ಜಾರ್ಖಾಂಡ್'ನಿಂದ ಬಂದು ಕ್ವಾರಂಟೈನ್'ನಲ್ಲಿರದೆ ಬೇಕಾಬಿಟ್ಟಿ ಓಡಾಡಿದ ಸೋಂಕಿತರು: ಅಥಣಿಯಲ್ಲಿ ಹೆಚ್ಚಿದ ಆತಂಕ

20 ದಿನಗಳ ಹಿಂದೆಯೇ ಜಾರ್ಖಾಂಡ್'ಗೆ ಹೋಗಿ ಬಂದ ಸುಮಾರು 40 ಜನರ ಪೈಕಿ 13 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಅಥಣಿ ತಾಲೂಕಿನಲ್ಲಿ ಮಂಗಳವಾರ ಒಮ್ಮೆಲೆ ಕೊರೋನಾ ಸ್ಫೋಟಗೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: 20 ದಿನಗಳ ಹಿಂದೆಯೇ ಜಾರ್ಖಾಂಡ್'ಗೆ ಹೋಗಿ ಬಂದ ಸುಮಾರು 40 ಜನರ ಪೈಕಿ 13 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಅಥಣಿ ತಾಲೂಕಿನಲ್ಲಿ ಮಂಗಳವಾರ ಒಮ್ಮೆಲೆ ಕೊರೋನಾ ಸ್ಫೋಟಗೊಂಡಿದೆ. 

ಇವರೆಲ್ಲರೂ ಬೆಳಗಾವಿ ಜಿಲ್ಲೆಯ ಅಥಣಿ ಮತಕ್ಷೇತ್ರದ ಸವದಿ ಗ್ರಾಮದ 8 ಜನರು, ನಂದಗಾಂವ ಗ್ರಾಮದ 3 ಜುಂಜುರವಾಡ ಒಬ್ಬರಿಗೆ ಸೋಂಕು ದೃಢಪಟ್ಟಿದೆ.ವಿಚಿತ್ರವೆಂದರೆ ಅನ್ಯ ರಾಜ್ಯದಿಂದ ಬಂದ ಇವರೆಲ್ಲಾ ಕ್ವಾರಂಟೈನ್ ನಲ್ಲಿರಬೇಕಿತ್ತು. ಆದರೆ, ಇವರು ಎಲ್ಲೆಂದರಲ್ಲಿ ತಿರುಗಾಡಿರುವ ಮಾಹಿತಿ ತಾಲೂಕು ಆಡಳಿತಕ್ಕೆ ಲಭ್ಯವಾಗಿದ್ದು, ಈ ಬೆಳವಣಿಗೆ ಇದೀಗ ಅಥಣಿ ಜನತೆಯನ್ನು ಭಾರೀ ಆತಂಕಕ್ಕೊಳಗಾಗುವಂತೆ ಮಾಡಿದೆ. 

ಮಂಗಳವಾರ ಮಧ್ಯಾಹ್ನದಿಂದ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಆಯಾ ಗ್ರಾಮಸ್ಥರಲ್ಲಿ ಒಂದು ರೀತಿಯ ನಡುಕಉಂಟಾಗಿತ್ತು. ಇವರು ಜಾರ್ಖಂಡದಿಂದ ವಾಪಸಾದ ಮೇಲೆ ತಾಲೂಕು ಆಡಳಿತ ಸಾಂಸ್ಥಿಕ ಕ್ವಾರಂಟೈನ್'ಗೆ ಸಿದ್ಧತೆ ನಡೆಸಿತ್ತು. ಆದರೆ ರಾಜಕೀಯ ಪ್ರಭಾವವೋ ಏನೋ ಇವರೆಲ್ಲರನ್ನೂ ಹೋಂ ಕ್ವಾರಂಟೈನ್'ಗೆ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಈ ರಾಜಕೀಯ ಹಿನ್ನೆಲೆಯುಳ್ಲವರು ಯಾರಿರಬಹುದು ಎಂಬ ಚರ್ಚೆ ಕೂಡ ಇದೀಗ ಶುರುವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com