ಕೊರೋನಾ ವಾರಿಯರ್ಸ್ ಗೆ ಪುಷ್ಪಾರ್ಚನೆ ಮೂಲಕ ಗೌರವಿಸಿದ ಸಚಿವ ಸುರೇಶ್ ಕುಮಾರ್!

ದಿನದಿಂದ ದಿನಕ್ಕೆ ಕೊರೋನಾ ತಂದೊಡ್ಡುತ್ತಿರುವ ಬಹುಮುಖಿ ಸವಾಲುಗಳನ್ನು ಎದುರಿಸಲು ಪ್ರತಿಯೊಬ್ಬರು ತಮ್ಮ  ಆಚಾರ-ವಿಚಾರಗಳಲ್ಲಿ‌ ಸಕಾರಾತ್ಮಕ ಬದಲಾವಣೆ ತಂದುಕೊಳ್ಳಬೇಕಾದ ಅಗತ್ಯವಿದೆ ಎಂದು  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ
ಕೊರೋನಾ ಯೋಧರಿಗೆ ಸನ್ಮಾನ
ಕೊರೋನಾ ಯೋಧರಿಗೆ ಸನ್ಮಾನ
Updated on: 

ಬೆಂಗಳೂರು: ದಿನದಿಂದ ದಿನಕ್ಕೆ ಕೊರೋನಾ ತಂದೊಡ್ಡುತ್ತಿರುವ ಬಹುಮುಖಿ ಸವಾಲುಗಳನ್ನು ಎದುರಿಸಲು ಪ್ರತಿಯೊಬ್ಬರು ತಮ್ಮ  ಆಚಾರ-ವಿಚಾರಗಳಲ್ಲಿ‌ ಸಕಾರಾತ್ಮಕ ಬದಲಾವಣೆ ತಂದುಕೊಳ್ಳಬೇಕಾದ ಅಗತ್ಯವಿದೆ ಎಂದು  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ

ರಾಜಾಜಿನಗರದ  ಭಾಷ್ಯಂ ವೃತ್ತದಲ್ಲಿ ಕೊರೊನಾ ಕರ್ತವ್ಯದಲ್ಲಿ ತೊಡಗಿರುವ ಆಶಾ ಕಾರ್ಯಕರ್ತೆಯರು,  ಆರೋಗ್ಯ, ಪೊಲೀಸ್ ಸಿಬ್ಬಂದಿ ಮತ್ತು ಪೌರ ಕಾರ್ಮಿಕರನ್ನು ಪುಷ್ಪಾರ್ಚನೆ ಮೂಲಕ‌   ಗೌರವಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ವೈಯಕ್ತಿಕ‌ ಸ್ವಚ್ಛತೆ, ಸಮುದಾಯ ಸ್ವಚ್ಛತೆಗೆ ಮಹತ್ವ ಕೊಡುವುದರ ಜೊತೆಗೆ ಸಾಮಾಜಿಕ ಸ್ವಾಸ್ಥ್ಯ ಕೂಡಾ ಮುಖ್ಯ ಎಂಬುದನ್ನು ಮನಗಾಣಬೇಕು ಎಂದರು.

ಕೊರೋನಾ ಮೂರನೇ  ಮಹಾಯುದ್ಧವಾಗಿದ್ದು, ಇಡೀ ವಿಶ್ವ ಇದರ ವಿರುದ್ಧ ಸಮರ ಸಾರುತ್ತಿದೆ. ಹೀಗಾಗಿ   ನಾವೆಲ್ಲರೂ ಕೊರೊನಾಕ್ಕಿಂತ ಮುಂಚಿನ ದಿನಗಳು ಮತ್ತು ನಂತರದ ದಿನಗಳಿಗೆ ಹೋಲಿಕೆ ಆಗುವ  ಜೀವನಶೈಲಿ ಬದಲಾಯಿಸಿಕೊಳ್ಳಬೇಕು ಎಂದರು.

ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅನಿಲ್ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com