ಕ್ವಾರಂಟೈನ್ ಕ್ಯಾಂಪ್ಸ್ ತೆರೆಯಲು ಹೋಟೆಲ್ ಬಾಡಿಗೆ ದರ ಪರಿಷ್ಕರಿಸಿದ ಸರ್ಕಾರ

ಕೋವಿಡ್-19 ಸಾಂಕ್ರಾಮಿಕ  ರೋಗವನ್ನು ನಿಯಂತ್ರಿಸುವ ಸಲುವಾಗಿ ಸೋಂಕಿತರನ್ನು ಕ್ವಾರಂಟೈನಲ್ಲಿ ಇರಿಸಲು ಸಾಮಾನ್ಯ ದರ್ಜೆಯ ಹೋಟೆಲ್ ಗಳಲ್ಲಿ ಕ್ವಾರಂಟೈನ್ ಕ್ಯಾಂಪ್ಸ್ ಗಳನ್ನು ತೆರೆಯಲು ಹೋಟೆಲ್ ಬಾಡಿಗೆ ದರವನ್ನು  ರಾಜ್ಯ ಸರ್ಕಾರ ಪರಿಷ್ಕರಿಸಿ ನಿಗದಿಪಡಿಸಿದೆ.
ಹೋಟೆಲ್ ಕ್ವಾರಂಟೈನ್ ವ್ಯವಸ್ಥೆಯ ಚಿತ್ರ
ಹೋಟೆಲ್ ಕ್ವಾರಂಟೈನ್ ವ್ಯವಸ್ಥೆಯ ಚಿತ್ರ
Updated on

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ  ರೋಗವನ್ನು ನಿಯಂತ್ರಿಸುವ ಸಲುವಾಗಿ ಸೋಂಕಿತರನ್ನು ಕ್ವಾರಂಟೈನಲ್ಲಿ ಇರಿಸಲು ಸಾಮಾನ್ಯ ದರ್ಜೆಯ ಹೋಟೆಲ್ ಗಳಲ್ಲಿ ಕ್ವಾರಂಟೈನ್ ಕ್ಯಾಂಪ್ಸ್ ಗಳನ್ನು ತೆರೆಯಲು ಹೋಟೆಲ್ ಬಾಡಿಗೆ ದರವನ್ನು  ರಾಜ್ಯ ಸರ್ಕಾರ ಪರಿಷ್ಕರಿಸಿ ನಿಗದಿಪಡಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿದಿನ ಉಟ ಸೇರಿದಂತೆ ಗರಿಷ್ಠ ಕೊಠಡಿ ಬಾಡಿಗೆ ರೂ. 1, 200, ಇತರೆ ಮುನ್ಸಿಪಾಲ್ ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ರೂ. 900 ಹಾಗೂ ಪುರಸಭೆ ವ್ಯಾಪ್ತಿಯನ್ನೊಳಗೊಂಡಂತೆ  ರಾಜ್ಯದ ಇತರ ಎಲ್ಲಾ ಪ್ರದೇಶಗಳಲ್ಲಿ ರೂ. 750  ನಿಗದಿಪಡಿಸಲಾಗಿದೆ.

ಕ್ವಾರಂಟೈನ್ ಕ್ಯಾಂಪ್ಸ್ ಗಳನ್ನು ತೆರೆಯಲು ಕೆಲವೊಂದು ಷರತ್ತುಗಳು ಅನ್ವಯವಾಗಲಿದೆ. ಹೋಟೆಲ್ ಗಳ ಸೂಕ್ತತೆಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಪರಿಶೀಲಿಸಿ ದೃಢೀಕರಿಸಬೇಕು, ಹೋಟೆಲ್ ಮತ್ತು ಅವರ ಉದ್ಯೋಗಿಗಳನ್ನು ಸುರಕ್ಷಿತವಾಗಿರಿಸಲು ಮಾಸ್ಕ್ ಮತ್ತು ನೈರ್ಮಲ್ಯೀಕರಣದ ಸೇವೆಗಳನ್ನು ಒಳಗೊಂಡ ರಕ್ಷಣಾತ್ಮಕ ಸಾಧನಗಳನ್ನು ಒದಗಿಸಬೇಕು

ಒಂದು ವೇಳೆ  ಸೋಂಕಿತರು ಹೆಚ್ಚಾದಲ್ಲಿ ಸರ್ಕಾರಿ ಕಟ್ಟಡಗಳಲ್ಲಿ ಜಾಗ ಲಭ್ಯವಿಲ್ಲದಿರುವುದನ್ನು ಕಡ್ಡಾಯವಾಗಿ ಖಚಿತಪಡಿಸಿಕೊಂಡ ನಂತರವೇ ಸಾಮೂಹಿಕ ಕ್ವಾರಂಟೈನ್ ಸೇವೆ ಪಡೆಯತಕ್ಕದು, ಹೋಟೆಲ್ ಕ್ವಾರಂಟೈನ್ ಗಳಲ್ಲಿರುವ ಸೋಂಕಿತರ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಕೇಂದ್ರಸರ್ಕಾರ ಮಾರ್ಗಸೂಚಿಯಂತೆ ಎಸ್ ಡಿಆರ್ ಎಫ್ ಅಡಿ ಜಿಲ್ಲಾಧಿಕಾರಿಯವರ ಪಿ. ಡಿ. ಖಾತೆಯಲ್ಲಿ ಲಭ್ಯವಿರುವ ಅನುದಾನದಿಂದ ಭರಿಸುವುದು ಹಾಗೂ ಇದಕ್ಕೆ ತಗಲುವ ವೆಚ್ಚದ ವಿವರವನ್ನು ಸರ್ಕಾರಕ್ಕೆ ಸಲ್ಲಿಸಿ, ಮಂಜೂರಾತಿ ಪಡೆಯಬೇಕಾಗುತ್ತದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com