ರಾಯಬಾಗ: ಕಿಡ್ನಿ ಕಸಿ ಮಾಡಿಸಿಕೊಂಡ ಯುವಕನಿಗೆ ಮಾತ್ರೆ ಒದಗಿಸಿದ ತಹಸೀಲ್ದಾರ್

ಕಿಡ್ನಿ ಕಸಿ ಮಾಡಿಸಿಕೊಂಡ ಬಂದ ಯುವಕನಿಗೆ ಲಾಕ್ ಡೌನ್ ಎಫೆಕ್ಟಿನಿಂದ ಮಾತ್ರೆಗಳು ಸಿಗಲಿಲ್ಲ. ಇಂತಹ ಸಮಯದಲ್ಲಿ ರಾಯಬಾಗ ತಹಸೀಲ್ದಾರ್ ಸ್ವಂತ ಖರ್ಚಿನಿಂದ ಆ ಬಡ ಕುಟುಂಬಕ್ಕೆ ಮಾತ್ರೆಗಳನ್ನು ಒದಗಿಸಿದ ಘಟನೆ ತಾಲೂಕಿನ ಪರಮಾನಂದವಾಡಿ ಗ್ರಾಮದಲ್ಲಿ  ನಡೆದಿದೆ.
ಯುವಕನಿಗೆ ಮಾತ್ರೆ ಒದಗಿಸಿದ ತಹಸೀಲ್ದಾರ್
ಯುವಕನಿಗೆ ಮಾತ್ರೆ ಒದಗಿಸಿದ ತಹಸೀಲ್ದಾರ್
Updated on

ರಾಯಬಾಗ: ಕಿಡ್ನಿ ಕಸಿ ಮಾಡಿಸಿಕೊಂಡ ಬಂದ ಯುವಕನಿಗೆ ಲಾಕ್ ಡೌನ್ ಎಫೆಕ್ಟಿನಿಂದ ಮಾತ್ರೆಗಳು ಸಿಗಲಿಲ್ಲ. ಇಂತಹ ಸಮಯದಲ್ಲಿ ರಾಯಬಾಗ ತಹಸೀಲ್ದಾರ್ ಸ್ವಂತ ಖರ್ಚಿನಿಂದ ಆ ಬಡ ಕುಟುಂಬಕ್ಕೆ ಮಾತ್ರೆಗಳನ್ನು ಒದಗಿಸಿದ ಘಟನೆ ತಾಲೂಕಿನ ಪರಮಾನಂದವಾಡಿ ಗ್ರಾಮದಲ್ಲಿ  ನಡೆದಿದೆ.

ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದ ಶಿವಾನಂದ ಮಾರುತಿ ಜಕಾತಿ ಹಾಗೂ ತಮ್ಮ ಸುಭಾಷ್ ಮಾರುತಿ ಜಕಾತಿ ಎಂಬುವವರು ಗ್ರಾಮದಲ್ಲಿ ಒಂದು ಚಿಕ್ಕ ಹೂಟೇಲ್ ಹಾಗೂ ಪಾನ್ ಶಾಪ್ ನಡೆಸಿಕೊಂಡು ತಾಯಿ ಹಾಗೂ ಐದು ಜನ ಸಹೋದರಿಯರ  ಜವಾಬ್ದಾರಿಯನ್ನು ಹೊತ್ತುಕೊಂಡು ಜೀವನ ಸಾಗಿಸುತ್ತಿರುತ್ತಾರೆ. ಕಳೆದ ಎರಡು ವರ್ಷಗಳ ಹಿಂದೆ ಸಾಲ ಮಾಡಿಕೂಂಡು ಸುಭಾಷ್ ಗೆ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ೪೫ಲಕ್ಷ ರೂಪಾಯಿ ವೆಚ್ಚದಲ್ಲಿ ಪಿತ್ತಜನಕಾಂಗ ಕಸಿ ಮಾಡಿಸಿಕೊಂಡು ಸದ್ಯ ಪ್ರತಿ ತಿಂಗಳಿಗೆ ಏಳು  ಸಾವಿರ ರೂಪಾಯಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುತ್ತಾನೆ. ಈಗ ಇತನು ತನ್ನ ದಿನನಿತ್ಯದ ಕೆಲಸಗಳಲ್ಲಿ ತೂಡಗಿಸಿ ಕೊಂಡಿದ್ದನು. 

ಆದರೆ ಮಹಾಮಾರಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ೪೦ದಿನಗಳಿಂದ ಲಾಕ್ ಡೌನ್ ಆದ ಕಾರಣ ಮಾತ್ರೆಗಳು ಮುಗಿದಿದ್ದವು. ಮಾತ್ರೆಗಳಿಲ್ಲದೆ ಮತ್ತೆ ಆರೋಗ್ಯದಲ್ಲಿ ಏರು ಪೇರಾಗುವ ಸಾಧ್ಯತೆಗಳು ಇದ್ದುದ್ದರಿಂದ ಬೆಂಗಳೂರಿನಲ್ಲಿ ಮಾತ್ರ ಸಿಗುವ ಮಾತ್ರೆಗಳಿಗಾಗಿ ಪರದಾಡುವ ಸ್ಥಿತಿ  ಒದಗಿ ಬಂದಿತ್ತು. ಈ ಬಗ್ಗೆ ಸ್ಥಳೀಯರ ಸಹಾಯದಿಂದ ರಾಯಬಾಗ ತಹಶಿಲ್ದಾರರ ಗಮನಕ್ಕೆ ತಂದಿದ್ದಾರೆ. ಕೂಡಲೆ ಸ್ಪಂದಿಸಿದ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ಎರಡು ದಿನಗಳಲ್ಲಿ ಬೆಂಗಳೂರಿನಿಂದ ತಮ್ಮ ಸ್ವಂತ ಹಣದಲ್ಲಿ ಮಾತ್ರೆಗಳನ್ನು ತರಿಸಿ ಕೂಡುವ ಮೂಲಕ ಮಾನವೀಯತೆ  ಮೆರೆದಿದ್ದಾರೆ.

ಇಂತಹ ಸಂದಿಗ್ಧ ಸ್ಥಿತಿಯಲ್ಲಿ ತಮ್ಮ ದಿನನಿತ್ಯದ ಜವಾಬ್ದಾರಿಯುತ ಕೆಲಸ ಕಾರ್ಯಗಳಲ್ಲಿ ತೂಡಗಿಸಿಕೊಳ್ಳುವ ಜೂತೆಗೆ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ಅತಿ ಸಾಮಾನ್ಯ ಜನರಿಗೂ ಸ್ಪಂದಿಸುವ ಮೂಲಕ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇದೇ ವಿಷಯವಾಗಿ ಪಿತ್ತ  ಜ‌ನಕಾಂಗದ ಕಸಿಮಾಡಿಸಿಕೊಂಡ ವ್ಯಕ್ತಿ ಮಾತನಾಡಿದ ಸುಭಾಷ ಜಕಾತಿ, ನನಗೆ ಪಿತ್ತ ಜನಕಾಂಗದ ಕಸಿ ಮಾಡಿಸಿಕೊಂಡು ಬಂದಿದ್ದೇವು. ಆದರೆ ಲಾಕ್ ಡೌನ್ ಹಿನ್ನೆಲೆ ಯಾರೂ ಹೊರ ಬರದಂತ ಪರಿಸ್ಥಿತಿ ನಿರ್ಮಾಣವಾಗಿತ್ತು ಅಂತ ಸಂದರ್ಭದಲ್ಲಿ ಸ್ಥಳೀಯರ ಸಹಾಯದಿಂದ  ತಹಸೀಲ್ದಾರ ಗಮನಕ್ಕೆ‌ ತರಲಾಯಿತು. ಆಗ ರಾಯಬಾಗ ತಹಸೀಲ್ದಾರ ಭಜಂತ್ರಿ ಅವರು ಬೆಂಗಳೂರಿನಿಂದ ಮಾತ್ರೆಗಳನ್ನು ತಂದು ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ. ಅವರ ಋಣ ಯಾವತ್ತು ಮರೆಯುವುದಿಲ್ಲ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com