10 ಸಾವಿರ ವಲಸೆ ಕಾರ್ಮಿಕರನ್ನು ಹೊತ್ತೊಯ್ದ 7 ಶ್ರಮಿಕ್ ವಿಶೇಷ ರೈಲು

ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಿಲುಕಿಕೊಂಡಿದ್ದ 10 ಸಾವಿರ ವಲಸೆ ಕಾರ್ಮಿಕರನ್ನು ಶ್ರಮಿಕ್ ವಿಶೇಷ ರೈಲಿನಲ್ಲಿ  ದೇಶದ ವಿವಿಧ ರಾಜ್ಯಗಳಿಗೆ ಕಳುಹಿಸಲಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಿಲುಕಿಕೊಂಡಿದ್ದ 10 ಸಾವಿರ ವಲಸೆ ಕಾರ್ಮಿಕರನ್ನು ಶ್ರಮಿಕ್ ವಿಶೇಷ ರೈಲಿನಲ್ಲಿ  ದೇಶದ ವಿವಿಧ ರಾಜ್ಯಗಳಿಗೆ ಕಳುಹಿಸಲಾಗುತ್ತಿದೆ. ಮೈಸೂರು ರೈಲ್ವೆ ವಿಭಾಗದಿಂದ ಬಿಹಾರದ ಮೋತಿಹರಿ ರೈಲು ನಿಲ್ದಾಣ ಕ್ಕೆ ರೈಲು ಹೊರಟಿತು, ನೈರುತ್ಯ ರೈಲು ವಿಭಾವು  ವಲಸೆ ಕಾರ್ಮಿಕರಿಗಾಗಿ ಸುಮಾರು 34 ವಿಶೇಷ  ರೈಲುಗಳ ವ್ಯವಸ್ಥೆ ಮಾಡಿದೆ.

ಸುಬ್ರಮಣ್ಯ ರಸ್ತೆಯಲ್ಲಿರುವ ಮಂಗಳೂರು ರೈಲು ನಿಲ್ದಾಣದಿಂದ ಸುಮಾರು 1,428 ಪ್ರಯಾಣಿಕರನ್ನು ಹೊತ್ತ ರೈಲು ಕಬಕ್ಕಪುತ್ತೂರಿನಿಂದ ಹೊರಟಿತು. ಬೆಂಗಳೂರು ವಲಯದಿಂದ ಚಿಕ್ಕಬಾಣವಾರ ರೈಲು ನಿಲ್ದಾಣದಿಂದ ಐದು ರೈಲುಗಳು ಸಂಚರಿಸುತ್ತವೆ.

8,617 ಪ್ರಯಾಣಿಕರು ಈ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರಿನಿಂದ ಹೊರಟ ರೈಲಿನಲ್ಲಿ ಪ್ರಯಾಣ ಬೆಳೆಸಿದ ಪ್ರಯಾಣಿಕರು ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೂಗಿದರು,
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com