ಬೆಂಗಳೂರು: ಶುಲ್ಕ ಹೆಚ್ಚಳ, ಕಾರಣ ಕೇಳಿ ವಿಬ್ ಗಯಾರ್ ಖಾಸಗಿ ಶಾಲೆಗೆ ನೋಟಿಸ್ ಜಾರಿ

ಖಾಸಗಿ ಶಾಲಾ ಆಡಳಿತ ಮಂಡಳಿಗಳು ಶುಲ್ಕ ಹೆಚ್ಚಳ ಮಾಡಬಾರದು ಎಂಬ ಆದೇಶವನ್ನು ಧಿಕ್ಕರಿಸಿರುವುದು ಆಶಿಸ್ತಿನ ಪರಮಾವಧಿಯಾಗಿದ್ದು, ಶುಲ್ಕ ಹೆಚ್ಚಿಸಿದ ಬೆಂಗಳೂರಿನ ವಿಬ್ ಗಯಾರ್ ಶಾಲೆ ಸೇರಿದಂತೆ ಪೋಷಕರಿಗೆ ಅನಗತ್ಯವಾಗಿ ಈ ಮೇಲ್ ಮೂಲಕ ಮೇಜೇಸ್ ಕಳುಹಿಸಿ ಶುಲ್ಕ ವಸೂಲಿಗೆ ಮುಂದಾದ ಕೆಲವು ಖಾಸಗಿ ಶಾಲೆಗಳಿಗೆ ರಾಜ್ಯ ಸರಕಾರ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ವಿಬ್ ಗಯಾರ್ ಶಾಲೆ
ವಿಬ್ ಗಯಾರ್ ಶಾಲೆ

ಬೆಂಗಳೂರು: ಖಾಸಗಿ ಶಾಲಾ ಆಡಳಿತ ಮಂಡಳಿಗಳು ಶುಲ್ಕ ಹೆಚ್ಚಳ ಮಾಡಬಾರದು ಎಂಬ ಆದೇಶವನ್ನು ಧಿಕ್ಕರಿಸಿರುವುದು ಆಶಿಸ್ತಿನ ಪರಮಾವಧಿಯಾಗಿದ್ದು, ಶುಲ್ಕ ಹೆಚ್ಚಿಸಿದ ಬೆಂಗಳೂರಿನ ವಿಬ್ ಗಯಾರ್ ಶಾಲೆ ಸೇರಿದಂತೆ ಪೋಷಕರಿಗೆ ಅನಗತ್ಯವಾಗಿ ಈ ಮೇಲ್ ಮೂಲಕ ಮೇಜೇಸ್ ಕಳುಹಿಸಿ ಶುಲ್ಕ ವಸೂಲಿಗೆ ಮುಂದಾದ ಕೆಲವು ಖಾಸಗಿ ಶಾಲೆಗಳಿಗೆ ರಾಜ್ಯ ಸರಕಾರ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.

ಕೊರೋನಾ ಮತ್ತು ಲಾಕ್ಡೌನ್ ಕಾರಣ ರಾಜ್ಯದ ಜನತೆ ಬಹಳ ಸಂಕಷ್ಟದಲ್ಲಿ ಇರುವ ಸಮಯದಲ್ಲಿ ಶುಲ್ಕ ಹೆಚ್ಚಳ ಮಾಡಿ ಜನರ ಶೋಷಣೆಗೆ ಯಾವ ಖಾಸಗಿ ಶಾಲೆ ಮುಂದಾಗಬಾರದು ಎಂದು ಸರ್ಕಾರ ಬಹಳ ಹಿಂದೆಯೇ ಸುತ್ತೊಲೆ ಹೊರಡಿಸಿತ್ತು. ಆದರೂ ಅದನ್ನು ಕೆಲವು ಖಾಸಗಿ ಶಾಲೆಗಳು ಮಾನ್ಯ ಮಾಡದೆ ಪೋಷಕರ ಸುಲಿಗೆ ಮಾಡ ಹೊರಟಿರುವುದನ್ನು ಸಹಿಸಲಾಗದು ಎಂದು ನೋಟಿಸ್ ನಲ್ಲಿ ಎಚ್ಚರಿಕೆ ನೀಡಲಾಗಿದೆ.

ಈ ಪತ್ರ ತಲುಪಿದ ಮೂರು ದಿನಗಳ ಒಳಗೆ ವಿಬ್ ಗಯಾರ್ ಶಾಲೆ ಪ್ರಾಂಶುಪಾಲರು ಮತ್ತು ಹೆಚ್ಚು ಶುಲ್ಕ ವಸೂಲು ಮಾಡುತ್ತಿರುವ ಇತರೆ ಶಾಲೆಗಳ ಆಡಳಿತ ಮಂಡಳಿಗಳು ಸೂಕ್ತ ಸಮಾಜಾಯಿಸಿ ಕೊಡಬೇಕು. ತಪ್ಪಿದಲ್ಲಿ ಶಾಲೆಗಳ ವಿರುದ್ದ ಶಿಸ್ತು ಕ್ರಮ ಜರುಗಿಸುವುದು ಅನಿವಾರ್ಯವಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರಣ ಕೇಳಿ ಖಾಸಗಿ ಶಾಲೆಗಳಿಗೆ ನೋಟಿಸ್ ಜಾರಿಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com