ಕೋವಿಡ್-19 ಎಫೆಕ್ಟ್: ಶೇ. 70 ರಷ್ಟು ಜನರು ಸಾರ್ವಜನಿಕ ಸಾರಿಗೆ ಬಳಕೆಗೆ ಹಿಂದೇಟು- ಸಮೀಕ್ಷೆ
ಬೆಂಗಳೂರು:ಹೊಸ ಸಮೀಕ್ಷೆಯೊಂದರ ಪ್ರಕಾರ, ಲಾಕ್ ಡೌನ್ ಮುಗಿದ ನಂತರ ಶೇ. 70ಕ್ಕೂ ಹೆಚ್ಚು ಜನರು ಸಾರ್ವಜನಿಕ ಸಾರಿಗೆಯಿಂದ ದೂರ ಉಳಿಯಲು ಬಯಸಿದರೆ ಶೇ. 62 ರಷ್ಟು ಜನರು ಓಲಾ, ಉಬರ್ ನಂತರ ಕ್ಯಾಬ್ ಸೇವೆ ಪಡೆಯುವ ಆಪ್ ಬಳಸದಿರಲು ಒಲವು ವ್ಯಕ್ತಪಡಿಸಿದ್ದಾರೆ.
ಮಾರುಕಟ್ಟೆ ಸಂಶೋಧನೆ ಮತ್ತು ವಿಶ್ಲೇಷಣಾ ಸಂಸ್ಥೆ ವೆಲಾಸಿಟಿ ಎಂಆರ್ ನಡೆಸಿದ ಸಮೀಕ್ಷೆಯ ಪ್ರಕಾರ ಶೇ. 71 ರಷ್ಟು ಜನರು ಶಾಫಿಂಗ್ ಮಾಲ್ ಮತ್ತು ಸೂಪರ್ ಮಾರ್ಕೆಟ್ ಬಳಕೆ ಕಡಿಮೆ ಮಾಡಲು ಬಯಸಿದರೆ ಶೇ. 80 ರಷ್ಟು ಜನರು ಆನ್ ಲೈನ್ ಶಾಫಿಂಗ್ ಮುಂದುವರೆಯಲು ಬಯಸಿದ್ದಾರೆ.
ಕೋವಿಡ್- 19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಖಾಸಗಿ ಕ್ಷೇತ್ರದಲ್ಲಿ ಶೇ. 53 ರಷ್ಟು ಉದ್ಯೋಗ ಸುರಕ್ಷತೆಯ ಭೀತಿ ಕಾಡಲಿದ್ದು, ಶೇ. 50 ರಷ್ಟು ನಿರುದ್ಯೋಗ ಪ್ರಮಾಣ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಲಾಗಿದೆ.
ಮುಂದಿನ ತಿಂಗಳಿನಿಂದ ಒಂದು ವರ್ಷದವರೆಗೂ ಚಿನ್ನ ಹಾಗೂ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಲು ಶೇ. 47 ರಷ್ಟು ಜನರು ಚಿಂತನೆ ನಡೆಸಿರುವುದು ನಮ್ಮ ಸಮೀಕ್ಷೆಯಲ್ಲಿ ತಿಳಿದುಬಂದಿದೆ ಎಂದು ವೆಲಾಸಿಟಿ ಎಂಆರ್ ಸಿಇಒ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಜಸಾಲ್ ಶಾ ತಿಳಿಸಿದ್ದಾರೆ.
ಶೇ, 77 ರಷ್ಟು ಜನರು ಆರೋಗ್ಯ ಸೇತು ಬಳಸಲು ಒಲವು ವ್ಯಕ್ತಪಡಿಸಿದ್ದಾರೆ. ಸಾಂಕ್ರಾಮಿಕ ರೋಗ ಅಂತ್ಯವಾದರೂ ಸಾಮಾಜಿಕ ಅಂತರ ನಿಯಮ ಪಾಲಿಸಲು ಹಾಗೂ ಕೈಗಳನ್ನು ನಿರಂತರವಾಗಿ ಶ್ವಚ್ಚಗೊಳಿಸಲು ಶೇ. 57 ರಷ್ಟು ಮಂದಿ ಒಲವು ವ್ಯಕ್ತಪಡಿಸಿದ್ದಾರೆ.
ಲಾಕ್ ಡೌನ್ ನಂತರ ಶೇ. 90 ರಷ್ಟು ಮಂದಿ ಡಿಜಿಟಲ್ ಪಾವತಿಯತ್ತ ಹೆಚ್ಚಿನ ಆಸ್ತಕ್ತಿ ವಹಿಸುವ ಸಾಧ್ಯತೆ ಇದೆ. ಮದ್ಯಪಾನ ಹಾಗೂ ಸಿಗರೇಟ್ ಅಲಭ್ಯತೆಯಿಂದ ಸಾಕಷ್ಟು ಪ್ರಯೋಜನವಾಗಿರುವುದಾಗಿ ಶೇ. 80 ರಷ್ಟು ಜನರು ಪ್ರತಿಕ್ರಿಯಿಸಿದ್ದಾರೆ. ವರ್ಕ್ ಫ್ರಮ್ ಹೋಮ್ ಒಳೆಯದು ಎಂದು ಶೇ.74 ರಷ್ಟು ಜನರು ಪ್ರತಿಕ್ರಿಯಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ