ಪಾದರಾಯನಪುರ ಪಾಲಿಕೆ ಸದಸ್ಯ ಇಮ್ರಾನ್ ಪಾಷಾ ಗೆ ಕೊರೋನಾ ಪಾಸಿಟಿವ್: ಪಾಲಿಕೆ ಅಧಿಕಾರಿಗಳು ಪೊಲೀಸರಿಗೆ ಸೇಂಕಿನ ಆತಂಕ

ಪಾದರಾಯನಪುರ ವಾರ್ಡ್'ನ ಜೆಡಿಎಸ್ ಪಕ್ಷದ ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾರಲ್ಲಿ ಶುಕ್ರವಾರ ಕೊರೋನಾ ವೈರಸ್ ಇರುವುದು ದೃಢಪಟ್ಟಿದ್ದು, ಇದೀಗ ಜೆಜೆ ನಗರ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳಲ್ಲಿಯೂ ಕೊರೋನಾ ವೈರಸ್ ಭೀತಿ ಶುರುವಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪಾದರಾಯನಪುರ ವಾರ್ಡ್'ನ ಜೆಡಿಎಸ್ ಪಕ್ಷದ ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾರಲ್ಲಿ ಶುಕ್ರವಾರ ಕೊರೋನಾ ವೈರಸ್ ಇರುವುದು ದೃಢಪಟ್ಟಿದ್ದು, ಇದೀಗ ಜೆಜೆ ನಗರ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳಲ್ಲಿಯೂ ಕೊರೋನಾ ವೈರಸ್ ಭೀತಿ ಶುರುವಾಗಿದೆ. 

ರಾಜ್ಯದಲ್ಲಿ ಜನಪ್ರತಿನಿಧಿಯೊಬ್ಬರಲ್ಲಿ ವೈರಸ್ ದೃಢಪಟ್ಟಿರುವುದು ಇದೇ ಮೊದಲಾಗಿದೆ. ಈ ನಡುವೆ ಇಮ್ರಾನ್ ಪಾಷಾ ಅವರೊಂದಿಗೆ ಸಂಪರ್ಕದಲ್ಲಿದ್ದ ಅವರ ಪತ್ನಿ, ಇಬ್ಬರು ಮಕ್ಕಳು, ಕಾರು ಚಾಲಕ, ಮನೆ ಕೆಲಸದ ಸಿಬ್ಬಂದಿ, ಬೆಂಬಲಿಗರು ಸೇರಿದಂತೆ ಒಟ್ಟು 15ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. 

ಪಾದರಾಯನಪುರ ಸೀಲ್'ಡೌನ್ ಮಾಡಿದ ಬಳಿಕ ಕೂಡ ಪಾಷಾ ವಾರ್ಡ್'ನ ಸೋಂಕಿತ ಪ್ರದೇಶದಲ್ಲಿ ಓಡಾಟ ನಡೆಸಿದ್ದರು. ಹೀಗಾಗಿ ಸೋಂಕು ತಗುಲಿರಬಹುದು ಎಂದು ಹೇಳಲಾಗುತ್ತಿದೆ. 

ಪಾದರಾಯನಪುರದ ವಾರ್ಡ್ ನಲ್ಲಿ ಕೊರೋನಾ ಸೋಂಕು ನಿಯಂತ್ರಿಸುವ ಕುರಿತು ಬಿಬಿಎಂಪಿ ಪಶ್ಚಿಮ ವಲಯದ ವಿಶೇಷ ಆಯುಕ್ತರು, ಜಂಟಿ ಆಯುಕ್ತರು, ಆರೋಗ್ಯ ಅಧಿಕಾರಿಗಳು, ಜೆಜೆ ನಗರದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿದ್ದರು. ಈ ಸಭೆಗೆ ಪಾಲಿಕೆ ಸದಸ್ಯನಾಗಿದ್ದ ಕಾರಣ ಇಮ್ರಾನ್ ಪಾಷಾ ಅವರು ಕೂಡ ಪಾಲ್ಗೊಂಡಿದ್ದರು. ಕಳೆದೊಂದು ವಾರದಲ್ಲಿ ಇಮ್ರಾನ್ ಅವರು ಮೂರು ಬಾರಿ ಬಿಬಿಎಂಪಿ ಕೇಂದ್ರ ಕಚೇರಿಗೂ ಭೇಟಿ ನೀಡಿದ್ದು, ಇದೀಗ ಅಧಿಕಾರಿಗಳಲ್ಲಿಯೂ ಕೊರೋನಾ ಭೀತಿ ಶುರುವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com