ರಾಜ್ಯದಲ್ಲಿ ಮೇ 17ರ ನಂತರ ಜಿಮ್, ಹೋಟೆಲ್, ಪ್ರವಾಸೋದ್ಯಮಕ್ಕೆ ಮುಕ್ತ ಅವಕಾಶ ಸಾಧ್ಯತೆ

ಮೂರನೆ ಹಂತದ ಲಾಕ್ಡೌನ್ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ಕ್ರೀಡಾ ಇಲಾಖೆಯಡಿ ಬರುವ ಫಿಟ್ನೆಸ್ ಸೆಂಟರ್ ಗಳು, ಜಿಮ್ ಗಳು ಮತ್ತು ಗಾಲ್ಫ್ ಕ್ಲಬ್ ಚಟುವಟಿಕೆಗಳಿಗೆ ಅವಕಾಶಮಾಡಿ ಕೊಡುವುದಾಗಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ. 
ಸಿಟಿ ರವಿ
ಸಿಟಿ ರವಿ

ಬೆಂಗಳೂರು: ಮೂರನೆ ಹಂತದ ಲಾಕ್ಡೌನ್ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ಕ್ರೀಡಾ ಇಲಾಖೆಯಡಿ ಬರುವ ಫಿಟ್ನೆಸ್ ಸೆಂಟರ್ ಗಳು, ಜಿಮ್ ಗಳು ಮತ್ತು ಗಾಲ್ಫ್ ಕ್ಲಬ್ ಚಟುವಟಿಕೆಗಳಿಗೆ ಅವಕಾಶಮಾಡಿ ಕೊಡುವುದಾಗಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ. 

ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರಿಗೆ ಅವರು ಈ ವಿಷಯ ತಿಳಿಸಿದರು. 

ಇದೆ 17ರ ನಂತರ ರಾಜ್ಯದಲ್ಲಿ ಕ್ರೀಡಾ ಇಲಾಖೆಯಡಿ ಬರುವ ಫಿಟ್ನೆಸ್ ಸೆಂಟರ್ ಗಳು, ಜಿಮ್ ಗಳನ್ನ ತೆರೆಯಲು ಅವಕಾಶ ನೀಡುವಂತೆ ಮನವಿ ಮಾಡಿದ್ದು, ಇದಕ್ಕೆ ಸಕಾರಾತ್ಮ ಪ್ರತಿಕ್ರಿಯೆ ದೊರಕಿದೆ ಎಂದು ಹೇಳಿದರು. 

ಲವ್ ಯುವರ್ ನೆಟೀವ್ ಎಂಬ ಹೊಸ ಚಿಂತನೆಯೊಂದಿಗೆ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗುವುದು ಎಂದರು. 

ಹೊಟೇಲ್ ಗಳನ್ನು ತೆರೆಯಲು ಅವಕಾಶ ಕೇಳಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಈ ಹೊಟೇಲ್ ಗಳು ಸೇವೆ ಆರಂಭಿಸಲು ಮನವಿ ಮಾಡಲಾಗಿದೆ. 17 ರ ನಂತರ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ ಎಂದೂ ಸಚಿವರು ಹೇಳಿದರು. 

ಕೊರೋನಾ ಸಂಕಷ್ಟ ಸಮಯದಲ್ಲಿ ಪ್ರಧಾನ ಮಂತ್ರಿಗಳು ದೇಶದಲ್ಲೇ ದೊಡ್ಡ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಅದರ ಉಪಯೋಗವನ್ನು ರಾಜ್ಯವೂ ಪಡೆದುಕೊಳ್ಳಲಿದೆ ಎಂದರು. 

ಪ್ರತಿಪಕ್ಷಗಳು ಈಗಲೂ ಟೀಕೆ ಮಾಡಿದರೆ ಅದು ರಾಜಕೀಯ ಎಂಬುದು ಸಾಭೀತಾಗಲಿದೆ ಎಂದು ಪರೋಕ್ಷವಾಗಿ ತಿರುಗೇಟು ನೀಡಿದರು.

5ನೇ ಹಣಕಾಸು ಯೋಜನೆಯಡಿ ಕೆಲವು ರಾಜ್ಯಗಳಿಗೆ ಅನುದಾನ ನೀಡಿದ ವಿಚಾರದಲ್ಲಿ ಪ್ರತಿಪಕ್ಷಗಳ ಟೀಕೆಗೆ ಸಚಿವರು ಉತ್ತರಿಸಿ, ಸಂಕಷ್ಟ ಹೆಚ್ಚು ಇರುವ ರಾಜ್ಯಗಳಿಗೆ ಅನುದಾನ ಕೊಡಲಾಗಿದೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಕೊರೋನಾದಿಂದ ಹೆಚ್ಚು ಸಮಸ್ಯೆ ಆಗಿದೆ. ಇದರಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ, ಶೋಬೆಯೂ ಅಲ್ಲ ಎಂದು ಕೇಂದ್ರದ ತೀರ್ಮಾನವನ್ನು ಸಚಿವರು ಬಲವಾಗಿ ಸಮರ್ಥನೆ ಮಾಡಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com