ಗೊರೂರು ಪ್ರಶಸ್ತಿ
* ಅನಕೃ ಪ್ರಶಸ್ತಿ
* ಕೆಂಪೇಗೌಡ ಪ್ರಶಸ್ತಿ
* ಪಂಪ ಪ್ರಶಸ್ತಿ
* 1981ರ ರಾಜ್ಯೋತ್ಸವ ಪ್ರಶಸ್ತಿ
* 2003ರ ನಾಡೋಜ ಪ್ರಶಸ್ತಿ
* 2006ರ ಅರಸು ಪ್ರಶಸ್ತಿ
* 2006ರ ಮಾಸ್ತಿ ಪ್ರಶಸ್ತಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com